ಬೆಂಗಳೂರು/ದಾವಣಗೆರೆ/ತುಮಕೂರು: ಕೋವಿಡ್ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಕೆಲ ದಿನಗಳಿಂದ ಸೋಂಕು ಪ್ರಕರಣಗಳ ಪ್ರಮಾಣ ಏರಿಕೆ ಆಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದರ ನಿಯಂತ್ರಣಕ್ಕೆ ನಿಯಮಗಳನ್ನು ಬಿಗಿಗೊಳಿಸುವ ಜತೆಗೆ ಕೋವಿಡ್ ಪರೀಕ್ಷೆಯತ್ತ ಸರ್ಕಾರ ಅತಿ ಹೆಚ್ಚಿನ ಗಮನ ಹರಿಸಿದೆ.
ಕೋವಿಡ್ ಹಾಟ್ ಸ್ಪಾಟ್ ಆಗಿರುವ ಸಿಲಿಕಾನ್ ಸಿಟಿಯಲ್ಲಿ ಪೂಲಿಂಗ್ ಟೆಸ್ಟ್ ಮಾಡಲಾಗ್ತಿದೆ. ಮನೆಯ ಎಲ್ಲ ಸದಸ್ಯರ ಸ್ಯಾಂಪಲ್ಸ್ ಮಿಕ್ಸ್ ಮಾಡಿ ಟೆಸ್ಟ್ ಮಾಡಲಾಗುತ್ತೆ. ಇದರಲ್ಲಿ ಪಾಸಿಟಿವ್ ವರದಿ ಬಂದ್ರೆ ಪುನಃ ಪ್ರತ್ಯೇಕವಾಗಿ ಎಲ್ಲರ ಸ್ಯಾಂಪಲ್ ಪಡೆದು ಪರೀಕ್ಷೆ ಮಾಡಲಾಗುತ್ತೆ. ಹೀಗೆ ಮಾಡುವುದರಿಂದ ಸಮಯವೂ ಉಳಿತಾಯವಾಗಿ, ಹೆಚ್ಚೆಚ್ಚು ಟೆಸ್ಟ್ ಮಾಡಬಹುದಾಗಿದೆ. ಇದಕ್ಕಾಗಿ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯೂ ನೇಮಕಗೊಂಡಿದ್ದಾರೆ.
ದಾವಣಗೆರೆಯಲ್ಲಿಯೂ ಕೋವಿಡ್ ಪರೀಕ್ಷಾ ಕೇಂದ್ರಗಳು ಕಾರ್ಯ ಪ್ರವೃತ್ತವಾಗಿವೆ. ಆದ್ರೆ ಇದು ಸಾಲುತ್ತಿಲ್ಲ. ಇನ್ನೂ ಹೆಚ್ಚಿನ ಪರೀಕ್ಷಾ ಕೇಂದ್ರಗಳು ತೆರೆಯಲಿ, ಸೂಕ್ತ ಸಿಬ್ಬಂದಿ ನೇಮಕವಾಗಲಿ ಅನ್ನೋದು ಸ್ಥಳೀಯರ ಒತ್ತಾಯ.
ತುಮಕೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಜೆತೆಗೆ ಕೋವಿಡ್ ಪರೀಕ್ಷೆ ಮತ್ತು ಚಿಕಿತ್ಸೆಗೆಂದೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದೆ. ಟೆಸ್ಟಿಂಗ್ ಸೆಂಟರ್ಗಳನ್ನು ಹೆಚ್ಚು ಮಾಡಲಾಗುತ್ತಿದೆ. ಇರುವ ಸಿಬ್ಬಂದಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರಾದರೂ ಕೂಡ ಮತ್ತಷ್ಟು ಸಿಬ್ಬಂದಿ ನೇಮಕಾತಿಯ ಅವಶ್ಯಕತೆ ಇದೆ. ಸರ್ಕಾರ ನಿಯಮಗಳನ್ನ ರೂಪಿಸುತ್ತಿದೆಯಾದರೂ ಟೆಸ್ಟಿಂಗ್ ಸೆಂಟರ್ಗಳ ಮೂಲಕ ಬಂದ ಕೋವಿಡ್ ವರದಿಗನುಗುಣವಾಗಿ ಜನ್ರು ಎಚ್ಚೆತ್ತುಕೊಳ್ಳಬೇಕಿದೆ.