ಅವಳಿ ನಗರದಲ್ಲಿ 32 ಕೊರೊನಾ ವರದಿ ನೆಗೆಟಿವ್, 1 ಪಾಸಿಟಿವ್: ಆರೋಗ್ಯ ಇಲಾಖೆ
ಧಾರವಾಡ ಜಿಲ್ಲೆಯಲ್ಲಿ 32 ಮಂದಿಯ ಕೊರೊನಾ ವರದಿ ನೆಗೆಟಿವ್ ಬಂದಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೊನಾ ಸುದ್ದಿ
ಧಾರವಾಡ: ಆರೋಗ್ಯ ಇಲಾಖೆ ಜಿಲ್ಲೆಯ ಕೊರೊನಾ ವೈರಸ್ ವರದಿ ಬಿಡುಗಡೆಗೊಳಿಸಿದ್ದು, ಇದುವರೆಗೆ 437 ಜನರ ಮೇಲೆ ನಿಗಾ ವಹಿಸಲಾಗಿದೆ. ಸ್ವಂತ ಮನೆಗಳಲ್ಲಿ 14 ದಿನಗಳ ಕಾಲ 266 ವ್ಯಕ್ತಿಗಳು ಕ್ವಾರಂಟೈನ್ ಪೂರೈಸಿದ್ದಾರೆ. ಆಸ್ಪತ್ರೆಯಲ್ಲಿ 2 ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. 14 ದಿನಗಳ ಐಸೋಲೇಷನ್ ಪೂರ್ಣಗೊಳಿಸಿದ ವ್ಯಕ್ತಿಗಳು 155 ಹಾಗೂ 28 ದಿನಗಳ ಐಸೋಲೇಷನ್ ಪೂರ್ಣಗೊಳಿಸಿದ ವ್ಯಕ್ತಿಗಳು 14. ಒಟ್ಟು 38 ಸ್ಯಾಂಪಲ್ ಟೆಸ್ಟ್ ಮಾಡಿಸಲಾಗಿದ್ದು, ಅದರಲ್ಲಿ ಒಟ್ಟು 32 ನೆಗೆಟಿವ್ ವರದಿ ಬಂದಿವೆ. 1 ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇನ್ನೂ 5 ವರದಿಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

Last Updated : Mar 25, 2020, 11:05 PM IST