ದಾವಣಗೆರೆ: ಸಮೀಪದ ಶಾಮನೂರು ಸುತ್ತಮುತ್ತಲಿನ ಬಡಾವಣೆಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿರುವ ಕೆಪಿಎಂ ಕೋಳಿ ಫಾರ್ಮ್ ಅನ್ನು ತೆರವುಗೊಳಿಸಬೇಕು ಎಂದು ನಿವಾಸಿಗಳು ಇಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ಕೋಳಿ ಫಾರಂನಿಂದ ನೊಣ ಮತ್ತು ದುರ್ವಾಸನೆ ಹೆಚ್ಚಾಗಿದೆ. ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದರು.
ಕೂಡಲೇ ಪಾಲಿಕೆ ಅಧಿಕಾರಿಗಳು ಕೋಳಿ ಫಾರಂ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೋಳಿ ಫಾರಂ ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್ನಲ್ಲಿರುವ ಕಾರಣ ಯಾವ ಕ್ರಮ ಜರುಗಿಸಲು ಆಗುತ್ತಿಲ್ಲ. ಈ ನಡುವೆ, ಪಾಲಿಕೆಯಿಂದ ನಾವು ಸದ್ಯ ಯಾವುದೇ ಅನುಮತಿ ನೀಡುತ್ತಿಲ್ಲ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಹೇಳಿದರು.