ETV Bharat / state

ದಾವಣಗೆರೆಯಲ್ಲಿ ಸರಣಿ ಅಪಘಾತ: ಪತಿ ಪ್ರಾಣ ಉಳಿಸಲು ಹೊರಟ ಶಿಕ್ಷಕಿ, ಬೈಕ್​​ ಸವಾರ ಸಾವು - etv bharat kannada

ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತದಲ್ಲಿ ಸಂಭವಿಸಿದೆ. ದುರ್ಘಟನೆಯಲ್ಲಿ ಶಿಕ್ಷಕಿ ಹಾಗೂ ಬೈಕ್​ ಸವಾರನೋರ್ವ ಪ್ರಾಣ ಕಳೆದುಕೊಂಡಿದ್ದಾರೆ.

two-died-in-serial-accident-in-davanagere
ದಾವಣಗೆರೆಯಲ್ಲಿ ಸರಣಿ ಅಪಘಾತ: ಪತಿ ಪ್ರಾಣ ಉಳಿಸಲು ಹೊರಟ ಶಿಕ್ಷಕಿ, ಬೈಕ್​​ ಸವಾರ ಸಾವು
author img

By

Published : Sep 16, 2022, 12:00 PM IST

ದಾವಣಗೆರೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 04ರ ಕಲ್ಪನಹಳ್ಳಿ ಬಳಿ ಅಪಘಾತದಲ್ಲಿ ಸಂಭವಿಸಿದ್ದು, ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆ ಶಿಕ್ಷಕಿ ಜ್ಯೋತಿ (43) ಮತ್ತು ಪವಾಡರಂಗವ್ವನಹಳ್ಳಿಯ ಮಂಜುನಾಥ್ (68) ಎಂಬುವರು ಮೃತರಾಗಿದ್ದಾರೆ.

ಶಿಕ್ಷಕಿ ಜ್ಯೋತಿ ಕುಟುಂಬ ಸಮೇತ ತಮಿಳುನಾಡು, ಮದುರೈಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಜ್ಯೋತಿ ಅವರ ಪತಿಗೆ ಹೃದಯಾಘಾತ ಸಂಭವಿಸಿತ್ತು. ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಆ್ಯಂಬುಲೆನ್ಸ್​ ಮೂಲಕ ಕರೆತರಲಾಗುತ್ತಿತ್ತು. ಆ್ಯಂಬುಲೆನ್ಸ್​ ಚಾಲಕ ಟ್ರ್ಯಾಕ್ಟರ್ ಹಿಂದಿಕ್ಕಲು ಯತ್ನಿಸಿದ್ದಾನೆ. ಆಗ ಟ್ರ್ಯಾಲಿಗೆ ಆ್ಯಂಬುಲೆನ್ಸ್ ರಭಸವಾಗಿ​ ಡಿಕ್ಕಿಯಾಗಿದೆ. ಈ ವೇಳೆ ಆ್ಯಂಬುಲೆನ್ಸ್​ನಲ್ಲಿದ್ದ ಶಿಕ್ಷಕಿ ಜ್ಯೋತಿ ಅವರ ತಲೆಗೆ ಬಲವಾದ ಪೆಟ್ಟಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಅವರನ್ನು ಮತ್ತೊಂದು ಆ್ಯಂಬುಲೆನ್ಸ್ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

two died in serial accident in davanagere
ದಾವಣಗೆರೆಯಲ್ಲಿ ಸರಣಿ ಅಪಘಾತ

ಅಪಘಾತದ ರಭಸಕ್ಕೆ ಗಾಬರಿಗೊಂಡು ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ದಾವಣಗೆರೆಗೆ ತೆರಳುತ್ತಿದ್ದ ಪವಾಡರಂಗವ್ವನಹಳ್ಳಿಯ ಮಂಜುನಾಥ್ ಅವರ ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಮಹಮದ್ ಮೀರನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಎಚ್‌ಎಲ್‌ಸಿ ಕಾಲುವೆಗೆ ಉರುಳಿದ ಆಟೋ: ಮತ್ತೊಂದು ಮೃತದೇಹ ಮತ್ತೆ, ಮುಂದುವರೆದ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.