ದಾವಣಗೆರೆ: ತಾಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ಸಕ್ಕರೆ ಫ್ಯಾಕ್ಟರಿಯೊಂದರ ಹೊರ ಸೂಸುವ ಬೂದಿಯು ಎಂಟು ಹಳ್ಳಿ ಜನರನ್ನು ಹೈರಾಣು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಫ್ಯಾಕ್ಟರಿಯಿಂದ ಹೊರ ಬಿಡುವ ತ್ಯಾಜ್ಯಮಯ ಹಾಗೂ ಆ್ಯಸಿಡ್ ಮಿಶ್ರಿತ ನೀರಿನಿಂದ ಜಲಚರಪ್ರಾಣಿಗಳ ಪ್ರಾಣಕ್ಕೆ ಕಂಟಕವಾಗಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಫ್ಯಾಕ್ಟರಿಯಿಂದ ತಮಾಗುವ ಸಮಸ್ಯೆಗಳ ಬಗ್ಗೆ ಸ್ಥಳೀಯರಯ ನೋವು ತೋಡಿಕೊಂಡಿದ್ದಾರೆ. ಈ ಫ್ಯಾಕ್ಟರಿ ಹೊರ ಸೂಸುವ ಬೂದಿಯಿಂದ ನಾವು ಬಹಳ ಸಮಸ್ಯೆ ಎದುರಿಸುತ್ತಿದ್ದೇವೆ. ಜಮೀನುಗಳಲ್ಲಿ ಬೆಳೆದ ಬೆಳೆಗಳು, ಜನ ಜಾನುವಾರುಗಳ ಮೇಲೆ ಈ ಬೂದಿ ದುಷ್ಪರಿಣಾಮಗಳನ್ನು ಬೀರುತ್ತಿದ್ದು, ಜಲಚರಪ್ರಾಣಿಗಳಿಗೂ ಕಂಟಕವಾಗಿಸಿದೆ ಎಂದು ಆರೋಪ ಮಾಡಿದ್ದಾರೆ.
ಶುಗರ್ ಫ್ಯಾಕ್ಟರಿಯ ಬೂದಿಯಿಂದ ಕೂಳೇನಹಳ್ಳಿ, ಕನಗೊಂಡನಹಳ್ಳಿ, ಹೊಸಕೂಳೇನಹಳ್ಳಿ, ಬಲ್ಲೂರು ತತ್ತರಿಸಿವೆ. ಹೊಗೆಯ ಜೊತೆ ಬೀಳುತ್ತಿರುವ ಕಪ್ಪು ಬೂದಿ ಮನೆಯ ಛಾವಣಿಗಳಲ್ಲಿ ಶೇಖರಣೆಯಾಗುತ್ತಿದೆ. ಅಲ್ಲದೇ ಗಾಳಿಯಲ್ಲಿ ಬಂದು ಮನೆಯ ಒಳಗೂ ಬರುತ್ತಿದೆ. ಆಹಾರ ಪದಾರ್ಥಗಳ ಮೇಲೂ ಬೀಳುವುದರಿಂದ ಅನಾರೋಗ್ಯದ ಭೀತಿ ಕಾಡುತ್ತಿದೆ. ಇದಲ್ಲದೇ ಮನೆ ಅಂಗಳದ ತುಂಬೆಲ್ಲಾ ಬೂದಿಮಯ ಆಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
'ಬೂದಿಯು ವಿಷ ಮಿಶ್ರತವಾಗಿದ್ದರಿಂದ ಜನ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮನೆಗಳು ಬೂದಿಮಯವಾಗಿವೆ. ಉಸಿರಾಟದಿಂದ ಈ ಬೂದಿ ಜನರ ದೇಹ ಸೇರುತ್ತಿದ್ದು, ಪ್ರಾಣಿಗಳು ಸಹ ರೋಗಳಿಗೆ ತುತ್ತಾಗುತ್ತಿದೆ. ವಿಷ ಮಿಶ್ರತ ನೀರು ಹಳ್ಳಕ್ಕೆ ಹರಿಸುತ್ತಿರುವದರಿಂದ ಜಲಚರಪ್ರಾಣಿಗಳಿಗೂ ಕಂಟವಾಗಿದೆ. ದನಕರುಗಳು ಅದೇ ನೀರನ್ನು ಕುಡಿಯುವುದರಿಂದ ಜಾನುವಾರುಗಳ ಬೆಳವಣಿಗೆಯಲ್ಲಿ ಕುಂಟಿತವಾಗಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಗ್ರಾಮದ ಜನರು ಕಾರ್ಖಾನೆ ವಿರುದ್ಧ ಪ್ರತಿಭಟನೆಗೆ ಇಳಿಯಲಿದ್ದೇವೆ' ಎಂದು ರೈತ ಹೋರಾಟ ಬಿಎಂ ಸತೀಶ್ ಇದೇ ವೇಳೆ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಹುಲ್ಲು, ಗಿಡ ಗಂಟೆಗಳ ಮೇಲೂ ಈ ಬೂದಿ ಬೀಳುತ್ತಿದೆ. ದನ-ಕರುಗಳು, ಕುರಿ, ಮೇಕೆಗಳು ಇದನ್ನೇ ಸೇವಿಸುತ್ತಿರುವುದ್ದರಿಂದ ಸರಿಯಾಗಿ ಬೆಳೆಯುತ್ತಿಲ್ಲ. ರೋಗಕ್ಕೆ ತುತ್ತಾಗುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ಇದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಮಾಡುತ್ತಿರುವ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿತ್ಯ ಈ ಬೂದಿ ತಿಂದು ಬದುಕಬೇಕಾಗಿದೆ. ಒಂದು ದಿನವೂ ಬಿಳಿ ಅಥವಾ ಸ್ವಚ್ಛ ಬಟ್ಟೆ ಧರಿಸುವಂತಿಲ್ಲ. ಈ ಭಾಗದ ರೈತರು ಬೆಳೆದಿರುವ ಭತ್ತ ಪೂರ್ಣ ಕಪ್ಪು ಆಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ವಿಷಯುಕ್ತ ನೀರು: 'ಈ ಸಕ್ಕರೆ ಕಾರ್ಖಾನೆಯಿಂದ ವಿಷಯುಕ್ತ ಮತ್ತು ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಸಹ ಹಳ್ಳಕ್ಕೆ ಬಿಡಲಾಗುತ್ತಿದೆ. ಈ ನೀರಿನಲ್ಲಿ ಆ್ಯಸಿಡ್ ಇದ್ದು, ಬಹಳ ಅಪಾಯಕಾರಿ ಆಗಿದೆ. ನೀರು ಹಳ್ಳಕ್ಕೆ ಬಿಡುತ್ತಿರುವುದರಿಂದ ಮೀನು ಮತ್ತು ಇತರ ಜಲಚರ ಜೀವಿಗಳು ಸಾಯುತ್ತಿವೆ. ಇದೇ ನೀರನ್ನು ಸುತ್ತಮುತ್ತಲ ಗ್ರಾಮಗಳ ರೈತರು ಪಂಪ್ಸೆಟ್ಗಳ ಮೂಲಕ ಜಮೀನುಗಳಿಗೂ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಎಲ್ಲ ರೈತರ ಜಮೀನುಗಳು ವಿಷಯುಕ್ತ ಆಗುತ್ತಿದೆ' ಎಂದು ಗ್ರಾಮ ಪಂಚಾಯತ್ ಸದಸ್ಯ ಗುತ್ತ್ಯಪ್ಪ ಆರೋಪ ಮಾಡಿದ್ದರು.
ಇದನ್ನೂ ಓದಿ: ಕಬ್ಬು ಕಡಿಯುವ ವೇಳೆ 5 ಚಿರತೆ ಮರಿಗಳು ಪತ್ತೆ.. ವಿಡಿಯೋ