ETV Bharat / state

ದಾವಣಗೆರೆಯಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅವಘಡ; ಕುಕ್ಕರ್ ಸಿಡಿದು ಗೃಹಿಣಿಗೆ ಗಂಭೀರ ಗಾಯ - ಈಟಿವಿ ಭಾರತ್ ಕನ್ನಡ ಸುದ್ದಿ

ದಾವಣಗೆರೆಯ ವಿನೋಭ ನಗರದಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಕುಕ್ಕರ್ ಬ್ಲಾಸ್ಟ್ ಆಗಿ ಗೃಹಿಣಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಕ್ಕರ್ ಬ್ಲಾಸ್ಟ್
ಕುಕ್ಕರ್ ಬ್ಲಾಸ್ಟ್
author img

By ETV Bharat Karnataka Team

Published : Nov 23, 2023, 4:43 PM IST

ಕುಕ್ಕರ್ ಬ್ಲಾಸ್ಟ್ ಆಗಿ ಗೃಹಿಣಿಗೆ ಗಂಭೀರ ಗಾಯ

ದಾವಣಗೆರೆ : ಸಿಲಿಂಡರ್ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಕುಕ್ಕರ್ ಸ್ಫೋಟಗೊಂಡ ಪರಿಣಾಮ ಗೃಹಿಣಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಲ್ಲಿನ ವಿನೋಭ ನಗರದಲ್ಲಿ ನಡೆದಿದೆ. ಸ್ಮಿತಾ (54) ಗಂಭೀರವಾಗಿ ಗಾಯಗೊಂಡ ಗೃಹಿಣಿ ಎಂದು ತಿಳಿದುಬಂದಿದೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಮಿತಾ ಅವರು ಸಿಲಿಂಡರ್ ಮೇಲೆ ಅನ್ನ ಮಾಡಲು ಅಕ್ಕಿ ಹಾಕಿ ಕುಕ್ಕರ್ ಇಟ್ಟಿದ್ದಾರೆ. ಈ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಕುಕ್ಕರ್ ಬ್ಲಾಸ್ಟ್​ ಆಗಿದೆ. ಕುಕ್ಕರ್ ಬ್ಲಾಸ್ಟ್ ಆದ ಪರಿಣಾಮ ಅಲ್ಲೇ ಇದ್ದ ಗೃಹಿಣಿ ಸ್ಮಿತಾ ಅವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕುಕ್ಕರ್ ಸ್ಫೋಟದ ಪರಿಣಾಮ ಮನೆಯ ಬಾಗಿಲು, ಕಿಟಕಿಗಳು ಮುರಿದಿದ್ದು, ಸಂಭವಿಸಲಿದ್ದ ಭಾರೀ ಅನಾಹುತ ತಪ್ಪಿದೆ.

ಕುಕ್ಕರ್ ಸ್ಫೋಟಗೊಂಡ ಭಾರಿ ಶಬ್ದಕ್ಕೆ ಅಕ್ಕಪಕ್ಕದ ನಿವಾಸಿಗಳು ಒಮ್ಮೆಲೆ ಗಾಬರಿಯಿಂದ ಮನೆಯತ್ತ ಓಡಿ ಬಂದಿರುವ ಪ್ರಸಂಗ ನಡೆದಿದೆ.‌ ಈ ಕುಕ್ಕರ್ ಸ್ಫೋಟದ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸೋರಿಕೆಯಾಗ್ತಿದ್ದ ಅಡುಗೆ ಅನಿಲವನ್ನು ಬಂದ್ ಮಾಡಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಈ ಘಟನಾ ಸ್ಥಳದಲ್ಲಿ ಆತಂಕದಿಂದ ನೂರಾರು ಜನರು ಜಮಾಯಿಸಿದ್ದರು. ವಿಚಾರ ತಿಳಿದು ಪೊಲೀಸರು ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಬಿಸಿಯೂಟದ ಅಡುಗೆ ಕೊಠಡಿಯಲ್ಲಿ ಕುಕ್ಕರ್​ ಬ್ಲಾಸ್ಟ್ (ಪ್ರತ್ಯೇಕ ಘಟನೆ) : ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ಟಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಅಡುಗೆ ಕೊಠಡಿಯಲ್ಲಿ ಒಲೆಯ ಮೇಲೆ ತೊಗರಿಬೇಳೆ ಬೇಯಿಸಲು ಇಟ್ಟಿದ್ದ ಕುಕ್ಕರ್ ಸ್ಫೋಟಗೊಂಡ ಘಟನೆ (ನವೆಂಬರ್ 9-2023) ಬುಧವಾರ ನಡೆದಿತ್ತು. ಪರಿಣಾಮ ಅಡುಗೆ ಸಿದ್ಧತೆಯಲ್ಲಿ ತೊಡಗಿದ್ದ ಲೋಕಮ್ಮ ಅವರಿಗೆ ಬಿಸಿ ನೀರು ಸಿಡಿದು ಗಾಯವಾಗಿತ್ತು. ಉಳಿದ ಮೂವರು ಮಹಿಳಾ ಅಡುಗೆ ಸಿಬ್ಬಂದಿ ತಕ್ಷಣ ಹೊರಗಡೆ ಬಂದಿದ್ದು, ಅಪಾಯದಿಂದ ಪಾರಾಗಿದ್ದರು.

ಗ್ಯಾಸ್ ಒಲೆ ಮೇಲೆ 20 ಲೀಟರ್ ಕುಕ್ಕರ್‌ನಲ್ಲಿ 3 ಸೇರು ತೊಗರಿಬೇಳೆ ಬೇಯಿಸುತ್ತಿದ್ದಾಗ ವಿಜಿಲ್ ಬಾರದೇ ಏಕಾಏಕಿ ಕುಕ್ಕರ್​ ಸ್ಫೋಟಗೊಂಡಿತ್ತು. ಕೊಠಡಿಯ ಚಾವಣಿ, ಅಕ್ಕಪಕ್ಕದ ಗೋಡೆಗೆ ತೊಗರಿಬೇಳೆ ಸಿಡಿದಿತ್ತು. ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಮಾತನಾಡಿ, ಇಸ್ಕಾನ್ ಅಕ್ಷಯ ಪಾತ್ರೆಯ ಬಿಸಿಯೂಟ ಸೌಲಭ್ಯ ಕಲ್ಪಿಸುವಂತೆ ಬಿಸಿಯೂಟ ನಿರ್ದೇಶಕರಿಗೆ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಶಾಲಾ ಬಿಸಿಯೂಟದ ಅಡುಗೆ ಕೊಠಡಿಯಲ್ಲಿ ಕುಕ್ಕರ್​ ಬ್ಲಾಸ್ಟ್​​.. ಒಬ್ಬ ಸಿಬ್ಬಂದಿಗೆ ಗಾಯ :- ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.