ETV Bharat / state

ಸಿಎಂ ಆದ ಬಳಿಕ ಸಿದ್ದರಾಮಯ್ಯ ಮೊದಲ ಬಾರಿಗೆ ದಾವಣಗೆರೆ ಭೇಟಿ; ಅಧಿಕಾರಿಗಳಿಗೆ ಖಡಕ್ ಸಂದೇಶ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಅಧಿಕಾರಿಗಳು, ಜನಪ್ರತಿನಿಧಿಗಳು ಜನರೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
author img

By

Published : Jun 5, 2023, 10:31 PM IST

Updated : Jun 5, 2023, 10:40 PM IST

ದಾವಣಗೆರೆ : ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ಸು ಕಂಡ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಂತರ ಸಿದ್ದರಾಮಯ್ಯ ಪ್ರಪ್ರಥಮ ಬಾರಿಗೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಭೆ‌ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಂದು ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಇಂದು ಕೈ ನಾಯಕರಿಗೆ ಅದೃಷ್ಟದ ಜಿಲ್ಲೆಯಾಗಿ ಪರಿಣಮಿಸಿದೆ.

ಚುನಾವಣೆ ವೇಳೆ ದಾವಣಗೆರೆಯಲ್ಲಿ ಸಮಾವೇಶ ಮಾಡಿದರೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ ಎಂಬ ವಾಡಿಕೆ ಇದೆ. ಕಾಕತಾಳೀಯ ಎಂಬಂತೆ ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟಹಬ್ಬ ಆಚರಣೆ ಮಾಡುವ ಮೂಲಕ ಇಡೀ ಕಾಂಗ್ರೆಸ್ ನಾಯಕರು ಅದೃಷ್ಟ ಪರೀಕ್ಷೆ ಮಾಡಿದ್ದರು.

ಅದರಂತೆ ಸಿದ್ದರಾಮಯ್ಯ ಸಿಎಂ ಹುದ್ದೆ ಅಲಂಕರಿಸಿದ ಬಳಿಕ ತಮ್ಮ ಅದೃಷ್ಟದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ದಾವಣಗೆರೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ನೇರವಾಗಿ ದಾವಣಗೆರೆಗೆ ಬಂದ ಅವರು ದಾವಣಗೆರೆ ಜಿಲ್ಲಾ ಪಂಚಾಯತ್‌ನಲ್ಲೇ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು. ಕೆಲ ಅಧಿಕಾರಿಗಳಿಗೆ ಚಳಿ ಬಿಡಿಸಿ ಆಕ್ರೋಶ ಹೊರಹಾಕಿದರು.‌

ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಜನರೊಂದಿಗೆ ಉತ್ತಮವಾದ ಸಂಬಂಧ ಹೊಂದಿರಬೇಕು. ಜನರ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡಬೇಕು. ಡಿಲೇ ಮೋಸ್ಟ್ ಕರಪ್ಷನ್. ಆದರಿಂದ ಡಿಲೇ ಮಾಡಬೇಡಿ. ಜನಸ್ನೇಹಿ ಆಡಳಿತ ನೀಡಿ. ಜನರು ಕಚೇರಿಗೆ ಬಂದರೆ ಅವರೊಂದಿಗೆ ಗೌರವಯುತವಾಗಿ ಮಾತನಾಡಿ. ಕಷ್ಟಗಳನ್ನು ಅಲಿಸಿ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡಿ, ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ನಾವು ಪ್ರತಿನಿಧಿಗಳು ಅವರು ಮಾಲೀಕರು, ಅವರು ಹಕ್ಕನ್ನು ಚಲಾಯಿಸಿ ನಮಗೆ ಶಕ್ತಿಸೌಧಕ್ಕೆ ಕಳುಹಿಸಿದ್ದಾರೆ. ಅದರೆ ಅಸಡ್ಡೆ, ಉಡಾಫೆ ಮಾಡಿ ಕೆಲಸ ಮಾಡುವವರಿಗೆ ಇಲ್ಲಿ ಜಾಗ ಇಲ್ಲ. ಜನ ಬದಲಾವಣೆ ಬಯಸಿದ್ದಾರೆ. ಬದಲಾವಣೆ ಬಯಸಿದ್ದರಿಂದ ಜನರ ಆಶೋತ್ತರಗಳನ್ನು ನೆರವೇರಿಸುವುದು ನಮ್ಮ ಕರ್ತವ್ಯ. ಆಶೋತ್ತರಗಳನ್ನು ಈಡೇರಿಸದೆ, ಸ್ಪಂದಿಸದೇ ಹೋದರೆ ಅಂಥವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಜಿಲ್ಲೆಯಲ್ಲಿ ಲಂಚ ಪಡೆಯುವುದು ಹೆಚ್ಚಾಗಿದೆ ಎಂದು ಜನರು ನನ್ನ ಗಮನಕ್ಕೆ ತಂದಿದ್ದಾರೆ. ಅದ್ದರಿಂದ ಸಿಇಒ ಹಾಗು ಜಿಲ್ಲಾಧಿಕಾರಿ ಇಬ್ಬರು ಎಲ್ಲ ಸರ್ಕಾರಿ ಹಾಗು ಆಸ್ಪತ್ರೆಗಳಿಗೆ ಭೇಟಿ ಕೊಡಬೇಕು. ಭೇಟಿ ನೀಡದೆ ಜನರ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳುಲಾಗುವುದು. ನಿಮ್ಮ ಜವಾಬ್ದಾರಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ, ಜಿಲ್ಲಾ ಮಂತ್ರಿ ಏನ್ ಹೇಳುತ್ತಾರೋ ಅದರಂತೆ ನಡೆದುಕೊಳ್ಳಿ ಎಂದು ಹೇಳಿದರು.

ನೀವು ಕೆಳ ಮಟ್ಟದಿಂದ ಕಚೇರಿಗಳಿಗೆ ಭೇಟಿ ಕೊಡಲಿಲ್ಲ ಅಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. ಆಡಳಿತ ಯಂತ್ರ ಜಡ್ಡು ಹಿಡಿದಿದೆ. ಅದಕ್ಕೆ ಚುರುಕು ಮುಟ್ಟಿಸಬೇಕಾಗಿದೆ. ಬಹಳ ಜನ ಅಧಿಕಾರಿಗಳು ಫೀಲ್ಡ್‌ಗೆ ಹೋಗುವುದಿಲ್ಲ. ಜಿಲ್ಲಾ ಕಚೇರಿಯಲ್ಲಿ ಕೂರುವುದನ್ನು ಸಹಿಸುವುದಿಲ್ಲ. ನಿಮಗೆ ಸಂಚರಿಸಲು ಎಲ್ಲ ಸೌಲಭ್ಯಗಳನ್ನು ನೀಡಿದ್ದೇವೆ. ಸೌಲಭ್ಯ ನೀಡಿರುವುದು ಐಷಾರಾಮಿ ಜೀವನ ಮಾಡಲು ಅಲ್ಲ. ನಿಮ್ಮ ಅಧಿಕಾರ ಯಾವುದೇ ಕಾರಣಕ್ಕೆ ದುರುಪಯೋಗ ಆಗಬಾರದು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ : ಬಿಜೆಪಿಯ 40 ಪರ್ಸೆಂಟ್ ಸರ್ಕಾರ ರಾಜ್ಯದ ಮಾನ ಹರಾಜು ಹಾಕಿದೆ: ಸಚಿವ ಶಿವರಾಜ ತಂಗಡಗಿ

Last Updated : Jun 5, 2023, 10:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.