ಧಾರವಾಡ: ಎಸ್.ಡಿ.ಎಂ. ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸ್ಪೋಟ ಹಿನ್ನೆಲೆ ಮತ್ತೆ 22 ಹೊಸ ಕೊರೊನಾ ಪ್ರಕಣರಣಗಳು ಪತ್ತೆಯಾಗಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ 182 ಹಾಗೂ ಹೊಸ 22 ಪ್ರಕರಣಗಳು ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 204ಕ್ಕೇರಿದೆ.
ಉಳಿದ ತಪಾಸಣಾ ವರದಿಗಳು ಬರಬೇಕಿದ್ದು. ಅವುಗಳ ಮಾಹಿತಿ ಇಂದು ದೊರೆಯುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈಗಾಗಲೇ ಎಸ್.ಡಿ.ಎಂ ಸುತ್ತಮುತ್ತಲಿನ ಶಾಲೆ, ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಕೊರೊನಾ ಪಾಸಿಟಿವ್ ಕಂಡು ಬಂದಿರುವ ವಸತಿ ನಿಲಯ ಸೇರಿದಂತೆ ಎಸ್.ಡಿ.ಎಂ ಆಸ್ಪತ್ರೆ ಸುತ್ತಮುತ್ತಲು ಸ್ಯಾನಿಟೈಸಿಂಗ್ ಕಾರ್ಯ ನಡೆಯುತ್ತಿದೆ.