ದಾವಣಗೆರೆ: ಲಾರಿ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರ್ ಪಲ್ಟಿಯಾಗಿ ಕಾರಿನ ಚಾಲಕ ಗಾಯಗೊಂಡಿರುವ ಘಟನೆ ತಾಲೂಕಿನ ಹಳೇ ಭಾತಿ ಬಳಿಯ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ನಡೆದಿದೆ.
ಹಳೇ ಕುಂದುವಾಡ ನಿವಾಸಿ ನವೀನ್(30) ಗಾಯಗೊಂಡಿರುವ ಕಾರ್ ಚಾಲಕನಾಗಿದ್ದು, ಕುಂದುವಾಡದಿಂದ ಚೆಕ್ ಪೋಸ್ಟ್ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಎನ್ 77, ಜೆ 6796 ನಂಬರಿನ ಲಾರಿಯ ಸ್ಟೆಪ್ನಿ ತುಂಡಾಗಿ ಕೆಳಗೆ ಬಿದ್ದಿದ್ದು ಇದ್ದನ್ನು ಪಡೆಯಲು ಲಾರಿ ಚಾಲಕ ಒಂದೇ ಸಮನೇ ಪಕ್ಕಕ್ಕೆ ಲಾರಿ ಚಲಾಯಿಸಿದ್ದಾನೆ ಎಂದು ಹೇಳಲಾಗ್ತಿದೆ. ಹಿಂದಿನಿಂದ ಬಂದ ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಈ ವೇಳೆ ಕಾರ್ ಪಲ್ಟಿ ಹೊಡೆದು ಚಾಲಕ ಗಾಯಗೊಂಡಿದ್ದಾನೆ. ಆತನನ್ನು ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.