ETV Bharat / state

ಗಾಯನದ ಮೂಲಕ ಸಾವಿರಾರು ಮಕ್ಕಳಿಗೆ ನೆರವಾದ ಮಹಾಚೇತನ ಎಸ್​ಪಿಬಿ: ಡಾ. ಸುರೇಶ್ ಹನಗವಾಡಿ - Suresh Hanagawadi news

ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಕರ್ನಾಟಕಕ್ಕೆ ಅದೇನೋ ಅವಿನಾಭಾವ ಸಂಬಂಧವಿದೆ. ಅವರು ಕರ್ನಾಟಕದ ಸಂಗೀತ ಕ್ಷೇತ್ರದಿಂದ ಹಿಡಿದು ಸಾಮಾಜಿಕ ಕ್ಷೇತ್ರದಲ್ಲೂ ಹಲವು ಕೊಡುಗೆಗಳನ್ನು ನೀಡಿದ್ದಾರೆ. ದಾವಣಗೆರೆಯಲ್ಲಿ‌ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಹುಟ್ಟುಹಾಕಿದ ಹಾಗೂ ಎಸ್​ಪಿಬಿ ಪ್ರೀತಿಯ ಸ್ನೇಹಿತರಾಗಿದ್ದ, ಡಾ‌. ಸುರೇಶ್ ಹನಗವಾಡಿ ಅವರು ಎಸ್​ಪಿಬಿ ಅವರ ಬಗ್ಗೆ ಹೀಗೆ ಹೇಳುತ್ತಾರೆ.

ಎಸ್​ಪಿಬಿ ಅವರೊಂದಿಗೆ ಡಾ. ಸುರೇಶ್ ಹನಗವಾಡಿ
ಎಸ್​ಪಿಬಿ ಅವರೊಂದಿಗೆ ಡಾ. ಸುರೇಶ್ ಹನಗವಾಡಿ
author img

By

Published : Sep 25, 2020, 5:02 PM IST

Updated : Sep 25, 2020, 7:37 PM IST

ದಾವಣಗೆರೆ: "ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂ ಮಹಾ‌ ಮಾನವತಾವಾದಿ. ಸಾವಿರಾರು ಮಕ್ಕಳಿಗಾಗಿ ಮಿಡಿದ ಹೃದಯ ಅದು. ಹಿಮೋಫಿಲಿಯಾದಿಂದ ಬಳಲುತ್ತಿದ್ದ ಸಾವಿರಾರು ಮಕ್ಕಳಿಗಾಗಿ ಗಾಯನದ ಮೂಲಕ ನೆರವಾದ ಮಹಾಚೇತನ. ಕೇವಲ ದಾವಣಗೆರೆ ಮಾತ್ರವಲ್ಲದೇ ರಾಜ್ಯದ ಮೂಲೆ‌ ಮೂಲೆಯಲ್ಲಿರುವ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದ ಮಕ್ಕಳ ಪಾಲಿನ ದೇವರು ಎಸ್​ಪಿಬಿ. ಅವರನ್ನೊಮ್ಮೆ ತಬ್ಬಿಕೊಂಡರೆ ಸಾಕು ನಮಗೆ ಗೊತ್ತಿಲ್ಲದ ಹಾಗೆ ಶಕ್ತಿ ಬರುತಿತ್ತು''.

ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ
ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ

ಇದು ದಾವಣಗೆರೆಯಲ್ಲಿ‌ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಹುಟ್ಟುಹಾಕಿದ ಹಾಗೂ ಎಸ್​ಪಿಬಿ ಪ್ರೀತಿಯ ಸ್ನೇಹಿತ ಡಾ‌.ಸುರೇಶ್ ಹನಗವಾಡಿ ಅವರು ಬಾಲು ಸರ್​ನನ್ನು ನೆನಪು ಮಾಡಿಕೊಂಡ ಪರಿ ಇದು. ಅವರಿಲ್ಲ ಅನ್ನೋದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಬಾಲಸುಬ್ರಮಣ್ಯಂ‌ ಅವರು ಗಾಯನ, ನಟನೆ, ಸಂಗೀತ ನಿರ್ದೇಶನದಲ್ಲಿ ಸಾಧನೆ ಮಾಡಿರುವುದು ಮಾತ್ರವಲ್ಲ, ಬಡ ಮಕ್ಕಳನ್ನು ಹಿಂಡಿ ಹಿಪ್ಪೆ ಮಾಡುವ ಹಿಮೋಫಿಲಿಯಾದಂಥ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ಹಣಕ್ಕಾಗಿ ಸ್ವರ ಮಾಧುರ್ಯದ ಮೂಲಕ ಸಹಾಯ ಮಾಡಿದ ಮಹಾಪುರುಷ ಎಂದರು.

