ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅರ್ಧಕ್ಕೆ ಅಂತ ಯಾರು ಹೇಳಿಲ್ಲ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎನ್ನುವ ವಿಶ್ವಾಸ ಇದೆ. ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇಂದು ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತ್ತು. ಈ ಕಾರ್ಯಕ್ರಮದ ಲ್ಲಿ ಮಾಧ್ಯಮಗಳೊಂದಿಗೆ ಕೇಂದ್ರ ಸರ್ಕಾರ ಅನ್ನಭಾಗ್ಯ ಅಕ್ಕಿ ಖರೀದಿಗೆ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿ ಅಕ್ಕಿ ಖರೀದಿ ಬಗ್ಗೆ ಎಲ್ಲಾವನ್ನು ಸರಿಪಡಿಸುತ್ತೇವೆ. ಬಿಜೆಪಿಯವರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಬಿಜೆಪಿಯವರಿಗೆ ಸಂಬಂದಪಟ್ಟ ವಿಚಾರವಲ್ಲ. ಪ್ರಧಾನಮಂತ್ರಿ ಮೋದಿ ಅವರು 15 ಲಕ್ಷ ರೂ. ಕೊಡುತ್ತೀನಿ ಎಂದಿದ್ದರು ಕೊಟ್ಟಿದ್ದಾರಾ?. ಅವರ 10 ಭರವಸೆಗಳು ಹಾಗೇ ಇವೆ. ನಮ್ಮ ಸರ್ಕಾರ ರಚನೆಯಾಗಿ 15 ದಿನಗಳು ಕಳೆದಿದ್ದು, ಇನ್ನೂ ಕಾಲಾವಕಾಶ ಬೇಕು. ಎಲ್ಲವನ್ನು ಸರಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಪಠ್ಯ ಪುಸ್ತಕ ಶಿಕ್ಷಣ ವಿರುದ್ಧವಾಗಿದೆ. ಅದನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದೀವಿ. ಅದನ್ನು ನಾವು ಬದಲಾವಣೆ ಮಾಡುತ್ತೇವೆ. ಇದರಲ್ಲಿ ಗೊಂದಲ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೋಳಿ ಹೇಳಿದರು.
ಕ್ರೀಡಾ ಸಚಿವ ಬಿ. ನಾಗೇಂದ್ರ ಅವರು ಮಾಮ, ಮಾಮ ಅಂದ್ಕೊಂಡೆ ಶ್ರೀರಾಮುಲು ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಪ್ರಬಲ ವ್ಯಕ್ತಿಯನ್ನು ಸೋಲಿಸಿ ನಾಗೇಂದ್ರ ಸಚಿವರಾಗಿದ್ದಾರೆ ಎಂದು ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿಗೆ ಸತೀಶ್ ಜಾರಕಿಹೊಳಿ ಹೇಳಿದರು. ಬಿಜೆಪಿ ಎಸ್ಟಿ ಮೀಸಲಾತಿ ನೀಡಿದೆ ಅಂತ ನೀವು ಮರುಳಾಗಬೇಡಿ. ಎಸ್ಟಿ ಸಮುದಾಯಕ್ಕೆ ಬಿಜೆಪಿ ಪ್ರೀತಿಯಿಂದ ಮೀಸಲಾತಿ ಕೊಟ್ಟಿಲ್ಲ. ಚುನಾವಣೆಯಲ್ಲಿ ಸಮುದಾಯ ಕೈಕೊಡುತ್ತೆ ಅನ್ನೋ ಭಯದಲ್ಲಿ ಕೊಟ್ಟಿರೋದು. ಸ್ವಾಮೀಜಿಯ 274 ದಿನ ಧರಣಿಗೆ ಹೆದರಿ ಬಿಜೆಪಿ ಮೀಸಲಾತಿ ಕೊಟ್ಟಿರೋದು.
ಸ್ವಾಮೀಜಿ ಬಿಜೆಪಿ ಅವರು ಬಂದಾಗ ಅವರಂತೆ, ನಾವು ಬಂದಾಗ ನಮ್ಮಂತೆ ಇರಬಾರದು. ಬಿಜೆಪಿಯ ನಾಲ್ಕೈದು ಜನರ ಮೇಲೆ ಮಾತ್ರ ವಿಶ್ವಾಸವಿಡಿ. ಎಲ್ಲರನ್ನೂ ನಂಬಬೇಡಿ. ವಾಲ್ಮೀಕಿ ಸಮುದಾಯ ಕಾಂಗ್ರೆಸ್ ಗೆ ಕೇವಲ 46% ಮತ ಹಾಕಿದೆ. 54% ನಮಗೆ ವಿರೋಧವಾಗಿ ಮತ ಚಲಾಯಿಸಿದ್ದಾರೆ. ನೋಡೋಣ ಮುಂದಿನ ದಿನಗಳಲ್ಲಿ ಸುಮುದಾಯದವರು ಬದಲಾಗುತ್ತಾರೆ ಎಂದು ಹೇಳಿದರು.
