ETV Bharat / state

ಕುರುಬರ ಎಸ್​​ಟಿ ಮೀಸಲಾತಿಗಾಗಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ: ಈಶ್ವರಪ್ಪ - Preliminary meeting of the Reservation Fight Committee

ದಾವಣಗೆರೆಯಲ್ಲಿ ನಡೆದ ಎಸ್​ಟಿ ಮೀಸಲಾತಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಕುರುಬರಿಗೆ ಎಸ್​​ಟಿ ಮೀಸಲಾತಿ ಕೊಡಿಸಲು ಕೊನೆಯವರೆಗೂ ಹೋರಾಡುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ
author img

By

Published : Dec 12, 2020, 8:11 PM IST

ದಾವಣಗೆರೆ: ಎಸ್​​ಟಿ ಮೀಸಲಾತಿ ಸಿಗುವುದಾದರೆ ನಾಳೆಯೇ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕುರುಬ ಸಮುದಯಕ್ಕೆ ಮೀಸಲಾತಿ ‌ಕೊಡಿಸುವುದಾಗಿ ಭರವಸೆ ನೀಡಿದರು.

ದಾವಣಗೆರೆಯಲ್ಲಿ ನಡೆದ ಮೀಸಲಾತಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕುರುಬರ ಕಷ್ಟ ನನಗೆ ಗೊತ್ತು. ಅವರಿಗೆ ಎಸ್​​​​ಟಿ ಸೌಲಭ್ಯದ ಅವಶ್ಯಕತೆ ಇದೆ. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಈ ಬಗ್ಗೆ ಚರ್ಚಿಸಿದ್ದೆ. ತೊಂದರೆ ಕೊಡುವುದಿಲ್ಲ ಮುಂದುವರೆಯಿರಿ ಎಂದು ಹೇಳಿದ್ದರು. ಆದರೆ ಈಗ ತೊಂದರೆ ಕೊಡುತ್ತಿದ್ದಾರೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ

ರಾಜಕಾರಣಕ್ಕಾಗಿ ಎಸ್​​ಟಿ ಹೋರಾಟ ಮಾಡುತ್ತೇನೆ ಎಂದು ಹಲವರು ಹೇಳುತ್ತಿದ್ದಾರೆ. ಹಿಂದುತ್ವ ಪರ ಇದ್ದೀರಿ, ಈಗ ಜಾತಿ ಪರ ಹೊರಟರೇ ಎಂದು ಕೇಳುತ್ತಿದ್ದಾರೆ. ಏನೇ ಆಗಲಿ ಮೀಸಲಾತಿಗಾಗಿ ಕೊನೆಯವರೆಗೂ ನಾನು ಹೋರಾಟ ಮಾಡುತ್ತೇನೆ. ಮೋದಿ, ಅಮಿತ್ ಶಾ ಜೊತೆ ಮಾತನಾಡಿ ಎಸ್​​​​ಟಿ ಮೀಸಲಾತಿ ತರುತ್ತೇವೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.