ಎಸ್​ಪಿಬಿ ಕುರಿತು ಡಾ. ಸುರೇಶ್ ಹನಗವಾಡಿ ಮಾತು

1999 ರಲ್ಲಿ ದಾವಣಗೆರೆಯಲ್ಲಿ ಡಾ. ಸುರೇಶ್ ಹನಗವಾಡಿ ರಾಜ್ಯ ಹಿಮೋಫಿಲಿಯಾ ಸೊಸೈಟಿ ಹುಟ್ಟುಹಾಕಿದರು. ಇದಕ್ಕೊಂದು ಸುಸಜ್ಜಿತ ಕಟ್ಟಡ, ಮಕ್ಕಳ ಚಿಕಿತ್ಸೆಗೆ ಹಣ, ಯಂತ್ರೋಪಕರಣ ಸೇರಿದಂತೆ ಇತರೆ ವ್ಯವಸ್ಥೆ ಮಾಡಲು ತುಂಬಾ ಕಷ್ಟಪಡಬೇಕಾಯಿತು. ಆದ್ರೆ ಎಸ್​ಪಿಬಿ ಅವರೇ ಸ್ವತಃ ಈ ಸೊಸೈಟಿಯ ಮಹಾಪೋಷಕರಾಗಿದ್ದರು ಎಂಬುದು ಎಷ್ಟೋ ಮಂದಿಗೆ ಗೊತ್ತಿಲ್ಲ.‌ ಬಳಿಕ ಈ ಸೊಸೈಟಿ ಮಾಡಿದ ಕಾರ್ಯ ಅತ್ಯದ್ಭುತ. ಇದಕ್ಕೆ ಕಾರಣ ಎಸ್​ಪಿಬಿ ಎಂದು ಸ್ಮರಿಸಿದರು.

ಎಸ್​ಪಿಬಿ ಅವರೊಂದಿಗೆ ಡಾ. ಸುರೇಶ್ ಹನಗವಾಡಿ
ಎಸ್​ಪಿಬಿ ಅವರೊಂದಿಗೆ ಡಾ. ಸುರೇಶ್ ಹನಗವಾಡಿ

ಸಾಧ್ಯವಾದರೆ ವರ್ಷಕ್ಕೊಮ್ಮೆ ಇಲ್ಲದಿದ್ದರೆ ಎರಡು ವರ್ಷಕ್ಕೊಮ್ಮೆ ಸಂಗೀತ ಕಾರ್ಯಕ್ರಮ ಉಚಿತವಾಗಿ ನೀಡಿ, ಅದರಲ್ಲಿ ಬಂದ ಹಣವನ್ನು ಚಿಕಿತ್ಸೆಗೆ ನೀಡಿದ ಹೃದಯವಂತ ಅವರು. ಜೂನ್ 4 ರಂದು ಅವರ ಹುಟ್ಟುಹಬ್ಬ ಇತ್ತು. ನನಗೆ ಹಾಗೂ ನನ್ನ ಪತ್ನಿಗೆ ಆಹ್ವಾನ‌ ನೀಡಿದ್ದರು.‌ ಕೊರೊನಾ ಬಂದ ಕಾರಣ ಹೋಗಲು ಆಗಲಿಲ್ಲ. ವ್ಯಾಟ್ಸಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದರು. ಹೇಗಿದ್ದೀರಾ ಡಾಕ್ಟ್ರೇ ಎನ್ನುತ್ತಿದ್ದರು. ಈಗ ಅವರು ನೆನಪು ಮಾತ್ರ. ಅವರು ಮಾಡಿರುವ ಉಪಕಾರ ಮರೆಯಲು ಸಾಧ್ಯವಿಲ್ಲ. ಅವರಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎನ್ನುತ್ತಾರೆ ಸುರೇಶ್ ಹನಗವಾಡಿ.

ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ
ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ

ಬೆಣ್ಣೆದೋಸೆ, ಖಾರಮಂಡಕ್ಕಿ, ಮೆಣಸಿನಕಾಯಿ ಬೊಂಡಾ ಪ್ರಿಯ ಎಸ್​ಪಿಬಿ:

ದಾವಣಗೆರೆಗೆ ಬಂದಾಗ ಎಸ್.ಪಿ. ಬಾಲಸುಬ್ಯಮಣ್ಯಂ ಅವರು ಬೆಣ್ಣೆದೋಸೆ ಸವಿಯುತ್ತಿದ್ದರು. ಅವರಿಗೆಂದೇ ವಿಶೇಷವಾಗಿ ದೋಸೆ ರೆಡಿ‌ ಮಾಡುತ್ತಿದ್ದೆವು. ಅದನ್ನು ಇಷ್ಟಪಟ್ಟು ಸೇವಿಸುತ್ತಿದ್ದರು. ಇಲ್ಲಿನ‌ ಮೆಣಸಿನಕಾಯಿ ಬೋಂಡಾ ಸಹ ಅವರಿಗೆ ಅಚ್ಚುಮೆಚ್ಚು. 2015 ರಲ್ಲಿ ಚಿತ್ರದುರ್ಗಕ್ಕೆ ಬಂದಾಗ ಖಾರ ಮಂಡಕ್ಕಿ ಸೇವಿಸಿ ಖುಷಿಪಟ್ಟಿದ್ದರು. ಉಪ್ಪಿಟ್ಟು, ಕೇಸರಿಬಾತ್ ಅಂದರೆ ಅವರಿಗೆ ಇಷ್ಟ. ಇಂಥದ್ದೇ ಊಟಕ್ಕೆ ಇರಬೇಕು ಎನ್ನುತ್ತಿರಲಿಲ್ಲ. ಆದ್ರೆ ತುಂಬಾನೇ ಸರಳ ವ್ಯಕ್ತಿತ್ವ. ಭಾರತದಲ್ಲಿ ಅಷ್ಟೊಂದು ಸಾಧನೆ ಮಾಡಿದ ಗಾನ ಗಾರುಡಿಗ ತುಂಬಾನೇ ಸಿಂಪಲ್ ಆಗಿ ಇರುತ್ತಿದ್ದರು ಎಂದು "ಈಟಿವಿ ಭಾರತ''ಕ್ಕೆ ನೀಡಿದ ಸಂದರ್ಶನದಲ್ಲಿ ಡಾ‌. ಸುರೇಶ್ ಹನಗವಾಡಿ ಅವರು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.

Last Updated : Sep 25, 2020, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.