ETV Bharat / state

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ತಂತ್ರ ಪ್ರತಿತಂತ್ರ : ಶಾಮನೂರು ಶಿವಶಂಕರಪ್ಪ- ಸಿದ್ದೇಶ್ವರ್​​ ನಡುವೆ ಸವಾಲು ಪ್ರತಿ ಸವಾಲು - ಸಂಸದ ಜಿಎಂ ಸಿದ್ದೇಶ್ವರ್

ಲೋಕಸಭೆ ಚುನಾವಣೆ ಹಿನ್ನಲೆ ಸಂಸದ ಜಿಎಂ ಸಿದ್ದೇಶ್ವರ್​ ಮತ್ತು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಡುವೆ ನಡುವೆ ಟಾಕ್​ ವಾರ್ ಶುರುವಾಗಿದೆ.​

talk-war-between-mla-shamanuru-shiva-shankarappa-and-mp-gm-siddeshwar
Etv ಶಾಮನೂರು ಶಿವಶಂಕರಪ್ಪ- ಸಿದ್ದೇಶ್ವರ್​ ನಡುವೆ ಟಾಕ್ ವಾರ್
author img

By

Published : Jun 17, 2023, 4:56 PM IST

ಶಾಮನೂರು ಶಿವಶಂಕರಪ್ಪ- ಸಿದ್ದೇಶ್ವರ್​ ನಡುವೆ ಟಾಕ್ ವಾರ್

ದಾವಣಗೆರೆ : ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಟಾಕ್ ವಾರ್ ಶುರುವಾಗಿದೆ. ಹಾಲಿ ಲೋಕಸಭಾ ಸದಸ್ಯರಾದ ಜಿಎಂ ಸಿದ್ದೇಶ್ವರ್ ಅವರು ಸೋಲುವುದನ್ನು ನಾನು ನೋಡ್ಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ವಾಗ್ಬಾಣ ಬಿಟ್ಟಿದ್ದರು. ಮತ್ತೊಂದೆಡೆ ಜಿಎಂ ಸಿದ್ದೇಶ್ವರ್ ಅವರು ಶಿವಶಂಕರಪ್ಪನವರು ನಮ್ ಮಾವ. ಈವರೆಗೆ ನಾನು ಸೋಲುವುದನ್ನೇ ಅವರು ನೋಡ್ತಾ ಬಂದಿದ್ದಾರೆ ತಿರುಗೇಟು ನೀಡಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಿಧಾನಸಭೆ ಚುನಾವಣೆ ಮುಗಿದ ಬಳಿಕ ಇದೀಗ ದಾವಣಗೆರೆ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತಾ ಬಂದಿದೆ. ಈ ಬಾರಿ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ಶಾಮನೂರು ಶಿವಶಂಕರಪ್ಪ ಅವರು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಜೊತೆ ಸೇರಿ ತಂತ್ರ ಪ್ರತಿತಂತ್ರ ಹೂಡುತ್ತಿದ್ದಾರೆ.

ಲೋಕಸಭಾ ಚುನಾವಣೆ ವಿಚಾರವಾಗಿ ಸಿದ್ದೇಶ್ವರ್ ವಿರುದ್ಧ ಕಿಡಿಕಾರಿರುವ ಶಾಸಕ ಶಾಮನೂರು ಶಿವಶಂಕರಪ್ಪನವರು, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜಿ ಎಂ ಸಿದ್ದೇಶ್ವರ್ ಈ ಬಾರಿ ಸ್ಪರ್ಧೆ ಮಾಡಲಿ. ಮೊದಲು ಲೋಕಸಭೆ ಚುನಾವಣೆಗೆ ಟಿಕೆಟ್​​ ತಗೊಂಡು ಬಂದು ನಿಲ್ಲೋಕೆ ಹೇಳಿ, ಕಾಂಗ್ರೆಸ್ ನಿಂದ ಬಹಳ ಜನರಿದ್ದಾರೆ, ಯಾರು ನಿಲ್ಲಲ್ಲ ಅಂದ್ರೆ ನಾನೇ ನಿಲ್ಲುತ್ತೇನೆ ಎಂದು ಇತ್ತೀಚೆಗೆ ಹೇಳಿದ್ದರು.

