ETV Bharat / state

ಮನೆ ಅಡಿಪಾಯ ತೆಗೆಯುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ವಂಚನೆ: 60 ಲಕ್ಷ ರೂ.ಗೆ ಖರೀದಿಸಿ ಚಿನ್ನದ ಅಂಗಡಿಗೆ ಹೋದ ಗುತ್ತಿಗೆದಾರನಿಗೆ ಶಾಕ್! - ಗುತ್ತಿಗೆದಾರನಿಗೆ ವಂಚನೆ

ದಾವಣಗೆರೆಯಲ್ಲಿ ಗುತ್ತಿಗೆದಾರನಿಗೆ ನಕಲಿ ಚಿನ್ನದ ನಾಣ್ಯ ನೀಡಿ 60 ಲಕ್ಷ ರೂ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

Etv Bharat
Etv Bharat
author img

By ETV Bharat Karnataka Team

Published : Oct 5, 2023, 8:12 AM IST

Updated : Oct 5, 2023, 10:36 AM IST

ದಾವಣಗೆರೆ: ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ಗುತ್ತಿಗೆದಾರನಿಗೆ ವಂಚಕರು ಬರೋಬ್ಬರಿ 60 ಲಕ್ಷ ರೂ. ವಂಚನೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿಯಲ್ಲಿ ಕಳೆದ ತಿಂಗಳಲ್ಲಿ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ದೇವನಹಳ್ಳಿ ತಾಲೂಕಿನ ಚೀಮನಹಳ್ಳಿ ಮೂಲದ ಗುತ್ತಿಗೆದಾರ ಗೋವರ್ಧನ್ ವಂಚನೆ ಒಳಗಾದವರು.‌

ಮನೆ ನಿರ್ಮಾಣ ಮಾಡುವ ವೇಳೆ ಪಾಯಾ ತೆಗೆಯುವ ಸಂದರ್ಭದಲ್ಲಿ ಚಿನ್ನದ ಬಿಲ್ಲೆಗಳು (ನಾಣ್ಯಗಳು) ಪತ್ತೆಯಾಗಿವೆ ಎಂದು ಕುಮಾರ್ ಹಾಗೂ ಮುದಕಪ್ಪ ಎಂಬುವರು ಗುತ್ತಿಗೆದಾರ ಗೋವರ್ಧನ್ ಅವರನ್ನು ನಂಬಿಸಿದ್ದರು. ಖದೀಮರ ಮಾತುಗಳಿಗೆ ಮರುಳಾದ ಗುತ್ತಿಗೆದಾರರು ಸೆ.23ರಂದು 2.5 ಕೆಜಿ ನಕಲಿ ಚಿನ್ನದ ಬಿಲ್ಲೆಗಳನ್ನು ಪಡೆದು 60 ಲಕ್ಷ ನೀಡಿದ್ದಾರೆ. ನಕಲಿ ಚಿನ್ನದ ಪಡೆದ ಗೋವರ್ಧನ್ ಅವರು ಚಿನ್ನದ ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ನಕಲಿ ಚಿನ್ನ ಎಂಬ ಎಂಬ ವಿಚಾರ ಬಯಲಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುತ್ತಿಗೆದಾರ ಗೋವರ್ಧನ್ ಅವರು ವಿವಿಧ ಕಾಮಗಾರಿ ಮಾಡುವ ವೇಳೆ ಕುಮಾರ್ ಹಾಗೂ ಮುದುಕಪ್ಪ ಎಂಬುವರು ಅವರನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಸುಳ್ಳು ಹೇಳಿ ನಕಲಿ ಚಿನ್ನ ನೀಡಿ, ಗುತ್ತಿಗೆದಾರನಿಂದ 60 ರೂ ಪಡೆದಿದ್ದರು. ಚಿನ್ನದ ಅಂಗಡಯಲ್ಲಿ ಪರಿಶೀಲಿಸಿದ ಬಳಿಕ ವಂಚನೆ ಅರಿತು ಗುತ್ತಿಗೆದಾರ ಗೋರ್ವಧನ್ ಅವರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಚನ್ನಗಿರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಾದ ಕುಮಾರ್ ಹಾಗೂ ಮುದುಕಪ್ಪನನ್ನು ಬಂಧಿಸಲು ಬಲೆ ಬೀಸಿದ್ದೇವೆ ಎಂದು ಚನ್ನಗಿರಿ ಪೋಲಿಸ್ ಠಾಣೆಯ ಪಿಐ ನಿರಂಜನ್ ಮಾಹಿತಿ ನೀಡಿದ್ದಾರೆ.

ಪಿಐ ನಿರಂಜನ್ ಹೇಳಿದಿಷ್ಟು.. ಈ ವೇಳೆ, ಚನ್ನಗಿರಿ ಠಾಣೆಯ ಪಿಐ ನಿರಂಜನ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಈ ಘಟನೆ ಸೆ 23 ಕ್ಕೆ ನಡೆದಿದೆ.‌ ಎಫ್ಐಆರ್ ಕೂಡ ದಾಖಲಾಗಿದೆ. ಈ ರೀತಿಯ ವಂಚನೆಗಳು ಶಿವಮೊಗ್ಗ ಗಡಿಭಾಗ, ಹರಪನಹಳ್ಳಿ, ಚನ್ನಗಿರಿ, ಸಂತೇಬೆನ್ನೂರು ಭಾಗದಲ್ಲಿ ನಡೆದಿವೆ. ಗೋವರ್ಧನ್ ಎಂಬುವವರಿಗೆ 60 ಲಕ್ಷ ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ವಂಚಕರು ಸಿಕ್ಕಿದ ಬಳಿಕವೇ ಎಷ್ಟು ಹಣ ಎಂದು ತಿಳಿದು ಬರಲಿದೆ. ವಂಚಕರನ್ನು ಟ್ರ್ಯಾಕ್ ಮಾಡಲಾಗಿದೆ, ಅವರನ್ನು ಬಂಧಿಸಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ: 854 ಕೋಟಿ ರೂ ಸೈಬರ್ ಹೂಡಿಕೆ ವಂಚನೆ ಪ್ರಕರಣ... ಬೆಂಗಳೂರು ಪೊಲೀಸರ ಬಲೆಗೆ ಬಿದ್ದ ಆರೋಪಿಗಳು

Last Updated : Oct 5, 2023, 10:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.