ETV Bharat / state

ಕಾಂಗ್ರೆಸ್ ಸೋತು ಸುಣ್ಣ ಆದ್ಮೇಲೆ ಈಗ ಒಂದೇ ಎಂದು ಬರ್ತಿದ್ದಾರೆ: ಶಾಮನೂರು ಶಿವಶಂಕರಪ್ಪ ಟಾಂಗ್​ - ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿಕೆ

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮೊದಲ ಬಾರಿ ಒಂದಾಗುವ ಹೇಳಿಕೆಯನ್ನು ಶಾಮನೂರು ನೀಡಿದರು. ಬಂದರೆ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಕಾಂಗ್ರೆಸ್ ಸೋತು ಸುಣ್ಣ ಆದಮೇಲೆ ಈಗ ಒಂದೇ ಎಂದು ಬರುತ್ತಿದ್ದಾರೆ. ಬೇರೆ ಬೇರೆ ಎಂದು ಎರಡು ಮಾಡಲು ಹೊರಟಿದ್ದರು ಎಂದು ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Shamanuru Shivashankarappa statement in Davanagere
ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ
author img

By

Published : Sep 4, 2021, 4:38 PM IST

ದಾವಣಗೆರೆ: ಕಾಂಗ್ರೆಸ್ ಸೋತು ಸುಣ್ಣ ಆದ ಮೇಲೆ ಈಗ ಒಂದೇ ಎಂದು ಬರುತ್ತಿದ್ದಾರೆ. ಬೇರೆ ಬೇರೆ ಎಂದು ಎರಡು ಮಾಡಲು ಹೊರಟಿದ್ದರು. ಇವಾಗ ಒಂದೇ ಎಂದು ಬಂದಿದ್ದಾರೆ. ಬರಲಿ ಬಿಡಿ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸ್ವ- ಪಕ್ಷದವರ ವಿರುದ್ಧ ಗುಡುಗಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮೊದಲ ಬಾರಿ ಒಂದಾಗುವ ಹೇಳಿಕೆಯನ್ನು ಶಾಮನೂರು ನೀಡಿದರು. ಬಂದರೆ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ವೀರಶೈವ ಲಿಂಗಾಯಿತ ಎರಡು ಒಂದೇ. ಬೆಂಬಲ‌ ಕೊಟ್ಟರೆ ಎಲ್ಲ ಬಡವರಿಗೆ ಸಹಾಯ ಆಗಲಿದೆ ಎಂದು ಹೇಳಿದರು.

ಮುಂದೆ ಎಲ್ಲಾ ಸರಿ ಹೋಗತ್ತೆ ಎಂ.ಬಿ.ಪಾಟೀಲ್ ಈಗ ಎಲ್ಲರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಸರಿಯಾಗಿ ಹೇಳಿದ್ದಾರೆ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಜನರು ಅಷ್ಟು ದಡ್ಡರಲ್ಲ, ಎಲ್ಲವನ್ನು ನೋಡುತ್ತಿದ್ದಾರೆ ಎಂದರು.

ಜಾಮದಾರ್ ಹೇಳಿಕೆಗೆ ಶಾಮನೂರು ತಿರುಗೇಟು:

ಜಾಮದಾರ್​ನನ್ನ ಮೊದಲು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು. 99 ಉಪ ಪಂಗಡಗಳಿವೆ, ಎಲ್ಲರೂ ಒಂದೇ. ಅದರಲ್ಲಿ ಜಾಮದಾರ್ ಯಾರು ಅನ್ನೋದು ಮೊದಲು ನಿರ್ಣಯಿಸಲಿ, ಅಧಿಕಾರದಲ್ಲಿ ಇದ್ದಾಗ ಯಾರಿಗೂ ಸಹಾಯ ಮಾಡಲಿಲ್ಲ, ಈಗ ನೂರೆಂಟು ಮಾತನಾಡುತ್ತಾನೆ ಎಂದು ಶಾಮನೂರು ಕಿಡಿಕಾರಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.