ದಾವಣಗೆರೆ : ಸಿದ್ದರಾಮಯ್ಯ ಅವರು ಮಾಡಿದ ಪಾಪಾದ ಕೆಲಸದಿಂದಲೇ ಸೋಲುತ್ತಾರೆ. ಅವರ ಪಾಪದ ಕೊಡ ತುಂಬಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೆಲ ಕಚ್ಚುತ್ತಾರೆ. ವರುಣಾ ಕ್ಷೇತ್ರಕ್ಕೆ ನಮ್ಮ ಪಕ್ಷ ಪ್ರಬಲ ಅಭ್ಯರ್ಥಿಯನ್ನು ಹುಡುಕುತ್ತಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತೇವೆ. ಈಗಾಗಲೇ ಸಿದ್ದರಾಮಯ್ಯ ಅವರಿಗೆ ವರುಣದಿಂದ ಟಿಕೆಟ್ ಘೊಷಣೆಯಾಗಿದ್ದು, ಕೋಲಾರದಲ್ಲಿ ಸಹ ಕಾಂಗ್ರೆಸ್ ಟಿಕೆಟ್ ಸಿದ್ದರಾಮಯ್ಯಗೆ ಸಿಗಬಹುದು. ಅದರೆ, ಅವರು ಎರಡೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸುತ್ತಾರೆ. ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಆಗಿರುವ ಸೋಲು ಇಲ್ಲಿ ಕೂಡ ಆಗುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಈ ಬಾರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಹೋಗುವುದಿಲ್ಲ ಎಂದರು.
ಇದನ್ನೂ ಓದಿ : ನನ್ನ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸಿದರೆ ಜನರೇ ಉಗಿಯುತ್ತಾರೆ : ವರ್ತೂರ್ ಪ್ರಕಾಶ್
ಸಿಎಂ ಆದಾವರು ಕ್ಷೇತ್ರ ಬದಲಾವಣೆ ಮಾಡಲಿಲ್ಲ: ಇಲ್ಲಿಯವರೆಗೂ ಸಿಎಂ ಆದವರು ಕ್ಷೇತ್ರ ಬದಲಾವಣೆ ಮಾಡಲಿಲ್ಲ. ಆದರೆ, ಸಿದ್ದರಾಮಯ್ಯ ಮಾತ್ರ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಅನ್ನಭಾಗ್ಯ ಯೋಜನೆ ಅಕ್ಕಿಗೆ ಹಣ ನೀಡಿದ್ದು, ಅವರ ಅವಧಿಯಲ್ಲಿ ಅತಿ ಹೆಚ್ಚು ಹಗರಣ ಆಗಿದೆ. ಈ ಹಗರಣ ಹೊರ ಬರುತ್ತದೆ ಎಂದು ಲೋಕಾಯುಕ್ತ ಮುಚ್ಚಿ ಹಾಕಿ, ಎಸಿಬಿಯನ್ನು ತೆರೆದು ಅವರ ಕೈ ಕೆಳಗೆ ಇರುವಂತೆ ಮಾಡಿದ್ರು ಎಂದು ಇದೇ ವೇಳೆ ವರ್ತೂರು ಪ್ರಕಾಶ ಆರೋಪಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯರನ್ನು ಬೆಂಬಲಿಸಿ ಕೋಲಾರದಲ್ಲಿ ಕುರುಬ ಸಮಾಜದ ಸಭೆ
ರಾಜ್ಯದಲ್ಲಿ ಭ್ರಷ್ಟ ಸಿಎಂ ಎಂದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ. ವ್ಯಾಪಕವಾಗಿ ಭ್ರಷ್ಟಾಚಾರ ಮಾಡಿ ಶೇ 50ರಷ್ಟು ಕಮಿಷನ್ ಪಡೆದು ಅಧಿಕಾರ ಮಾಡಿದ್ರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ವರ್ಚಸ್ಸು ಮುಗಿದು ಹೋಗಿದೆ ಎಂದ ಅವರು, ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಕಿತ್ತಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಮಾತ್ರ ಕಿತ್ತಾಡೋ ಪ್ರಶ್ನೆ ಬರುತ್ತದೆ. ಅವರು ಅಧಿಕಾರಕ್ಕೆ ಬರೋದಿಲ್ಲ, ಅವರಲ್ಲಿ ಒಗ್ಗಟ್ಟು ಬರೋದಿಲ್ಲ, ಎರಡನೇ ಪಟ್ಟಿ ಬಿಡುಗಡೆ ಮಾಡಿದ ನಂತರ ಅವರ ಪರಿಸ್ಥಿತಿ ಹೇಗಿದೆ ಎಂದು ನೋಡಿ. ಎಷ್ಟು ಜನ ಪಕ್ಷ ಬಿಟ್ಟು ಹೋಗುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಅವರು ಗೆಲ್ಲೋದು ಇಲ್ಲ, ಅವರ ಪಕ್ಷ ಅಧಿಕಾರಕ್ಕೆ ಬರೋದಿಲ್ಲ ಎಂದರು.
ಇದನ್ನೂ ಓದಿ : 'ಕಾಂಗ್ರೆಸ್ ಸೇರೋದಾದರೆ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಾರೆ':ವರ್ತೂರು ಪ್ರಕಾಶ್
ಇನ್ನು ಡಿಕೆಶಿ ಬಗ್ಗೆ ಹೀನಾಯವಾಗಿ ಮಾತನಾಡಿ ಈಗ ಊಲ್ಟಾ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಕುರುಬರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದರು. ಆದರೆ, ಈಗ ಕುರುಬ ಸಮುದಾಯ ಬಿಜೆಪಿ ಪರವಾಗಿದೆ. ಅವರು ಅಧಿಕಾರದಲ್ಲಿದ್ದಾಗ ಕುರುಬರಿಗೆ ಯಾವುದೇ ಒಳಿತು ಮಾಡಿಲ್ಲ, ಕುರುಬ ಸಮಾಜವೇ ಕಾಂಗ್ರೆಸ್ ಅನ್ನು ಸೋಲಿಸುತ್ತದೆ ಎಂದು ಹೇಳಿದರು.