ದಾವಣಗೆರೆ: ದಾವಣಗೆರೆ ತಾಲೂಕಿನ ಹೊನ್ನೂರು ಕೆರೆ ನೂರು ಎಕರೆ ಜಮೀನನ್ನು ನುಂಗಿದೆ. ಈ ಕೆರೆಯ ವ್ಯಾಪ್ತಿಯಲ್ಲಿ ಮಲ್ಲಶೆಟ್ಟಿಹಳ್ಳಿ, ನರಸಿಂಹಪುರ ಹಾಗೂ ಹೊನ್ನೂರು ಸೇರಿ ಆರು ಗ್ರಾಮಗಳ ವ್ಯಾಪ್ತಿಯ ಜಮೀನು ಇದೆ. ಇಲ್ಲಿ ಬರೋಬ್ಬರಿ 16 ತಿಂಗಳಿನಿಂದ ನೀರು ನಿಂತಿದೆ. ಇದಕ್ಕೆ ಕಾರಣ ಹೊನ್ನೂರು ಕೆರೆಯ ತೂಬು ಎತ್ತರಿಸಿರುವುದು. ತೂಬು ಎತ್ತರಿಸಿದ ಪರಿಣಾಮ ಮುಂದೆ ನೀರು ಹರಿದು ಹೋಗುತ್ತಿಲ್ಲ.
ನೂರಕ್ಕು ಹೆಚ್ಚು ಎಕರೆ ಪ್ರದೇಶದಲ್ಲಿ ನೀರು ನಿಂತಿದೆ. ತಕ್ಷಣ ಅಧಿಕಾರಿಗಳು ಈ ಭಾಗದಲ್ಲಿ ಪ್ರವಾಸ ಮಾಡುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡ್ಬೇಕಾಗಿದೆ ಎಂದು ರೈತ ದಳಪತಿ ರೇವಣ್ಣಸಿದ್ದಪ್ಪ ಮನವಿ ಮಾಡಿದ್ದಾರೆ.
ಕೆರೆಯ ಎರಿ ಕಡಿಮೆ ಮಾಡಿ, ಹೊನ್ನೂರು ಕೆರೆಯ ಟೂಬ್ ಗಳನ್ನ ಓಪನ್ ಮಾಡಿದ್ರು ಸಾಕು. ಬೇಕಾದಷ್ಟು ನೀರು ಹರಿದುಕೊಂಡು ಹೊರಹೋಗುತ್ತದೆ. ತಕ್ಷಣ ಟೂಬ್ನನ್ನು ಇಳಿಕೆ ಮಾಡಿ ನೀರು ಹೋಗುವಂತೆ ಮಾಡ್ಬೇಕು ಎಂಬುದು ರೈತರ ಒತ್ತಾಯವಾಗಿದೆ.
ಇದನ್ನೂ ಓದಿ: ಬೆಣ್ಣೆ ನಗರಿಯಲ್ಲಿ ಮುಂದುವರೆದ ಮಳೆ ಅವಾಂತರ.. ಅಡಕೆ ತೋಟಗಳು ಜಲಾವೃತ, ಹೈರಾಣಾದ ರೈತ