ದಾವಣಗೆರೆ: ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ರಂಭಾಪುರಿ ಜಗದ್ಗುರುಗಳು ಆದಷ್ಟು ಬೇಗ ಗುಣಮುಖರಾಗಲೆಂದು, ಪ್ರಾರ್ಥಿಸಿ ಆವರಗೊಳ್ಳ ಗ್ರಾಮದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಆವರಗೊಳ್ಳದ ಆದಿ ದೈವ ಕನ್ನೇಶ್ವರಸ್ವಾಮಿ, ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಕೋವಿಡ್‌ನಿಂದ ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ಜೇನು ತುಪ್ಪ, ಕ್ಷೀರ ಸಹಿತ ವಿಶೇಷ ರುದ್ರಾಭಿಷೇಕ ನೆರವೇರಿಸಿ, ಗ್ರಾಮದ ಹಿರಿಯರಿಂದ ಅಭಿಷೇಕ, ಅರ್ಚನೆ, ಪೂಜೆ ಸಲ್ಲಿಕೆ ಮಾಡಲಾಯಿತು.