ಸಮುದಾಯ ಭವನ ಕೇಳುವ ಬದಲು ಶಿಕ್ಷಣ ಶಾಲೆಗಳನ್ನು ಕೇಳಿ : ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮುದಾಯ ಭವನ ನಿರ್ಮಿಸಲಾಗಿದೆ. ಆ ಸಮುದಾಯ ಭವನಗಳಿಂದ ಸಮುದಾಯಕ್ಕೆ ಏನು ಲಾಭ ಆಗಿದೆ ಅನ್ನೋದನ್ನು ಯೋಚಿಸಬೇಕಿದೆ. ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಮುದಾಯ ಭವನಕ್ಕಿಂತ ಶಾಲೆಗಳು ಮುಖ್ಯ. ಯಾರೂ ಇದುವರೆಗೂ ನಮ್ಮೂರಿಗೆ ಶಾಲೆ ಬೇಕು ಅಂತ ಕೇಳಿಲ್ಲ. ನಾನು 21 ವರ್ಷದಿಂದ ನೋಡುತ್ತಿದ್ದೇನೆ. ಬರೀ ಸಮುದಾಯ ಭವನಕ್ಕೆ ಅಂತ ನನ್ನ ಬಳಿ ಬರುತ್ತಾರೆ. ಎಸ್ಸಿ-ಎಸ್ಟಿ ಸಮುದಾಯವರು ಸಮುದಾಯ ಭವನಕ್ಕೆ ಹೋರಾಟ ಮಾಡುವುದನ್ನು ಕೈಬಿಡಬೇಕು. ಎಷ್ಟೋ ಕಡೆ ಸಮುದಾಯ ಭವನ ನೀಡಿಲ್ಲ ಅಂತ ಶಾಸಕರನ್ನೇ ಸೋಲಿಸಿದ್ದಾರೆ. ಶಿಕ್ಷಣ ಯಾರೂ ಕದಿಯಲಾರದ ಆಸ್ತಿ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಜನ ಬದಲಾಗಬೇಕು. ಈ ಸಮುದಾಯ ಭವನ ಅನ್ನೋ ಕಾನ್ಸೆಪ್ಟ್ ನಿಲ್ಲಬೇಕು. ಶಾಲೆ ಕಾನ್ಸೆಪ್ಟ್ ಬರಬೇಕು ಎಂದು ಜನರಿಗೆ ಸತೀಶ್ ಜಾರಕಿಹೊಳಿ ಸಂದೇಶ ರವಾನಿಸಿದರು.
ಸ್ಕೀಂಗಳು ದುರುಪಯೋಗ : ಎಸ್ಸಿ-ಎಸ್ಟಿ ಸಮುದಾಯದ ಭೂರಹಿತರಿಗೆ ಭೂಮಿ ಕೊಡೋ ಯೋಜನೆಯೂ ವ್ಯರ್ಥ ಆಗುತ್ತಿದೆ. 3 ಲಕ್ಷದ ಭೂಮಿಗೆ 15 ಲಕ್ಷ ಕೊಡಿಸಿ ಅಕ್ರಮ ಮಾಡುತ್ತಿದ್ದಾರೆ. ಎಸ್ಸಿ-ಎಸ್ಟಿ ಸಮುದಾಯದ ಬಹಳಷ್ಟು ಸ್ಕೀಂಗಳು ದುರುಪಯೋಗ ಆಗುತ್ತಿವೆ. ಗಂಗಾ ಕಲ್ಯಾಣ ಯೋಜನೆ ಅಡಿ, ಬೋರ್ವೆಲ್ ಗೆ ಇನ್ನೂ ಕೆನೆಕ್ಷನ್ ಕೊಟ್ಟಿಲ್ಲ ಎಂದು ಸಚಿವರು ಹೇಳಿದರು.
ಇದನ್ನೂ ಓದಿ : Electricity Bill: ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಗೊಂದಲ ಇದೆ - ಸಚಿವ ಸತೀಶ್ ಜಾರಕಿಹೊಳಿ