ETV Bharat / state

ಎಸ್ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ವಾಗೀಶ್ ಸ್ವಾಮಿಗೆ ವಿರೋಧ - ಬಿಜೆಪಿ ಪಕ್ಷದ ಶಾಸಕ ಪ್ರೋ. ಲಿಂಗಣ್ಣ

ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಎಸ್ಸಿ ಮೀಸಲು ಕ್ಷೇತ್ರದಲ್ಲಿ ವಾಗೀಶ್ ಸ್ವಾಮಿ ಎಸ್ಸಿ ಸರ್ಟಿಫಿಕೇಟ್ ಪಡೆದು ಬಿಜೆಪಿಯಿಂದ ಸ್ಪರ್ಧಿಸಲು ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇದಕ್ಕೆ ಎಸ್ಸಿ ಸಮುದಾಯದ ಕೆಲ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದೆ.

SC reserved assembly constituency fight
ಎಸ್ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ವಾಗೀಶ್ ಸ್ವಾಮಿಗೆ ವಿರೋಧ
author img

By

Published : Mar 29, 2022, 9:24 PM IST

ದಾವಣಗೆರೆ: ದಾವಣಗೆರೆ ‌ಜಿಲ್ಲೆಯ ಮಾಯಕೊಂಡ ಮತ ಕ್ಷೇತ್ರ 1978 ರಲ್ಲಿ ವಿಧಾನಸಭ ಕ್ಷೇತ್ರವಾಗಿ ಪರಿಗಣಿಸಲಾಗಿದೆ. ಅಲ್ಲದೆ, 2008 ರಲ್ಲಿ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿರುವ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ವಾಗೀಶ್ ಸ್ವಾಮಿ ಎಸ್ಸಿ ಸರ್ಟಿಫಿಕೇಟ್ ಪಡೆದು ಬಿಜೆಪಿಯಿಂದ ಸ್ಪರ್ಧಿಸಲು ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗ್ತಿದೆ.

ಯಾರೂ ಕೂಡ ಬಿಜೆಪಿ ಆಕಾಂಕ್ಷಿಗಳು ಎಂದು ಕಾರ್ಯಕ್ರಮ ಮಾಡುವಂತಿಲ್ಲ. ಅಲ್ಲದೇ ಎಸ್ಸಿ ಮೀಸಲು ಕ್ಷೇತ್ರವಾದ ಹಿನ್ನೆಲೆ ಎಸ್ಸಿ ಸಮುದಾಯಕ್ಕೆ ಮಾತ್ರ ಟಿಕೇಟ್ ನೀಡಲಾಗುವುದು, ವಾಗೀಶ್ ಸ್ವಾಮಿಗೆ ಟಿಕೇಟ್ ಕೊಡುವುದಿಲ್ಲ. ಅವರೊಬ್ಬರೇ ಅಲ್ಲ, ಯಾರಿಗೂ ಕೂಡ ಬಿ ಪಾರ್ಮ್ ಕೊಡೋದಿಲ್ಲ. ಪಕ್ಷ ತೀರ್ಮಾನ ತೆಗೆದುಕೊಂಡು ಎಸ್ಸಿ ಸಮುದಾಯದ ಅಭ್ಯರ್ಥಿಗೆ ಟಿಕೇಟ್ ಕೊಡುತ್ತೇವೆ. ಏನಾದರೂ ಟಿಕೇಟ್ ಬೇಕು ಎಂದರೆ ಪಕ್ಷವನ್ನು ತೊರೆದು ಪಕ್ಷೇತರವಾಗಿ ನಿಲ್ಲಲಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.

ಎಸ್ಸಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ವಾಗೀಶ್ ಸ್ವಾಮಿಗೆ ವಿರೋಧ

ಆದರೆ ಇದಕ್ಕೆ ಎಸ್ಸಿ ಸಮುದಾಯದ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಎಸ್ಸಿಗೆ ಸಿಗಬೇಕಾದ ಮೀಸಲಾತಿಯನ್ನು, ವೀರಶೈವ ಲಿಂಗಾಯತ ಸಮಾಜದ ಒಳ ಪಂಗಡಕ್ಕೆ ಸೇರುವ ಬೇಡ ಜಂಗಮರು ಎಸ್ಸಿ ಸರ್ಟಿಫಿಕೇಟ್ ಪಡೆದಿದ್ದಾರೆ. ಇದು ದಲಿತರಿಗೆ ಮಾಡುತ್ತಿರುವ ಅನ್ಯಾಯ ಎಂದು ಬಿಜೆಪಿ ಪಕ್ಷದ ಶಾಸಕ ಪ್ರೋ. ಲಿಂಗಣ್ಣ ಹರಿಹಾಯ್ದಿದ್ದಾರೆ. ಒಟ್ಟಾರೆಯಾಗಿ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಆಗಿನಿಂದಲೂ ಎಸ್ಸಿ ಸಮುದಾಯಕ್ಕೆ‌ ಸೇರಿದವರೇ ಸ್ಪರ್ಧಿಸುತ್ತಾ ಬಂದಿದ್ದಾರೆ. ಆದರೆ ಈಗ ಬೇಡ ಜಂಗಮ ಎಸ್ಸಿ ಗೆ ಸೇರ್ಪಡೆಯಾಗಿದೆ ಎನ್ನುವ ಸರ್ಟಿಫಿಕೇಟ್ ಪಡೆದು ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವುದು ದಲಿತ‌ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: 'ಜನರನ್ನು ಉಳಿಸಿ, ದೇಶವನ್ನು ಉಳಿಸಿ'.. ಶಿವಮೊಗ್ಗದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.