ETV Bharat / state

ಸಿದ್ದು ಅಮೃತ ಮಹೋತ್ಸವ: ಬೆಣ್ಣೆನಗರಿಯಲ್ಲಿ ಮೈಸೂರು ಪಾಕ್ ಘಮಲು, ಹೇಗಿದೆ ಔತಣದ ಸಿದ್ಧತೆ?

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಭರದೆ ಸಿದ್ಧತೆ- ಮೈಸೂರು ಪಾಕ್​, ಬಿಸಿ ಬೇಳೆಬಾತ್, ಪಲಾವ್, ಮೊಸರು ಬಜ್ಜಿ, ಮೊಸರನ್ನದ ಔತಣ- ಲಕ್ಷ, ಲಕ್ಷ ಅಭಿಮಾನಿಗಳಿಗೆ ಭರ್ಜರಿ ಊಟದ ತಯಾರಿ

six-lakh-mysore-pak-are-being-prepared-for-siddaramaiahs-amruta-mahotsava-in-davanagere
ಸಿದ್ದು ಅಮೃತ ಮಹೋತ್ಸವ: ಬೆಣ್ಣೆನಗರಿಯಲ್ಲಿ ಮೈಸೂರು ಪಾಕ್ ಘಮ, ಎಷ್ಟು ಲಕ್ಷ ಜನರಿಗೆ ಊಟದ ಸಿದ್ದತೆ?
author img

By

Published : Jul 30, 2022, 9:01 PM IST

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಆಗಸ್ಟ್ 3ರಂದು ನಡೆಯಲಿರುವ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಅಗಮಿಸುವ ಸಿದ್ದರಾಮಯ್ಯ ಅಭಿಮಾನಿಗಳಿಗಾಗಿಯೇ ಸವಿಯಲು ಆರು ಲಕ್ಷ ಮೈಸೂರು ಪಾಕ್​ ಸಿದ್ಧವಾಗುತ್ತಿದೆ.

ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದೆ ಬಿಚ್ಚಿಡಲು ಕೈ ಪಾಳೆಯದಿಂದ ಸಿದ್ದರಾಮಯ್ಯ ಅಮೃತ ಮಹೋತ್ಸವ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮಕ್ಕಾಗಿ ವೇದಿಕೆ ಸಜ್ಜುಗೊಳಿಸಿದೆ. ಐದಾರು ಲಕ್ಷಕ್ಕೂ ಹೆಚ್ಚು ಜನರು ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇದೆ. ಹೀಗಾಗಿಯೇ ಕಾಂಗ್ರೆಸ್​ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರು ಹಾಗೂ ಜನ ಸಾಮಾನ್ಯರಿಗೆ ಉಣ ಬಡಿಸಲು ಬಗೆ-ಬಗೆಯ ತಿಂಡಿಗಳನ್ನು ತಯಾರಿಸಲಾಗುತ್ತದೆ.

150ಕ್ಕೂ ಹೆಚ್ಚು ಬಾಣಸಿಗರು: ಬೆಂಗಳೂರಿನ ಕ್ಯಾಟರಿಂಗ್​ನವರಿಗೆ ಊಟದ ಜವಾಬ್ದಾರಿ ವಹಿಸಲಾಗಿದೆ. ನಗರದ ಹೊರವಲಯದಲ್ಲಿರುವ ಕುಂದುವಾಡ ಬಳಿಯ ಸುಷಿ ಕನ್ವೆನ್ಷನ್ ಹಾಲ್​ನಲ್ಲಿ ಆರು ಲಕ್ಷ ಮೈಸೂರು ಪಾಕ್​ ಸಿದ್ಧವಾಗುತ್ತಿವೆ. ಜುಲೈ 28ರಿಂದಲೇ ಮೈಸೂರು ಪಾಕ್​ ತಯಾರಿಸಲು 150ಕ್ಕೂ ಹೆಚ್ಚು ಬಾಣಸಿಗರು ನಿಂತಿದ್ದು, ದಿನಕ್ಕೆ ಒಂದರಿಂದ ಎರಡು ಲಕ್ಷದಷ್ಟು ಮೈಸೂರು ಪಾಕ್​ ತಯಾರಿಸಲಾಗುತ್ತಿದೆ.

ಸಿದ್ದು ಅಮೃತ ಮಹೋತ್ಸವ: ಬೆಣ್ಣೆನಗರಿಯಲ್ಲಿ ಮೈಸೂರು ಪಾಕ್ ಘಮಲು, ಎಷ್ಟು ಲಕ್ಷ ಜನರಿಗೆ ಊಟದ ಸಿದ್ದತೆ?

