ದಾವಣಗೆರೆ: ಮನೆ ಮುಂದೆ ಕಟ್ಟಿದ್ದ ಎತ್ತುಗಳನ್ನು ಕದ್ದೊಯ್ದಿರುವ ಘಟನೆ ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ ಎಂಬ ರೈತನಿಗೆ ಸೇರಿದ ಸುಮಾರು 1 ಲಕ್ಷ ರೂ. ಬೆಲೆಬಾಳುವ ಎತ್ತುಗಳನ್ನು ಕದಿಯಲಾಗಿದೆ.
ಮನೆಯ ಮುಂದೆ ದಿನ ರಾತ್ರಿ ಕಟ್ಟುವಂತೆ ನಿನ್ನೆಯೂ ಕೂಡ ಎತ್ತುಗಳನ್ನು ಕಟ್ಟಿಹಾಕಲಾಗಿತ್ತು. ಆದ್ರೆ ರಾತ್ರಿ ಬಂದ ಕಳ್ಳರು, ಎತ್ತುಗಳನ್ನು ಬಿಚ್ಚಿಕೊಂಡು ಹೋಗಿದ್ದಾರೆ. ಬೆಳಿಗ್ಗೆ ಅಬ್ದುಲ್ ರೆಹಮಾನ್ ಎದ್ದು ನೋಡಿದಾಗ ಎತ್ತುಗಳು ನಾಪತ್ತೆಯಾಗಿದ್ದವು. ಇದರಿಂದ ಕಂಗಾಲಾಗಿ ಊರೆಲ್ಲಾ ಹುಡುಕಿದರೂ ಎತ್ತುಗಳು ಸಿಕ್ಕಿಲ್ಲ. ಇನ್ನು ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎತ್ತುಗಳನ್ನು ಹುಡುಕಿಕೊಡುವಂತೆ ಪೊಲೀಸರಿಗೆ ರೆಹಮಾನ್ ಮನವಿ ಮಾಡಿದ್ದಾರೆ.