ದಾವಣಗೆರೆ: ಶ್ರಮಿಕ ವರ್ಗ ಯೋಜನೆಯಡಿ ಟೈಲರ್ಗಳಿಗೆ 5 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹೊಲಿಗೆ ಕೆಲಸಗಾರರು, ಲಾಕ್ಡೌನ್ ಆದ ಬಳಿಕ ಜೀವನ ಸಾಗಿಸುವುದೇ ಕಷ್ಟವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಟೈಲರ್ಗಳ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಪರಿಹಾರವನ್ನೂ ಆದಷ್ಟು ಬೇಗ ನೀಡಬೇಕು. ರಾಜಕಾರಣಿಗಳು ಮಾತ್ರ ನಮ್ಮ ಸಮಸ್ಯೆಗಳತ್ತ ಗಮನ ಹರಿಸದಿರುವುದು ಬೇಸರದ ಸಂಗತಿ. ಸಿಎಂ ಯಡಿಯೂರಪ್ಪ ಅವರು ಶ್ರಮಿಕ ವರ್ಗದವರಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿರುವುದು ಒಳ್ಳೆಯ ಕೆಲಸ. ಆದರೆ ಹೊಲಿಗೆ ಕೆಲಸಗಾರರನ್ನು ಸೇರಿಸಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಯಲ್ಲಪ್ಪ ಆರೋಪಿಸಿದ್ದಾರೆ.