ದಾವಣಗೆರೆ: ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 13 ಜನರು ಸಂಪೂರ್ಣ ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರೋಗಿ ಸಂಖ್ಯೆ 6,575, 16 ವರ್ಷದ ಬಾಲಕ ಹಾಗೂ ರೋಗಿ ಸಂಖ್ಯೆ 6,576, 24 ವರ್ಷದ ಯುವಕ ಇವರು ರೋಗಿ ಸಂಖ್ಯೆ 5,819ರ ಸಂಪರ್ಕಿತರಾಗಿದ್ದು, ರೋಗಿ ಸಂಖ್ಯೆ 6,577, 12 ವರ್ಷದ ಬಾಲಕಿಯು ರೋಗಿ ಸಂಖ್ಯೆ 6,040ರ ಸಂಪರ್ಕಿತಳಾಗಿದ್ದಾಳೆ. ಇಂದು ಮೂವರಿಗೂ ಪಾಸಿಟಿವ್ ಇರುವುದು ದೃಢಪಟ್ಟಿದೆ.
ರೋಗಿ ಸಂಖ್ಯೆಗಳಾದ 4086, 4089, 4837, 4836, 4839, 4841, 5302, 5301, 5303, 5307, 5305, 5314, 5304 ಇವರು ಸಂಪೂರ್ಣ ಗುಣಮುಖರಾಗಿ, ನಿಗದಿತ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 226 ಪ್ರಕರಣಗಳ ಪೈಕಿ 184 ಮಂದಿ ಇದುವರೆಗೆ ಬಿಡುಗಡೆ ಹೊಂದಿದ್ದಾರೆ. 6 ಸಾವು ಸಂಭವಿಸಿದ್ದು, 36 ಸಕ್ರಿಯ ಪ್ರಕರಣಗಳಿವೆ. ಇಂದು 330 ಸ್ಯಾಂಪಲ್ಗಳು ನೆಗೆಟಿವ್ ಬಂದಿವೆ. 292 ಜನರ ಗಂಟಲು ದ್ರವ ಪರೀಕ್ಷೆಗೆ ಸಂಗ್ರಹಿಸಲಾಗಿದ್ದು, ಒಟ್ಟು 420 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಬೇಕಿದೆ.