ದಾವಣಗೆರೆ: ನಗರದ ಎಸ್‌ಎಸ್ ಲೇಔಟ್ 6ನೇ ಕ್ರಾಸ್ ಇಂಡೋರ್ ಸ್ಟೇಡಿಯಂ ಬಳಿ ಇರುವ ಅಪರ ಜಿಲ್ಲಾಧಿಕಾರಿ ಮನೆಗೆ ನುಗ್ಗಿರುವ ಕಳ್ಳರು ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ನಿನ್ನೆ ತಮ್ಮ ಹೊಸ ಮನೆಗೆಂದು ಕೆಲ ಸಾಮಗ್ರಿ ಹಾಗು ವಸ್ತುಗಳನ್ನು ಸಾಗಿಸಿ ಕುಟುಂಬಸ್ಥರು ಪೂಜಾಕಾರ್ಯಗಳನ್ನು ನಡೆಸಿದ್ದಾರೆ. ಈ ಪೂಜೆಗೆ ಬಳಸಿದ್ದ ಬೆಳ್ಳಿ ದೀಪ, ಇನ್ನಿತರೆ ಸಾಮಾನುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಓದಿ: ಬೆಂಗಳೂರಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ: ಮಗ ಸಾವು, ತಾಯಿ ಸ್ಥಿತಿ ಗಂಭೀರ
ಹೊಸ ಮನೆಗೆ ತೆರಳದೆ ನಿನ್ನೆ ಹಳೇ ಮನೆಯಲ್ಲಿ ವಾಸವಿದ್ದ ಎಡಿಸಿ ವೀರಮಲ್ಲಪ್ಪ ಹಾಗು ಅವರ ಕುಟುಂಬವನ್ನು ಗಮನಿಸಿರುವ ಕಳ್ಳರು, ಹೊಸ ಮನೆಯ ಹಿಂಬಾಗಿಲು ಮುರಿದು ಈ ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾನಗರ ಪಿಎಸ್ಐ ರೂಪಾ ತೆಂಬದ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.