ETV Bharat / state

ಅನಗತ್ಯ ಸುತ್ತಾಡುವವರ ವಿರುದ್ಧ ಕಠಿಣ ಕ್ರಮ: ಸಚಿವ ಈಶ್ವರಪ್ಪ ಎಚ್ಚರಿಕೆ - ಸಚಿವ ಈಶ್ವರಪ್ಪ ಎಚ್ಚರಿಕೆ

ಕಠಿಣ ಕ್ರಮ ಕೈಗೊಳ್ಳದಿದ್ದರೆ ವೈರಸ್ ನಿಯಂತ್ರಿಸಲು ಸಾಧ್ಯವಿಲ್ಲ. ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಗಳು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಮಹಾಮಾರಿ ಹೊಡೆದೋಡಿಸಲು ಪಣ ತೊಡಬೇಕಿದೆ. ಇದಕ್ಕೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Minister Eshwarappa
ಅನಾವಶ್ಯಕವಾಗಿ ಸುತ್ತಾಡುವವವರ ವಿರುದ್ದ ಕಠಿಣ ಕ್ರಮ: ಸಚಿವ ಈಶ್ವರಪ್ಪ ಎಚ್ಚರಿಕೆ
author img

By

Published : Apr 2, 2020, 5:40 PM IST

ಹರಿಹರ/ದಾವಣಗೆರೆ: ಅಧಿಕಾರಿಗಳು ತಮ್ಮ ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ತಮ್ಮ ಮನೆಗೂ ಹೊಗದೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ನಮ್ಮ ದೇಶ ಹಾಗೂ ರಾಜ್ಯದಿಂದ ಈ ಕೊರೊನಾ ದೂರವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಅನಗತ್ಯ ಸುತ್ತಾಡುವವವರ ವಿರುದ್ಧ ಕಠಿಣ ಕ್ರಮ: ಸಚಿವ ಈಶ್ವರಪ್ಪ ಎಚ್ಚರಿಕೆ
ಹರಿಹರದ ನಗರಸಭಾ ಸಭಾಂಗಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಕೆಲವರು ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಬೇಜವಾಬ್ದಾರಿಯಿಂದ ವರ್ತಿಸುತಿದ್ದಾರೆ, ಇದು ಸರಿಯಲ್ಲ. ಕೆಲವರು ಪೆಟ್ರೋಲ್ ಬಂಕ್​ಗಳ ಬಳಿ ತೆರಳಿ ಅಗತ್ಯವಿದೆ ಎಂಬ ನೆಪ ಹೇಳಿ ಪೆಟ್ರೋಲ್ ಹಾಕಿಸಿಕೊಂಡು ಅನಗತ್ಯವಾಗಿ ಸಂಚಾರದಲ್ಲಿ ತೊಡಗುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಕೆಲ ಭಾಗಗಳಿಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅಂತವರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಮಾಡಬಾರದು. ಒಂದು ವೇಳೆ ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಚನ್ನಗಿರಿ ತಾಲೂಕಿನಿಂದ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಸುಮಾರು 11 ಮಂದಿ ಭಾಗವಹಿಸಿದ್ದಾರೆ ಎಂಬ ಮಾಹಿತಿ ಕಳೆದ ರಾತ್ರಿ ಲಭ್ಯವಾಗಿದೆ. ಗ್ರಾಮಾಂತರ ಡಿವೈಎಸ್ಪಿ ಹಾಗೂ ಅವರ ತಂಡ ಚನ್ನಗಿರಿಗೆ ತೆರಳಿ ಅವರನ್ನು ಕರೆ ತಂದಿದ್ದಾರೆ. ಜಿಲ್ಲಾ ಸಿಜಿ ಆಸ್ಪತ್ರೆಯಲ್ಲಿ ಅವರೆಲ್ಲರನ್ನು ವಿಶೇಷ ಅವಲೋಕನದಲ್ಲಿಡಲಾಗಿದೆ. ಈಗಾಗಲೇ 11 ಮಂದಿಯನ್ನು ತಪಾಸಣೆ ನಡೆಸಲಾಗಿದ್ದು, ಅವಲೋಕನದಲ್ಲಿಡಲಾಗಿದೆ. ಒಟ್ಟಾರೆ ಚನ್ನಗಿರಿ ತಾಲೂಕಿನಿಂದ 12 ಮಂದಿ ದೆಹಲಿಗೆ ತೆರಳಿದ್ದರು. ಅವರಲ್ಲಿ 11 ಮಂದಿ ಸಂಪರ್ಕದಲ್ಲಿದ್ದಾರೆ. ಮತ್ತೊಬ್ಬರು ಹೊರ ರಾಜ್ಯದ ಮುಜಾಫರಾಬಾದ್​ನಲ್ಲಿ ಅವಲೋಕನದಲ್ಲಿದ್ದಾರೆ. ಅವರೇ ಚನ್ನಗಿರಿಯಲ್ಲಿರುವವರ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ನಮ್ಮ ಪೊಲೀಸರು ಅವರನ್ನು ಕರೆ ತಂದಿದ್ದಾರೆ. ಇಲ್ಲಿಯವರೆಗೂ ಅವರೆಲ್ಲರೂ ಚನ್ನಗಿರಿಯಲ್ಲಿಯೇ ಇದ್ದರು. ಎಲ್ಲರೂ ಫೆಬ್ರವರಿ 28ಕ್ಕೆ ದೆಹಲಿಯಿಂದ ವಾಪಸ್​ ಬಂದಿದ್ದಾರೆ. ಮಾರ್ಚ್ 28ರಂದು ಅವರೆಲ್ಲರೂ ದೆಹಲಿಗೆ ಹೋಗಿ ಬಂದು 1 ತಿಂಗಳಾಗಿದೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ. ಆದರೂ ಸಹ ಅವರನ್ನು ತಪಾಸಣೆ ಮಾಡಿ ವಿಶೇಷ ಅವಲೋಕನದಲ್ಲಿಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.