ETV Bharat / state

ಮತ ಮಾರಾಟಕ್ಕಿಲ್ಲವೆಂದು ಯುವಕರು ಸಂಕಲ್ಪ ಮಾಡ್ಬೇಕು, ಇಲ್ಲವಾದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ: ಸ್ಪೀಕರ್ ಕಾಗೇರಿ - ಮತ ಮೌಲ್ಯದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ದಾವಣಗೆರೆಯಲ್ಲಿ ಪ್ರತಿಕ್ರಿಯೆ

ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲ ಸರಿ ಇದೆ ಎಂದುಕೊಳ್ಳಬೇಡಿ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ದೋಷ, ದೌರ್ಬಲ್ಯ ನೋಡಿದ್ರೇ ಭಯ ಆಗುತ್ತೇ. ನ್ಯಾಯಾಂಗದಲ್ಲಿ ನ್ಯಾಯ ಸಿಗುವುದಿಲ್ಲ. ಬದಲಿಗೆ ಜಡ್ಜ್​ಮೆಂಟ್​ ಸಿಗುತ್ತೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Jul 19, 2022, 9:22 PM IST

ದಾವಣಗೆರೆ: ಮತ ಮಾರಾಟಿಕ್ಕಿಲ್ಲ ಎಂದು ಯುವಕರು ಸಂಕಲ್ಪ ಮಾಡ್ಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶ್ರೀಲಂಕಾ ಆದಂತೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರಲ್ಲಿ ಸಂದೇಶ ರವಾನಿಸಿದರು.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿರುವುದು

ದಾವಣಗೆರೆಯಲ್ಲಿ ನಡೆದ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಂಕಲ್ಪ ಮಾಡೋಣ. ನನ್ನ ಮತ ಮಾರಾಟಕ್ಕೆ ಇಲ್ಲ ಎಂದು ಯುವಕರು ಆಂದೋಲನ ಆರಂಭಿಸಬೇಕಾಗಿದೆ. ಈ ವ್ಯವಸ್ಥೆ ಹಗುರವಾಗಿ ನೋಡಿದ್ರೇ ಅರಾಜಕತೆ ನಿರ್ಮಾಣ ಆಗುತ್ತದೆ. ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದರು.

ಆ ದೇಶದಲ್ಲಿ ಆಹಾರ ಇಲ್ಲ. ನೀರು, ಪೆಟ್ರೋಲ್, ಡೀಸೆಲ್​​ ಸಿಗ್ತಿಲ್ಲ. ಎಲ್ಲ ಅಗತ್ಯ ವಸ್ತುಗಳನ್ನು ನಾವು ನಮ್ಮ ಭಾರತ ದೇಶದಿಂದ ಕಳುಹಿಸುತ್ತಿದ್ದೇವೆ. ಮತ ಮಾರಾಟಕ್ಕಿಲ್ಲ ಎಂದು ಯುವಕರು ಸಂಕಲ್ಪವನ್ನು ಮಾಡ್ಬೇಕು. ಇಲ್ಲವಾದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ. ನೀರು ಆಹಾರ ಪೆಟ್ರೋಲ್ ಡೀಸೆಲ್​ಗಾಗಿ ಪರಿತಪಿಸಬೇಕಾಗುತ್ತದೆ ಎಂದು ಶ್ರೀಲಂಕಾದಲ್ಲಿ ತಲೆದೋರಿರುವ ಅರಾಜಕತೆ ಉದಾಹರಣೆ ನೀಡಿ ಯುವಕರೇ ಎಚ್ಚೆತ್ತುಕೊಳ್ಳಿ ಎಂದು ಕರೆ ನೀಡಿದರು.

