ದಾವಣಗೆರೆ: ದಲಿತರನ್ನು ಸವರ್ಣೀಯರು ತಮ್ಮ ಕೇರಿಯೊಳಗೆ ಬಿಟ್ಟುಕೊಳ್ಳದೆ ದಬ್ಬಾಳಿಕೆ ಮಾಡುತ್ತಿರುವ ಸುದ್ದಿಗಳನ್ನು ಕೇಳಿದ್ದಿವೆ, ನೋಡಿದ್ದೇವೆ. ಇದೀಗ ಜಾತಿ ಪದ್ಧತಿ ಹೆಚ್ಚಾಗಿದ್ದು, ಜಿಲ್ಲೆಯ ಹರಿಹರ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ಈ ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿದೆ.
ಧೂಳೆಹೊಳೆ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ದಲಿತರಿಗೆ ಕ್ಷೌರ ಮಾಡುವಂತಿಲ್ಲ ಎಂದು ಊರಿನ ಗೌಡರು ಕ್ಷೌರಿಕನಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಗಲಾಟೆ ಶುರುವಾಗಿದೆ. ಅಲ್ಲದೆ ಊರಲ್ಲಿ ಕ್ಷೌರ ಮಾಡದೆ ಇರೋದಕ್ಕೆ ಗ್ರಾಮದ ದಲಿತರು ಪಟ್ಟಣಕ್ಕೆ ತೆರಳಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರಂತೆ.
ಅಲ್ಲದೆ ಧೂಳೆಹೊಳೆ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನದಲ್ಲೂ ಕೂಡ ಪ್ರವೇಶ ನಿಷೇಧವಿದೆ ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡಿದ್ದಾರೆ. ಬೆಳಗ್ಗೆಯಿಂದ ಗಲಾಟೆ ಆದರೂ ಕೂಡ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.