ದಾವಣಗೆರೆ: ಕಳೆದ ಒಂದೂವರೆ ತಿಂಗಳಿನಿಂದಲೂ ಚುನಾವಣಾ ಪ್ರಚಾರ ಭರಾಟೆಯಲ್ಲಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಮತದಾನದ ಬಳಿಕ ಅವರು ನಿರಾಳರಾಗಿರುವುದು ಕಂಡು ಬಂತು.
ಜಿ.ಎಂ ಸಿದ್ದೇಶ್ವರ್ ಅವರನ್ನು ವಿಶ್ರಾಂತಿಗಾಗಿ ಅವರು ಮಕ್ಕಳು ದಕ್ಷಿಣ ಆಫ್ರಿಕಾಗೆ ಕರೆಯುತ್ತಿದ್ದಾರಂತೆ. ಆದ್ರೆ, ಅಲ್ಲಿಗೆ ಹೋಗುವ ಮನಸ್ಸು ಮಾಡಿಲ್ಲ ಎಂದರು. ಆದರೆ, ಜಿಂದಾಲ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದು, ಈ ಬಗ್ಗೆ ಕುಟುಂಬದ ಸದಸ್ಯರ ಜೊತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು.
ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ತಾನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದರು.
ಪತ್ನಿ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳಿನಿಂದ ಅವರು ತುಂಬಾ ಬ್ಯುಸಿ ಇದ್ದರು. ನಾವೂ ಸಹ ಪ್ರಚಾರಕ್ಕೆ ತೆರಳಿ ಮತಯಾಚಿಸಿದ್ದೇವೆ. ಈ ಬಾರಿಯೂ ತಮ್ಮ ಪತಿ ಗೆಲ್ಲುವುದಾಗಿ ಹೇಳಿಕೊಂಡರು.