ದಾವಣಗೆರೆ: ಕೊರೊನಾ ನಿರ್ಮೂಲನೆಯಾಗಲೆಂದು ಪ್ರಾರ್ಥಿಸಿ ಹೊನ್ನಾಳಿ ಪಟ್ಟಣದ ಹಿರೇಮಠದ ಸ್ವ ಗೃಹದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರ ಕರೆಯ ಮೇರೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಇಷ್ಪ ಲಿಂಗ ಪೂಜೆ ನೆರವೇರಿಸಿದರು.

ಕೊರೊನಾ ಮುಕ್ತ ಭಾರತಕ್ಕಾಗಿ, ಪ್ರಪಂಚದಲ್ಲಿ ಕೊರೊನಾ ನಿರ್ಮೂಲನೆಗಾಗಿ ತಮ್ಮ ಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಶಿವನಲ್ಲಿ ರೇಣುಕಾಚಾರ್ಯ ಪ್ರಾರ್ಥನೆ ಸಲ್ಲಿಸಿದರು. ಭಾರತ ದೇಶವು ಪ್ರಸ್ತುತ ಕೊರಾನಾ ವೈರಸ್ ಮಹಾಮಾರಿ ಸೋಂಕಿನಿಂದ ನಲುಗುತ್ತಿದ್ದು, ಇದರ ನಿರ್ಮೂಲನೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಲಕ್ಷಾಂತರ ಸೇವಾಕರ್ತರು ಸಮಸ್ತ ಜನತೆಯ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಇವರೆಲ್ಲರಿಗೂ ದೇವರು ಕೊರೊನಾ ಹೊಡೆದೋಡಿಸುವ ಶಕ್ತಿ ನೀಡಲಿ ಎಂಬ ಸದುದ್ದೇಶದಿಂದ ಈ ಪೂಜೆ ಮಾಡಿ, ಬೇಡಿಕೊಂಡರು.