ದಾವಣಗೆರೆ: ಹಿಂದೆ ನಾವು ಮಾಡಿದ್ದ ಯೋಜನೆಗಳು ಸ್ಥಗಿತವಾಗಿದ್ದು, ಅವುಗಳನ್ನು ಈಗ ಕಾರ್ಯರೂಪಕ್ಕೆ ತರುತ್ತೇವೆ ಎಂದು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದರು. ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಮುಖ್ಯವಾಗಿ ನೀರಾವರಿ ಯೋಜನೆ, ಕೆರೆ ತುಂಬಿಸುವ ಯೋಜನೆ ಈ ಬಜೆಟ್ ಮೂಲಕ ಜಾರಿಗೆ ತರುತ್ತೇವೆ. ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಈ ಬಜೆಟ್ ಅತ್ಯುತ್ತಮವಾಗಿದೆ. ಐದು ಗ್ಯಾರಂಟಿಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಒಳ್ಳೆಯ ಬಜೆಟ್ ಕೊಟ್ಟಿದ್ದಾರೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಪೆನ್ ಡ್ರೈವ್ ಇದ್ದರೆ ತೋರಿಸಲಿ ಎಂದು ಸಚಿವರು ಸವಾಲು ಹಾಕಿದರು. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಹಿಂದೆ ನಡೆದ ಕಾಮಗಾರಿಗಳ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಅದರ ವರದಿ ಬಂದ ಮೇಲೆ ಇವರ ಹಣೆಬರಹ ಜನರಿಗೆ ಗೊತ್ತಾಗುತ್ತದೆ. ಎಲ್ಲೆಲಿ ಕಳೆಪೆಯಾಗಿವೆ ಅವುಗಳನ್ನು ನಾವು ತೋರಿಸುತ್ತೇವೆ. ಜಿಲ್ಲೆಯ ಕೆಲ ಇಲಾಖೆಗಳಲ್ಲಿ ಭ್ರಷ್ಟಾಚಾರ, ಅವ್ಯವಹಾರ ಆಗಿದೆ ಎಂದು ಅರ್ಜಿ ಬಂದಿವೆ. ಸರ್ಕಾರಿ ಭೂಮಿಯನ್ನು ದುರುಪಯೋಗ ಮಾಡಿರುವ ಕುರಿತು ತನಿಖೆ ಮಾಡುತ್ತಿದ್ದಾರೆ. ಕೆಲವರು ಮಾಡಬಾರದನ್ನು ಮಾಡಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಇವರು ಕುಂದವಾಡ ಕೆರೆಗೆ 13 ಕೋಟಿ ಖರ್ಚು ಮಾಡಿದ್ದಾರೆ. ಆದರೆ, ನಾವು ನಾವು ಮಾಡಿದ್ದು ಖರ್ಚು ಮಾಡಿದ್ದೇ 3 ಕೋಟಿ. ಇಂತಹ ಕೆಲಸಗಳು ಸಾಕಷ್ಟು ಆಗಿವೆ. ಎಲ್ಲೆಲಿ ಕಳಪೆ ಕಾಮಗಾರಿಗಳು ನಡೆದಿವೆ ಅದರ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದಲ್ಲಿ ಮೈನಿಂಗ್ನಲ್ಲಿ ಒಂದು ತಿಂಗಳಿನಿಂದ ಕಾಂಗ್ರೆಸ್ ಎಂಎಲ್ಗಳು ಕಮಿಷನ್ಗಾಗಿ ಲಾರಿ ಓಡಾಟ ನಿಲ್ಲಸಿದ್ದಾರೆ ಎಂದು ಕೇಳಿದ ಪ್ರಶ್ನೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಎಂಎಲ್ಎನೋ, ಎಂಪಿನೋ. ಇಲ್ಲಿ ಎಂಪಿನೋ ಅಲ್ಲಿ ಎಂಪಿನೋ, ಅಲ್ಲಿ ಎಂಎಲ್ಎನೋ ಇಲ್ಲಿ ಎಂಎಲ್ಎನೋ ಯಾರು ಗೊತ್ತಾಗಬೇಕಲ್ಲ ಎಂದು ಪ್ರಶ್ನಿಸಿದರು.
ಸುಮ್ಮನೆ ಹೇಳಿಬಿಟ್ಟರೆ, ಹಾಗೆ ಏನು ಇರಲ್ಲ. ಅಕ್ರಮ ಏನಾದರೂ ಇರಬಹುದು ಪರಿಶೀಲನೆ ಮಾಡಿಸುತ್ತೀನಿ. ನನಗೆ ಬಂದ ಮಾಹಿತಿ ಪ್ರಕರ ಅರಣ್ಯ ಪ್ರದೇಶದಲ್ಲಿ ಎನ್ಒಸಿ ಇಲ್ಲದೇ ಟ್ರಾನ್ಸ್ಪೋರ್ಟ್ ಮಾಡುವುದಕ್ಕೆ ಅನುಮಾತಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು ಎಂದು ಹೇಳಿದರು. ನಮ್ಮ ತಂದೆಯವರು ಹೇಳಿದಂತೆ ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರನ್ನು ಸೋಲಿಸುವುದೇ ನಮ್ಮ ಪಕ್ಷದ ಗುರಿ ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು.
ಪ್ರಹ್ಲಾದ್ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ -ಎಂ.ಬಿ. ಪಾಟೀಲ್: ವಿಜಪುರದಲ್ಲಿಂದು ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡಬಾರದು. ಅವರಿಗೆ ನಮ್ಮ ಸರ್ಕಾರದ ಅಭಿವೃದ್ಧಿ ಬಗ್ಗೆ ಹೊಟ್ಟೆ ಉರಿಯಾಗಿದೆ. ಕೇಂದ್ರ ಸಚಿವರಾಗಿದ್ದಾರೆ. ಬಹಳ ತಿಳಿದುಕೊಂಡವರು ಈ ರೀತಿ ಮಾತನಾಡಬಾರದು. ಪ್ರಹ್ಲಾದ್ ಜೋಶಿ ಅವರಿಗೆ ಬಡವರ ಬಗ್ಗೆ ಗೊತ್ತಿಲ್ಲ. ಭಾಗ್ಯಗಳನ್ನು ನಾವು ಯಾವಾಗಲೂ ಶ್ರೀಮಂತರಿಗೆ ಕೊಟ್ಟಿಲ್ಲ. ಅನ್ನಭಾಗ್ಯ, ಬಸ್ ಉಚಿತ, 200 ಯುನಿಟ್ ವಿದ್ಯುತ್, ಯುವನಿಧಿ ಇವುಗಳೆಲ್ಲ ಶ್ರೀಮಂತರಿಗಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:Vnay Kulkarni: ಕೋರ್ಟ್ ಮೇಲೆ ಭರವಸೆ ಇದೆ, ಹೈಕೋರ್ಟ್‌ಗೆ ಆಫೀಲು ಹೋಗುತ್ತೇನೆ: ವಿನಯ್ ಕುಲಕರ್ಣಿ