ETV Bharat / state

ಮಂದಿನ ಸಿಎಂ ಸವದಿ ಜೀ ಎಂದು ಘೋಷಣೆ ಕೂಗಿದ ಅಭಿಮಾನಿಗೆ 'ನಡಿ ನಡಿ ಮನೆ ಕಡೆ' ಎಂದ ಡಿಸಿಎಂ - Social distance rule violation

ಕಾರ್ಯಕ್ರಮ ನಿಮಿತ್ತ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ದಾವಣಗೆರೆಗೆ ಬಂದ ವೇಳೆ, ಈಗಿನ ಉಪಮುಖ್ಯಮಂತ್ರಿ ಮುಂದಿನ ಮುಖ್ಯಮಂತ್ರಿ ಎಂದು ವ್ಯಕ್ತಿಯೋರ್ವ ಘೋಷಣೆ ಕೂಗಿದ. ಇದಕ್ಕೆ ಪ್ರತಿಕ್ರಿಯಿಸದ ಸವದಿ ನಡಿ-‌ನಡಿ ಎಂದು ಹೇಳುತ್ತಾ ಹೊರಟರು.

Social distance rule violation in davanagere
ಸಾಮಾಜಿಕ ಅಂತರ ನಿಯಮ ಉಲ್ಲಂಘನೆ....ಮುಂದಿನ ಸಿಎಂ ಎಂದವನಿಗೆ ಸವದಿ ಹೇಳಿದ್ದೇನು ಗೊತ್ತಾ?
author img

By

Published : May 27, 2020, 1:51 PM IST

ದಾವಣಗೆರೆ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ ಘಟನೆ ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕೋವಿಡ್-19 ಮೊಬೈಲ್ ಫೀವರ್ ಕ್ಲಿನಿಕ್ ಬಸ್​​​ಗೆ ಚಾಲನೆ ಹಾಗೂ ಅಧಿಕಾರಿಗಳ ಜೊತೆ ಸಭೆ ಇತ್ತು. ‌ಕಾರಿನಿಂದ ಸವದಿ ಇಳಿಯುತ್ತಿದ್ದಂತೆ ಅಧಿಕಾರಿಗಳು, ಕೆಎಸ್​ಆರ್​ಟಿಸಿ ಸಿಬ್ಬಂದಿ ವರ್ಗ ಡಿಸಿಎಂರನ್ನು ಸ್ವಾಗತಿಸಿದರು. ಈ ವೇಳೆ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರೂ ಕೂಡಾ ನಿಯಮ ಪಾಲಿಸಲಿಲ್ಲ. ಡಿಸಿಎಂ ಅವರನ್ನು ಸ್ವಾಗತಿಸುವಾಗಲೂ ಯಾರೂ ಕೂಡಾ ಅಂತರ ಕಾಯ್ದುಕೊಳ್ಳಲಿಲ್ಲ.

ಸಾಮಾಜಿಕ ಅಂತರ ನಿಯಮ ಉಲ್ಲಂಘನೆ

ಈ ವೇಳೆ ವ್ಯಕ್ತಿಯೊಬ್ಬ ಈಗಿನ ಉಪಮುಖ್ಯಮಂತ್ರಿ ಮುಂದಿನ ಮುಖ್ಯಮಂತ್ರಿ ಸವದೀ ಜೀಗೆ ಜೈ ಎಂದು ಘೋಷಣೆ ಕೂಗುತ್ತಿದ್ದಂತೆಯೇ ಅದಕ್ಕೆ ಪ್ರತಿಕ್ರಿಯಿಸದ ಸವದಿ ನಡಿ-‌ನಡಿ ಎಂದು ಹೇಳುತ್ತಾ ಹೊರಟರು.‌ ಇನ್ನೂ ಬಸ್ ನಿಲ್ದಾಣದಿಂದ ಕೆಎಸ್​ಆರ್​ಟಿಸಿ ಕಚೇರಿಯವರೆಗೆ ಬರುವಾಗಲೂ ಅಂತರ ಇಲ್ಲವಾಗಿತ್ತು. ಟೆಂಪ್ರೇಚರ್ ಟೆಸ್ಟ್ ಮಾಡಿದರೂ ಸ್ಯಾನಿಟೈಸರ್ ಹಾಕಿಕೊಳ್ಳದೇ ತೆರಳಿದರು. ‌

ಸಂಸದರಿಗಾಗಿ ಚಾಲನೆ ಮುಂದೂಡಿಕೆ: ಬೆಳಗ್ಗೆ 11 ಗಂಟೆಗೆ ಬಸ್ ಉದ್ಘಾಟನೆ ನಿಗದಿಯಾಗಿತ್ತು. ಆದರೆ ಡಿಸಿಎಂ ಸವದಿ ಬಂದದ್ದು 12.10ಕ್ಕೆ. ಇನ್ನೂ ಸಂಸದ ಜಿ.ಎಂ.ಸಿದ್ದೇಶ್ವರ್ ಆಗಮಿಸದ ಹಿನ್ನೆಲೆ ಆಮೇಲೆ ಚಾಲನೆ ನೀಡುತ್ತೇನೆಂದು ಹೇಳಿ ಹೊರಟರು. ಇದು ಬೆಳಗ್ಗೆಯಿಂದ ಕಾದಿದ್ದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಬೇಸರ ತರಿಸಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.