ಈಗಾಗಲೇ ಎರಡೂವರೆ ಲಕ್ಷ ಮೈಸೂರು ಪಾಕ್​ ಸಿದ್ಧಪಡಿಸಲಾಗಿದೆ. ತಯಾರಿದ ಮೈಸೂರು ಪಾಕ್​ಅನ್ನು ಸುರಕ್ಷಿತವಾಗಿ ರೊಟ್ಟಿನ ಬಾಕ್ಸ್​ನಲ್ಲಿ ಪ್ಯಾಕ್ ಮಾಡಿ ಇಡಲಾಗುತ್ತಿದೆ. ಮೈಸೂರು ಪಾಕ್​ ತಯಾರಿಸಲು ಒಟ್ಟು ಎರಡು ಸಾವಿರ ಲೀಟರ್ ತುಪ್ಪ, ಎರಡು ಸಾವಿರ ಲೀಟರ್ ಹಾಲು, ಎರಡು ಸಾವಿರ ಕೆಜಿ ಕಡಲೆಹಿಟ್ಟು, 4 ಸಾವಿರ ಕೆಜಿ ಸಕ್ಕರೆ ಸೇರಿದಂತೆ ವಿವಿಧ ಸಾಮಗ್ರಿಗಳ ಬಳಸಲಾಗಿದೆ ಎನ್ನುತ್ತಾರೆ ಬಾಣಸಿಗರು.

ಮೈಸೂರು ಪಾಕ್​ನೊಂದಿಗೆ ಬೇರೆ ಖಾದ್ಯಗಳು: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬರುವ ಜನರಿಗೆ ಮೈಸೂರು ಪಾಕ್​ನೊಂದಿಗೆ ಬೇರೆ ಖಾದ್ಯಗಳು ಉಣ ಬಿಡಿಸಲಾಗುತ್ತಿದೆ. ಬಿಸಿ ಬೇಳೆಬಾತ್, ಪಲಾವ್, ಮೊಸರುಬಜ್ಜಿ, ಮೊಸರನ್ನ ಕೂಡ ಮಾಡಲಾಗುತ್ತದೆ. ಆಗಸ್ಟ್​ 2ರವರೆಗೂ ಆರು ಲಕ್ಷ ಮೈಸೂರು ಪಾಕ್​ ತಯಾರಿಕೆ ಪೂರ್ಣವಾಗಲಿದೆ. ನಂತರ ಬೇರೆ ಖಾದ್ಯಗಳ ತಯಾರಿಕೆಯಲ್ಲಿ ತೊಡಲಾಗುವುದು ಎಂದೂ ಬಾಣಸಿಗರು ಹೇಳುತ್ತಾರೆ.

ಅಡುಗೆ ಮಾಡಲೆಂದೇ ಮೂರು ಕೋಣೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಆಗಸ್ಟ್​ 3ರಂದು ಒಟ್ಟಾರೆ ಬಾಣಿಸಿಗರು ಹಾಗೂ ಸಹಾಯಕರು ಸೇರಿ ಎರಡು ಸಾವಿರ ಜನರು ಅಡುಗೆ ತಯಾರಿಕೆ ಮತ್ತು ಇತರ ಕಾರ್ಯಗಳಿಗೆ ಇರುತ್ತಾರೆ. ಒಂದೊಂದು ಕಡೆ 170 ಕೌಂಟರ್​ಗಳ ಇರಲಿವೆ.

ಕಾರ್ಯಕ್ರಮಕ್ಕೆ ಬರುವ ಮಹಿಳೆಯರಿಗೆ ಪ್ರತ್ಯೇಕವಾಗಿ ಊಟದ ಕೌಂಟರ್ ವ್ಯವಸ್ಥೆ ಇರುತ್ತದೆ. ಆಗಸ್ಟ್ 3ರ ಬೆಳಗ್ಗೆ 9 ಗಂಟೆಯಿಂದಲೇ ಜನರಿಗೆ ಊಟ ಪ್ರಾರಂಭವಾಗಲಿದೆ. ಸದ್ಯಕ್ಕೆ ಆರು ಲಕ್ಷ ಜನರಿಗೆಂದು ಊಟದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬರುವ ಜನರನ್ನು ನೋಡಿಕೊಂಡು ಮತ್ತಷ್ಟು ಅಡುಗೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆಯಂತೆ. ಒಟ್ಟಾರೆ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬರುವ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಇರಲಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೀದರ್ - ದಾವಣಗೆರೆ ವಿಶೇಷ ರೈಲು ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.