ದಾವಣಗೆರೆ: 7 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ದಾವಣಗೆರೆಯ ಆಜಾದ್ ನಗರದಲ್ಲಿ ನಡೆದಿದೆ.
ಕನೀಝ್ ಫಾತೀಮಾ ಬೀದಿನಾಯಿಗಳ ದಾಳಿಗೆ ಗಾಯಗೊಂಡ ಬಾಲಕಿಯಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಸಲಾಂ ಶೇಕ್, ತಬಸ್ಸುಂ ಬಾನು ಪೋಷಕರ ಮಗಳು ಫಾತೀಮಾ ಮೇಲೆ ಮಧ್ಯ ರಾತ್ರಿ ಮೂರು ಗಂಟೆ ಸುಮಾರಿಗೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಕಾಲು, ತಲೆ ಸೇರಿ ಬಾಲಕಿ ಮೈ ತುಂಬಾ ಗಾಯಗೊಳಿಸಿವೆ. ಗಾಯಾಳು ಬಾಲಕಿಯನ್ನು ಬಾಪೂಜಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಕೂಡ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.
ಬೀದಿ ನಾಯಿಗಳು ದಾಳಿ ನಡೆಸಿದ್ದರರಿಂದ ಆಜಾದ್ ನಗರದ ಜನರು ನಾಯಿಗಳಿಗೆ ಕಡಿವಾಣ ಹಾಕುವಂತೆ ಪಾಲಿಕೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಭೀಕರವಾಗಿ ಬಾಲಕಿಯನ್ನು ನಾಯಿಗಳ ಹಿಂಡು ಕಚ್ಚಿ ಗಾಯಗೊಳಿಸಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಇನ್ನು ಪೋಷಕರಲ್ಲಿ ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದು, ಚಿಕಿತ್ಸೆಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದರು. ಇನ್ನು ಈ ಘಟನೆ ಆಜಾದ್ ಪೊಲೀಸ್ ಠಾಣಾ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.