ETV Bharat / state

ವಿದ್ಯುತ್ ಕಡಿತಗೊಳಿಸಿ ತಡರಾತ್ರಿ ಎಟಿಎಂ ದರೋಡೆ ಮಾಡಿದ ಕಳ್ಳರು

ಚಾಲಾಕಿ ಕಳ್ಳರು ನಿನ್ನೆ ತಡರಾತ್ರಿ​ ಎಟಿಎಂಗೆ ನುಗ್ಗಿ ಹಣ ಎಗರಿಸಿ ಪರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿರುವ ಆಕ್ಸಿಸ್​ ಬ್ಯಾಂಕ್​ ಎಟಿಎಂನಲ್ಲಿ ನಡೆದಿದೆ.

thieves-robbed-the-atm-at-davanagere
ವಿದ್ಯುತ್ ಕಡಿತಗೊಳಿಸಿ ತಡರಾತ್ರಿ ಎಟಿಎಂ ದರೋಡೆ ಮಾಡಿದ ಕಳ್ಳರು
author img

By

Published : Sep 19, 2022, 6:12 PM IST

Updated : Sep 19, 2022, 6:43 PM IST

ದಾವಣಗೆರೆ : ಚಾಲಾಕಿ ಕಳ್ಳರು ನಿನ್ನೆ ತಡರಾತ್ರಿ ವಿದ್ಯುತ್ ಕಡಿತಗೊಳಿಸಿ ಎಟಿಎಂ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಗಳೂರು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿದ್ದ ಹಣವನ್ನು ತಡರಾತ್ರಿ ಬಂದ ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ. ಎಷ್ಟು ಹಣ ಕಳವು ಆಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ವಿದ್ಯುತ್ ಕಡಿತಗೊಳಿಸಿ ತಡರಾತ್ರಿ ಎಟಿಎಂ ದರೋಡೆ ಮಾಡಿದ ಕಳ್ಳರು

ರಾತ್ರಿ ಸಮಯದಲ್ಲಿ ಯಾರೂ ಇಲ್ಲದ ವೇಳೆ ಎಟಿಎಂಗೆ ಸರಬರಾಜು ಆಗುವ ವಿದ್ಯುತ್ ಕಡಿತಗೊಳಿಸಿ ಸಿಸಿ ಕ್ಯಾಮರಾಗಳನ್ನು ತಪ್ಪಿಸಿ ಕಳವು ಮಾಡಲಾಗಿದೆ. ಇನ್ನು ಎಟಿಎಂನ್ನು ಬಲವಾದ ಆಯುಧಗಳಿಂದ ಹೊಡೆದು ಹಣ ದೋಚಿರುವುದಾಗಿ ತಿಳಿದು ಬಂದಿದೆ.

ಇಂದು ಸಾರ್ವಜನಿಕರು ಎಟಿಎಂಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಜಗಳೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಿಎಸ್ಐ ಮಹಾಂತೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಸಹೋದರ ಸಹೋದರಿ

Last Updated : Sep 19, 2022, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.