ದಾವಣಗೆರೆ: ಮೌಢ್ಯ ನಿಷೇಧಕ್ಕೆ ರಾಜ್ಯ ಸರ್ಕಾರ ಮುಂದಾಗಿರುವ ನಡುವೆಯೇ ಸ್ವತಃ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮೌಢ್ಯವನ್ನು ಪ್ರತಿಬಿಂಬಿಸುವ ಆಚರಣೆಯೊಂದಕ್ಕೆ ಚಾಲನೆ ನೀಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕು ಕೆಂಚಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೆಂಚಿಕೊಪ್ಪ ಗ್ರಾಮದಲ್ಲಿ ಮಾಯಮ್ಮ ಮತ್ತು ಮರಿಯಮ್ಮ ಎಂಬ ದೇವಿಗಳ ಪೂಜೆ ಬಳಿಕ ದಲಿತ ಸಮುದಾಯದ ಇಬ್ಬರು ಮಹಿಳೆಯರನ್ನು ಸಿಡಿ ಬಂಡಿಗೆ ಕಟ್ಟಿಕೊಂಡು ಮೆರವಣಿಗೆ ಮಾಡುವ ಪದ್ಧತಿಗೆ ಶಾಸಕ ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಿಡಿ ಬಂಡಿ ಮೌಢ್ಯ ಅಲ್ಲ, ಇದೊಂದು ಪದ್ಧತಿ, ನಂಬಿಕೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ಪೂಜೆ ಎಂದು ಹೇಳಿದ್ದಾರೆ.