ದಾವಣಗೆರೆ: ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟು ಯುವಕನೋರ್ವ ನೇಣಿಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. ಯುವರಾಜ (26) ನೇಣಿಗೆ ಶರಣಾದ ಯುವಕ.
ಮೃತ ಯುವಕ ಸಾವಿಗೂ ಮುನ್ನ ಕಾರಣವನ್ನು ಅವನೇ ಹೇಳಿಕೊಂಡಿದ್ದಾನೆ. ಮೃತ ಯುವರಾಜ್ ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಮಹಿಳೆಯೊಬ್ಬರ ಮನೆಗೆ ಹೋಗಿದ್ದನಂತೆ. ಮಹಿಳೆಯ ಮನೆಗೆ ಹೋದ ವಿಚಾರವಾಗಿ ಗ್ರಾಮದ ಹಾಲಿನ ಡೈರಿ ಸಿದ್ದಪ್ಪ ಮೂಗು ತೂರಿಸಿದ್ದಾನೆ. ಅಲ್ಲಿ ಹೋಗಿ ಗಲಾಟೆ ಮಾಡಿ ಹೊಡೆದಿದ್ದಕ್ಕೆ ಯುವರಾಜ್ ಬೇಸರಗೊಂಡಿದ್ದನಂತೆ. ಈ ವಿಚಾರವಾಗಿ ಮನನೊಂದು ಆತ ನೇಣಿಗೆ ಶರಣಾಗುವ ಮುನ್ನ ನನ್ನ ಆತ್ಮಹತ್ಯೆಗೆ ಡೈರಿ ಸಿದ್ದಪ್ಪ ಕಾರಣ ಎಂದು ಆರೋಪಿಸಿದ್ದಾನೆ.
ಅನೈತಿಕ ಸಂಬಂಧದ ಹಿನ್ನೆಲೆ ಘರ್ಷಣೆ ಶಂಕೆ.. ಅನೈತಿಕ ಸಂಬಂಧದ ಹಿನ್ನೆಲೆ ಘರ್ಷಣೆಯಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಗ್ರಾಮದ ಮಹಿಳೆಯೊಂದಿಗೆ ಯುವರಾಜ್ ಹಾಗು ಹಾಲಿನ ಡೈರಿ ಸಿದ್ದಪ್ಪರಿಗೆ ಅನೈತಿಕ ಸಂಬಂಧ ಇರುವ ಶಂಕೆ ವ್ಯಕ್ತವಾಗಿದೆ.
ಇದೇ ಮಹಿಳೆ ಮನೆಗೆ ಯುವರಾಜ್ ಹೋಗಿದ್ದಕ್ಕೆ ಇಬ್ಬರ ನಡುವೆ ಘರ್ಷಣೆಯಾಗಿದೆ. ಘರ್ಷಣೆಯಾದ ಬೆನ್ನಲ್ಲೇ ಸಿದ್ದಪ್ಪ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ, ಪ್ರಕರಣ ದಾಖಲಿಸಿಕೊಂಡ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಓದಿ: ಬಿಎಸ್ವೈ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ: ಸಿಎಂ ಬೊಮ್ಮಾಯಿ