ಇನ್ನು, ಜಿ.ಎಂ ಸಿದ್ದೇಶ್ವರ್ ಸೋಲುವುದನ್ನು ನಾನು ನೋಡಬೇಕು. ಬೇಕಾದ್ರೆ ಜಿ ಎಂ ಸಿದ್ದೇಶ್ವರ್ ಗೆ ಚುನಾವಣೆಗೆ ಫಂಡ್ ಮಾಡುತ್ತೇನೆ, ಅಳಿಯ ಬೊಮ್ಮಾಯಿ ಹೇಗೆ ಸಂಬಂಧನೋ ಅವನು ಕೂಡ ನನ್ನ ಸಂಬಂಧಿಕ ಎಂದು ಶಾಮನೂರು ಹೇಳಿದ್ದರು.

ಶಿವಶಂಕರಪ್ಪ ನಮ್ ಮಾವ. ಅವರು ಏನೇ ಹೇಳಿದ್ರು ನನಗೆ ಆಶೀರ್ವಾದ..ಜಿಎಂ ಸಿದ್ದೇಶ್ವರ್​ : ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಜಿಎಂ ಸಿದ್ದೇಶ್ವರ್, ಶಾಮನೂರು ಶಿವಶಂಕರಪ್ಪ ಅವರು ನಾನು ಸ್ಪರ್ಧೆ ಮಾಡಲು ಎಷ್ಟು ಫಂಡ್ ಕೊಡ್ತಾರಂತೆ. ಒಂದು ರೂಪಾಯಿ, ಒಂದು ಕೋಟಿ, ಐದು ಕೋಟಿ, ಎಷ್ಟು ಕೋಟಿ ಕೊಡ್ತಾರೆ ಎಂದು ಪ್ರಶ್ನಿಸಿದರು.

ಅವರು ಹಿರಿಯರು ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. 2004ರಿಂದಲೂ ನಾನು ಸೋಲುವುದನ್ನು ಅವರು ನೋಡಿಕೊಂಡು ಬಂದಿದ್ದಾರೆ. ಮುಂದೇನು ನಾನು ಸೋಲುವುದನ್ನು ನೋಡಿಕೊಂಡು ಹೋಗಲಿ. ಅವರು ಸೆಡ್ಡು ಹೊಡೆಯುತ್ತಾರಂದ್ರೇ ನಾನು ರೆಡಿಯಾಗಿದ್ದೇನೆ. ಶಾಮನೂರು ಶಿವಶಂಕರಪ್ಪ ಅವರು ಏನೇ ಹೇಳಿದರೂ ನನಗೆ ಆಶೀರ್ವಾದ ಇದ್ದಂತೆ. ಅವರು ಎಷ್ಟೇ ಹಣ ಕೊಟ್ರು ನಾನು ಪಡೆಯುತ್ತೇನೆ. ಶಾಮನೂರು ಶಿವಶಂಕರಪ್ಪ ನಮ್ಮ ಮಾವ. ಅದಕ್ಕೆ ಅವರ ಮೇಲೆ ನಾನು ಗೌರವ ಇಟ್ಟಿದ್ದೇನೆ ಎಂದು ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ : ಪಕ್ಷದಿಂದ ಈ ಬಾರಿ ಟಿಕೆಟ್ ನೀಡಿದ್ರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು 2019ರಲ್ಲಿ ನಾನು ಹೇಳಿದ್ದೆ. ಈಗ ನಾನು ಆರೋಗ್ಯವಾಗಿದ್ದೇನೆ. ನನಗೆ 71 ವರ್ಷ ವಯಸ್ಸು. ಅದ್ದರಿಂದ ನಾನೇ ಈ ಬಾರಿ ಚುನಾವಣೆ ಎದುರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮದಲ್ಲಿ ಬರೆದಿದ್ದನ್ನು ನೋಡಿ ಬಿಜೆಪಿ ನಾಯಕರು ನೋಡಿ ಕರೆದು ಚುನಾವಣೆಗೆ ನೀನೆ ಸ್ಪರ್ಧೆ ಮಾಡ್ಬೇಕೆಂದು ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೂಡ ಸ್ಪರ್ಧೆ ಮಾಡ್ಬೇಕೆಂದು ಹೇಳಿದ್ದಾರೆ. ಅದಕ್ಕೆ ನಾನು ಕಾರ್ಯಕಾರಣಿ ಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ :ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪನವರಿಗೆ 93ನೇ ಜನ್ಮದಿನದ ಸಂಭ್ರಮ; ಅದ್ಧೂರಿ ಆಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.