ದಾವಣಗೆರೆ: ಮದುವೆಗೆ ಹೆಚ್ಚು ಜನ ಸೇರಿಸಿದ್ದಕ್ಕೆ ಹಾಗೂ ಮಾಸ್ಕ್ ಧರಿಸದ ಮಾಜಿ ಸಚಿವ ಪಿ ಟಿ ಪರಮೇಶ್ವರ್ ನಾಯ್ಕ್ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ನಯವಾಗಿ ಗದರಿದ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ನಡೆದಿದೆ.
ಅದ್ದೂರಿ ವಿವಾಹಕ್ಕೆ ಬಂದ ಸಿದ್ದರಾಮಯ್ಯ ಅವರು ಕಾರು ಇಳಿಯುತ್ತಿದ್ದಂತೆಯೇ, ಮಾಜಿ ಸಚಿವ ಪಿಟಿಪಿ ಅವರಿಗೆ ಬುದ್ಧಿ ಹೇಳಿದರು. ಮಾಸ್ಕ್ ಹಾಕ್ಕೊಳ್ಳಯ್ಯ,50 ಜನಕ್ಕಿಂತ ಹೆಚ್ಚು ಜನರನ್ನು ಸೇರಿಸಿದ್ದೀಯಾ.. ನಿನ್ನ ಮೇಲೆ ಕೇಸ್ ಹಾಕ್ತಾರೆ ನೋಡು.. ಅಂತಾ ನಯವಾಗಿ ಆಪ್ತನಿಗೆ ಎಚ್ಚರಿಸಿದರು.
ಕಾರಿನಿಂದ ಇಳಿದ ಕೂಡಲೇ ಸಿದ್ದರಾಮಯ್ಯ ಹೀಗೆ ಹೇಳುತ್ತಿದ್ದಂತೆಯೇ ತಕ್ಷಣ ಜಾಗೃತರಾದ ಪಿಟಿಪಿ, ಮೀಡಿಯಾದವರು ಇದ್ದಾರೆ ಸುಮ್ನಿರಿ ಸರ್.. ಎಂದು ಹೇಳುತ್ತಾ ಸಿದ್ದರಾಮಯ್ಯರನ್ನು ಸುಮ್ಮನಾಗಿಸಲು ಪಿಟಿಪಿ ಯತ್ನಿಸಿದರು.