ಎಲ್ಲ ಸರಿ ಇದೆ ಎಂದುಕೊಳ್ಳಬೇಡಿ: ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲ ಸರಿ ಇದೆ ಎಂದುಕೊಳ್ಳಬೇಡಿ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ದೋಷ, ದೌರ್ಬಲ್ಯ ನೋಡಿದ್ರೇ ಭಯ ಆಗುತ್ತೆ. ನ್ಯಾಯಾಂಗದಲ್ಲಿ ನ್ಯಾಯ ಸಿಗುವುದಿಲ್ಲ. ಬದಲಿಗೆ ಜಡ್ಜ್​ಮೆಂಟ್​ ಸಿಗುತ್ತೆ. ನಾನು ಕೂಡ ಅಲ್ಪಸ್ವಲ್ಪ ಲಾ ಓದಿದ್ದೇನೆ. ನ್ಯಾಯಾಂಗ ವ್ಯವಸ್ಥೆ ತನ್ನ ಮೌಲ್ಯವನ್ನು ಮೀರಿದೆ. ನ್ಯಾಯಾಂಗ ವ್ಯವಸ್ಥೆ ನಮ್ಮ ನಿರೀಕ್ಷೆಯಂತೆ ಇಲ್ಲ ಎಂದು ನ್ಯಾಯಾಂಗದ ಬಗ್ಗೆ ಪಾಠ ಮಾಡಿದ ಸ್ಪೀಕರ್, ನಿಮ್ಮ ಮತವನ್ನು ಹಣ ಹೆಂಡಕ್ಕೆ ಮಾರಿಕೊಳ್ಳಬೇಡಿ ಎಂದು ಯುವಕರಲ್ಲಿ ಕರೆ ನೀಡಿದರು. ಇನ್ನು ಹೆಂಡ ಎಂಬ ಪದವನ್ನು ಸರ್ಕಾರ ನಿಷೇಧ ಮಾಡಿದ್ರು, ಪ್ರತಿ ಮಾತಿಗೂ ಹೆಂಡ ಹೆಂಡ ಎಂದು ಸಾರಿ ಸಾರಿ ಹೇಳಿದರು.

ಪಕ್ಷಾತೀತವಾಗಿ ಒಮ್ಮತ ಸಿಕ್ಕಿದೆ: ಚುನಾವಣಾ ಸುಧಾರಣಾ ಕಾರ್ಯಕ್ರಮಗಳ ಬಗ್ಗೆ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪಿಸಿದ್ದೇನೆ. ಚುನಾವಣೆಯಲ್ಲಿ ಸುಧಾರಣೆ ತರಬೇಕೆಂಬುದಕ್ಕೆ ಪಕ್ಷಾತೀತವಾಗಿ ಒಮ್ಮತ ಸಿಕ್ಕಿದೆ. ಇದಕ್ಕೆ ಮಾಜಿ ಹಾಲಿ ಸಿಎಂಗಳಿಂದ ಕೂಡ ಒಮ್ಮತ ಸಿಕ್ಕಿದೆ. ಈಗಾಗಲೇ ಈ ಸಂವಾದ ಕಾರ್ಯಕ್ರಮವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗಿದೆ ಎಂದರು.

ನೆನಪು ಮೆಲುಕು: ನಾನು ಶಿಕ್ಷಣ ಮಂತ್ರಿಯಾಗಿದ್ದಾಗ ಸಾಕಷ್ಟು ಪಠ್ಯವನ್ನು ಪರಿಷ್ಕರಣೆ ಮಾಡಿದ್ದೆ. 1 ರಿಂದ 7 ನೇ ತರಗತಿಯ ತನಕ ಪಠ್ಯ ಪರಿಷ್ಕರಣೆ ಮಾಡಿದ್ದಾಗ ವಿವಾದ ಆಗಲಿಲ್ಲ. ಆದರೆ, ಇದೀಗ ಪಠ್ಯ ಪರಿಷ್ಕರಣೆ ಸಾಕಷ್ಟು ವಿವಾದ ಆಗಿದೆ. ನಾನು ಭಾರತೀಯ ದೃಷ್ಟಿಕೋನದಿಂದ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದೆ.

ಪರಕೀಯರು ಭಾರತದ ಮೇಲೆ ದಾಳಿ ಮಾಡಿದ್ರು, ಪರಕೀಯರ ವಿರುದ್ಧ ಅಂದಿನ ಶಿವಾಜಿಯ ಹೋರಾಟ ಸ್ಮರಿಸಿಕೊಳ್ಳಬೇಕು. ಪರಕೀಯರು ನಮ್ಮ ನಳಂದ, ತಕ್ಷಶೀಲ ಮೇಲೆ‌ ದಾಳಿ ಮಾಡಿ ನಾಶಗೊಳಿಸಿದ್ರು. ಅಂದು ಅವರ ಖಡ್ಗದ ತುದಿಯಿಂದ ಮತಾಂತರ‌ ಮಾಡಿದರು. ಇದೇ ಪರಕೀಯರು ಬಂದೂಕಿನಿಂದ ಹತ್ಯೆ ಮಾಡಿದ್ರು ಎಂದು ಶಿಕ್ಷಣ ಸಚಿವರಾಗಿದ್ದಾಗ ಮಾಡಿದ ಸುಧಾರಣೆ ಬಗ್ಗೆ ನೆನಪು ಮೆಲುಕು ಹಾಕಿದರು.

ಓದಿ: ನಾವು ಬಿಟ್ರೆ ತಾನೇ ಡಿಕೆಶಿ-ಸಿದ್ದರಾಮಯ್ಯ ಸಿಎಂ ಆಗೋದು: ಸಚಿವ ಬಿ. ಶ್ರೀರಾಮುಲು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.