ETV Bharat / state

ರಾಜ್ಯ ಸರ್ಕಾರವು ಬರ ಪರಿಹಾರ ಕೊಡದೇ ಕೇಂದ್ರದತ್ತ ಬೊಟ್ಟು ಮಾಡ್ತಿದೆ: ಎನ್​. ರವಿಕುಮಾರ್ ಕಿಡಿ - ​ ETV Bharat Karnataka

ರಾಜ್ಯದಲ್ಲಿ ಎದುರಾಗಿರುವ ಬರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಒತ್ತಾಯಿಸಿದ್ದಾರೆ.

ಎನ್​. ರವಿಕುಮಾರ್
ಎನ್​. ರವಿಕುಮಾರ್
author img

By ETV Bharat Karnataka Team

Published : Oct 16, 2023, 7:32 PM IST

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್​. ರವಿಕುಮಾರ್ ಹೇಳಿಕೆ

ದಾವಣಗೆರೆ : ಕಾಂಗ್ರೆಸ್​ ಸರ್ಕಾರ ಒಂದು ಪೈಸೆಯನ್ನೂ ಕೂಡ ಬರ ಪರಿಹಾರ ಕೊಟ್ಟಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ವಿರುದ್ದ ಬೊಟ್ಟು ಮಾಡಿ ತೋರಿಸುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ ಪರಿಹಾರ ಕೊಡಿ ಎಂದರೆ ಕೇಂದ್ರ ಸರ್ಕಾರದ ತಂಡ ಬರಗಾಲದ ಪ್ರವಾಸ ಮಾಡಿಲ್ಲ, ಅವರು ಅಧ್ಯಯನ ಮಾಡಿ‌ ವರದಿ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ಬಂದ‌ ಮೇಲೆ ಪರಿಹಾರ ಬಿಡುಗಡೆ ಮಾಡ್ತೇವೆ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಇದ್ದಾಗ ಪ್ರವಾಹ ಬಂದಿತ್ತು. ಅ ಸಂದರ್ಭದಲ್ಲಿ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದೀವಿ. ಆದರೇ ಈ ಸರ್ಕಾರ ಒಂದು ಪೈಸೆಯನ್ನೂ ಕೂಡ ಬರ ಪರಿಹಾರ ಕೊಟ್ಟಿಲ್ಲ. ಈಗ ವಿದ್ಯುತ್ ಸಮಸ್ಯೆ ಬಗ್ಗೆ ಪ್ರತಿಭಟನೆ ಮಾಡಿದರೆ, ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ ಎಂದು ಹೇಳುತ್ತಾರೆ. ಕಲ್ಲಿದ್ದಲು ಪೂರೈಕೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ ಎಂದು ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ. ಮಳೆ‌ ಕಡಿಮೆ ಆಗುತ್ತದೆ ಎಂದು ಹವಾಮಾನ ಇಲಾಖೆ ಹಲವಾರು ಬಾರಿ ಮುನ್ಸೂಚನೆ ನೀಡಿತ್ತು. ಆದರೂ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ ಎಂದು ಕಿಡಿಕಾರಿದರು. ಪರಿಹಾರ ಕೊಡಲು ಸಾಧ್ಯವಾಗಲಿಲ್ಲ ಎಂದರೆ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ಎಂದು ರವಿಕುಮಾರ್​ ಇದೇ ವೇಳೆ ಒತ್ತಾಯಿಸಿದರು. ‌

ಇನ್ನು’’ ಬೆಂಗಳೂರಿನ ಸಂತೋಷ್ ಎನ್ನುವ ಬಿಲ್ಡರ್ ಮನೆ ಮೇಲೆ ಐಟಿ ರೈಡ್ ಮಾಡಿದಾಗ 45 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗಿದೆ. ಅಂಬಿಕಾಪತಿ ಮನೆಯಲ್ಲಿ ಕಂಟ್ರಾಕ್ಟರ್​ಗಳಿಂದ ಸಂಗ್ರಹಿಸಿದ 42 ಕೋಟಿ ಹಣ ಸಿಕ್ಕಿದೆ. ಅದರೂ ನಾವು ಭ್ರಷ್ಟಚಾರದಲ್ಲಿ ತೊಡಗಿಲ್ಲ ಏನಾದರೂ ಸಾಕ್ಷಿ‌ ಇದ್ರೆ ಕೊಡಿ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಇದಕ್ಕಿಂತ ಸಾಕ್ಷಿ ಬೇಕಾ‘‘ ಎಂದು ರವಿಕುಮಾರ್ ತಿರುಗೇಟು ನೀಡಿದರು.

ದಾವಣಗೆರೆ ಹಿಂದೂ ಗಣಪತಿ ಶೋಭಾಯಾತ್ರೆ ವೇಳೆ ಎವಿಕೆ ಕಾಲೇಜಿನ ರಸ್ತೆಯಲ್ಲಿ ಗೋಡ್ಸೆ ಪೋಟೋ ಪ್ರದರ್ಶನ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು ಗೋಡ್ಸೆ ಪೋಟೋವನ್ನು ಯಾರೂ ಪ್ರದರ್ಶನ ಮಾಡಬಾರದು. ನಮಗೂ ಗೋಡ್ಸೆಗೂ ಯಾವುದೇ ಸಂಬಂಧ ಇಲ್ಲ,. ನಾವು ಸ್ವಾತಂತ್ರ ವೀರ ವಿನಾಯಕ ದಾಮೋದರ ಸಾವರ್ಕರ್, ಭಗತ್ ಸಿಂಗ್, ಸ್ವಾಮಿ ವಿವೇಕಾನಂದರ ಪೊಟೋ ಎತ್ತಿ ಹಿಡಿಯುತ್ತೇವೆ ಎಂದರು.

ಸ್ವಪಕ್ಷದವರ ವಿರುದ್ಧ ಹೇಳಿಕೆ ನೀಡುತ್ತಿರುವ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ‌‌ ಅವರು
ಈಗಾಗಲೇ ರಾಜ್ಯಾಧ್ಯಕ್ಷರ ಬಗ್ಗೆ ಮಾಹಿತಿ ನೀಡಲಾಗಿದೆ. ಏನ್ ಮಾತನಾಡಿದ್ದಾರೆ ಎನ್ನುವುದು ರಾಜ್ಯಾಧ್ಯಕ್ಷರ ಹಾಗೂ ಪಾರ್ಟಿ ಗಮನಕ್ಕೆ ಇದೆ. ಮುಂದಿನ ನಿರ್ಧಾರಗಳನ್ನು ಪಾರ್ಟಿ ಕೈಗೊಳ್ಳುತ್ತೆ, ರೇಣುಕಾಚಾರ್ಯ ಇನ್ನೂ ಪಕ್ಷದಲ್ಲೇ ಇದ್ದಾರೆ ಎಂದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿದ ರವಿಕುಮಾರ್​ ಈ ತಿಂಗಳ ಒಳಗಾಗಿ ರಾಜ್ಯಾಧ್ಯಕ್ಷರ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆ ಆಗುತ್ತೆ ಎಂದರು.

ಇದನ್ನೂ ಓದಿ : "ಐಟಿ ರೇಡ್​ನಲ್ಲಿ ಸಿಕ್ಕ ಹಣ ಎಸ್​ಎಸ್​ಟಿ ಟ್ಯಾಕ್ಸ್​​ಗೆ ಸೇರಿದ್ದು": ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.