ದಾವಣಗೆರೆ: ವಿದ್ಯುತ್ ಟ್ರಾನ್ಸ್‌ಫಾರಂಗೆ ಸಿಲುಕಿ ಅಸುನೀಗಿದ ಕೋತಿಗೆ ಗ್ರಾ.ಪಂನ ಮುಸ್ಲಿಂ ಸದಸ್ಯರಾದ ಆಸೀಫ್ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದರು. ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ಬಾಡಾ ರಸ್ತೆಯಲ್ಲಿ ಘಟನೆ ನಡೆಯಿತು. ಕೋತಿ ಕಳೇಬರವನ್ನು ಟ್ರಾನ್ಸ್‌ಫಾರಂನಿಂದ ಕೆಳಗಿಳಿಸಿ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ, ಅಂತಿಮ ಸಂಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ:ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಚಮನ್ ಷಾ ವಲಿ ದರ್ಗಾ ಉರುಸ್