ದಾವಣಗೆರೆ: ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ನಟ ದರ್ಶನ್ ಗೌಪ್ಯವಾಗಿ ಭೇಟಿ ಮಾಡಿ ಆತಿಥ್ಯ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಹುಬ್ಬಳಿಯಲ್ಲಿ ನಡೆದ ರಾಬರ್ಟ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದ ನಂತರ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ಮನೆಗೆ ಭೇಟಿದ್ದರು.
![sandalwood-actor-darshan-meets-ss-mallikarjun](https://etvbharatimages.akamaized.net/etvbharat/prod-images/kn-dvg-01-03-darshan-visit-av-7204336_02032021214821_0203f_1614701901_617.jpg)
ಇದಾದ ನಂತರ ದಾವಣಗರೆಯಲ್ಲಿರುವ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ರವರನ್ನು ಭೇಟಿ ಮಾಡಿ ಮಾಡಿದ್ದಾರೆ. ಅವರೊಂದಿಗೆ ಊಟ ಮಾಡುವ ಮೂಲಕ ಕೆಲ ಕಾಲ ಹರಟೆ ಹೊಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಾಸಲೀಲೆ ವಿಡಿಯೋ ಫೇಕ್, ಈ ಬಗ್ಗೆ ಸಮಗ್ರ ತನಿಖೆಯಾಗಲಿ: ಸಚಿವ ರಮೇಶ್ ಜಾರಕಿಹೊಳಿ
ಫೆ.28ರ ತಡರಾತ್ರಿ ವಿನಯ್ ಕುಲಕರ್ಣಿಯವರ ಮನೆಗೆ ಭೇಟಿ ನೀಡಿದ ಬಳಿಕ ಡಿ ಬಾಸ್ ಕಳೆದ ದಿನ ದಾವಣಗೆರೆಯ ಬಾಪೂಜಿ ಅತಿಥಿಗೃಹಕ್ಕೆ ಭೇಟಿ ನೀಡಿ ಊಟ ಮಾಡುವ ಮೂಲಕ ಕೆಲ ಕಾಲ ರಿಲ್ಯಾಕ್ಸ್ ಮಾಡಿದ ಬಳಿಕ ವಾಪಸ್ ಬೆಂಗಳೂರಿಗೆ ತೆರಳಿದರು.
![sandalwood-actor-darshan-meets-ss-mallikarjun](https://etvbharatimages.akamaized.net/etvbharat/prod-images/kn-dvg-01-03-darshan-visit-av-7204336_02032021214821_0203f_1614701901_368.jpg)
ಇನ್ನು ಇದೇ ವೇಳೆ ದರ್ಶನ್ ಅವರೊಂದಿಗೆ ಆಗಮಿಸಿದ್ದ ವಿನೋದ್ ಪ್ರಭಾಕರ್ ಹಾಗೂ ಚಿಕ್ಕಣ್ಣ ಮುಂತಾದವರು ಹಾಜರಿದ್ದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಟ ದರ್ಶನ್ ಸೇರಿ ಎಲ್ಲರಿಗೂ ಸನ್ಮಾನ ಮಾಡಿ ಗೌರವಿಸಿದರು.