ETV Bharat / state

ಸಮಾರಂಭಕ್ಕೆ ಕರೆಯಬೇಡಿ, ಕೆಲಸವಿದ್ದರೆ ಮಾತ್ರ ಹೇಳಿ: ದಾವಣಗೆರೆ ಪಾಲಿಕೆ ನೂತನ ಮೇಯರ್​​​​​​​​​​​​​​​​​​​​​​​​​​​​​​​​​​​​​​​​​​​​​ - ಮೇಯರ್, ಉಪಮೇಯರ್ ಚುನಾವಣೆ

ದಯವಿಟ್ಟು ಸಭೆ, ಸಮಾರಂಭ, ಅಭಿನಂದನೆ ಕಾರ್ಯಕ್ರಮಗಳಿಗೆ ಕರೆಯಬೇಡಿ, ಕೆಲಸವಿದ್ದರೆ ಹೇಳಿ.‌ ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ. ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಶ್ರಮಿಸುತ್ತೇನೆ ಎಂದು ನೂತನ ಮೇಯರ್ ಬಿ.ಜೆ.ಅಜಯ್ ಕುಮಾರ್ ಹೇಳಿದ್ದಾರೆ.

the-new-mayor-b-j-ajay-kumar-byte-at-davanagere
ನೂತನ ಮೇಯರ್ ಬಿ. ಜೆ. ಅಜಯ್ ಕುಮಾರ್
author img

By

Published : Feb 19, 2020, 5:10 PM IST

ದಾವಣಗೆರೆ: ದಯವಿಟ್ಟು ಸಭೆ, ಸಮಾರಂಭ, ಅಭಿನಂದನೆ ಕಾರ್ಯಕ್ರಮಗಳಿಗೆ ಕರೆಯಬೇಡಿ, ಕೆಲಸವಿದ್ದರೆ ಹೇಳಿ.‌ ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ. ದಾವಣಗೆರೆ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸಲು ಶ್ರಮಿಸುತ್ತೇನೆ ಎಂದು ನೂತನ ಮೇಯರ್ ಬಿ.ಜೆ.ಅಜಯ್ ಕುಮಾರ್ ಹೇಳಿದ್ದಾರೆ.

ಸಮಾರಂಭಕ್ಕೆ ಕರೆಯಬೇಡಿ, ಕೆಲಸವಿದ್ದರೆ ಮಾತ್ರ ಹೇಳಿ ಮಾಡಿಕೊಡುತ್ತೇನೆ

ಮೇಯರ್ ಆದ ಬಳಿಕ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ. ಒಳ್ಳೆಯ ಕೆಲಸ ಮಾಡುತ್ತೇನೆ. ನನಗೆ ಸಿಕ್ಕಿರುವುದು ಒಂದು ವರ್ಷ ಮಾತ್ರ. 365 ದಿನ ನನಗೆ ಅವಕಾಶ ಸಿಕ್ಕಿದೆ. ಇದರೊಳಗೆ ಅನೇಕ ಕೆಲಸ ಮಾಡುವ ಗುರಿ ಹೊಂದಿದ್ದೇನೆ ಎಂದರು.

ಮೇಯರ್, ಉಪ ಮೇಯರ್ ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದೆ. ನಾವು ಯಾರನ್ನೂ ಕಿಡ್ನಾಪ್ ಮಾಡಿಲ್ಲ. ಕೋಟಿಗಟ್ಟಲೆ ಹಣ ಕೊಟ್ಟು ಮತದಾನಕ್ಕೆ ಗೈರಾಗುವಂತೆ ನಾವೇನು ಮಾಡಿಲ್ಲ. ವಿಪಕ್ಷದವರು ವಿನಾ ಕಾರಣ ಆರೋಪ ಮಾಡುತ್ತಾರೆ. ಸ್ಥಳೀಯರಲ್ಲದ ಎಂಎಲ್​ಸಿಗಳಿಗೆ ಮತದಾನಕ್ಕೆ ಅವಕಾಶ ನೀಡಿರುವುದು ಕ್ರಮಬದ್ಧವಾಗಿಯೇ ಇದೆ. ಇಲ್ಲೇ ವಾಸವಿದ್ದಾರೆ. ಅವ್ರು ಕೋರ್ಟ್​ಗೆ ಹೋಗಲಿ, ನಾವೂ ಹೋಗುತ್ತೇವೆ. ಕಾಂಗ್ರೆಸ್ ಮತದಾನ ಬಹಿಷ್ಕರಿಸಿದ್ದರಿಂದ ಗೆಲುವು ಸುಲಭವಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.