ETV Bharat / state

ಪಶುವೈದ್ಯೆ ಹತ್ಯಾಚಾರ ಪ್ರಕರಣ..ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿ: ಪ್ರಮೋದ್‌ ಮುತಾಲಿಕ್‌ - Rama Sena chief Pramod Muthalik

ತೆಲಂಗಾಣದ ಪಶುವೈದ್ಯೆ  ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ದಾವಣಗೆರೆಯಲ್ಲಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

Pramod Muthalik  statement
ಪ್ರಮೋದ್‌ ಮುತಾಲಿಕ್‌
author img

By

Published : Dec 2, 2019, 8:01 AM IST

ದಾವಣಗೆರೆ: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದ್ದಾರೆ.

ಪ್ರಮೋದ್‌ ಮುತಾಲಿಕ್‌

ನಗರದಲ್ಲಿ ನಡೆದ ಶ್ರೀರಾಮ ಸೇನೆಯ ರಾಜ್ಯ ಕಾರ್ಯಕಾರಿಣಿ ಬೈಠಕ್ ನಲ್ಲಿ ಮಾತನಾಡಿದ ಅವರು, ಕೋರ್ಟ್‌ನ ವಿಳಂಬ ನ್ಯಾಯ ನೀತಿ ಇದಕ್ಕೆ ಕಾರಣವಾಗಿದೆ. ಇಂತಹ ಇನ್ನೆಷ್ಟು ಪ್ರಕರಣ ನಡೆಯುವವರೆಗೆ ಕಾಯುತ್ತಿರಿ? ಅನ್ಯ ಪ್ರಕರಣಗಳನ್ನು ಬದಿಗಿಟ್ಟು, ನ್ಯಾಯಾಲಯ ಇಂಥಾ ಪ್ರಕರಣಗಳಿಗೆ ಮೂರ‍್ನಾಲ್ಕು ತಿಂಗಳಲ್ಲಿ ತೀರ್ಪು ನೀಡಬೇಕು. ಭಯೋತ್ಪಾದನೆ ವಿಚಾರಣೆಗೆ ರಾತ್ರಿ 12ಕ್ಕೆ ಸುಪ್ರೀಂಕೋರ್ಟ್‌ ಕೆಲಸ ಮಾಡುತ್ತದೆ. ಆದರೆ, ಅತ್ಯಾಚಾರ ಆರೋಪಿಗಳ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಒತ್ತಾಯಿಸಿದ್ದಾರೆ.

ಪ್ರಮೋದ್‌ ಮುತಾಲಿಕ್‌

ನಗರದಲ್ಲಿ ನಡೆದ ಶ್ರೀರಾಮ ಸೇನೆಯ ರಾಜ್ಯ ಕಾರ್ಯಕಾರಿಣಿ ಬೈಠಕ್ ನಲ್ಲಿ ಮಾತನಾಡಿದ ಅವರು, ಕೋರ್ಟ್‌ನ ವಿಳಂಬ ನ್ಯಾಯ ನೀತಿ ಇದಕ್ಕೆ ಕಾರಣವಾಗಿದೆ. ಇಂತಹ ಇನ್ನೆಷ್ಟು ಪ್ರಕರಣ ನಡೆಯುವವರೆಗೆ ಕಾಯುತ್ತಿರಿ? ಅನ್ಯ ಪ್ರಕರಣಗಳನ್ನು ಬದಿಗಿಟ್ಟು, ನ್ಯಾಯಾಲಯ ಇಂಥಾ ಪ್ರಕರಣಗಳಿಗೆ ಮೂರ‍್ನಾಲ್ಕು ತಿಂಗಳಲ್ಲಿ ತೀರ್ಪು ನೀಡಬೇಕು. ಭಯೋತ್ಪಾದನೆ ವಿಚಾರಣೆಗೆ ರಾತ್ರಿ 12ಕ್ಕೆ ಸುಪ್ರೀಂಕೋರ್ಟ್‌ ಕೆಲಸ ಮಾಡುತ್ತದೆ. ಆದರೆ, ಅತ್ಯಾಚಾರ ಆರೋಪಿಗಳ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:ದಾವಣಗೆರೆ: ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಕೊಲೆ ಪ್ರಕರಣ ಹಿನ್ನಲೆ ಪ್ರಿಯಾಂಕಾ ರೆಡ್ಡಿ ಮೇಲೆ ರಾಕ್ಷಸಿ ಪ್ರವೃತ್ತಿ ಮೆರೆದು ಸುಟ್ಟು ಹಾಕಿದ್ದಾರೆ. ಅಂತಹ ಕುಕೃತ್ಯ ನಡೆಸಿದವರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ದಾವಣಗೆರೆಯಲ್ಲಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.


Body:ನಗರದಲ್ಲಿ ನಡೆದ ಶ್ರೀರಾಮ ಸೇನೆಯ ರಾಜ್ಯ ಕಾರ್ಯಕಾರಿಣಿ ಬೈಠಕ್ ನಲ್ಲಿ ಮಾತನಾಡಿದ ಅವರು, ನಿರ್ಭಯ ಕೇಸ್‌ನ ಆರೋಪಿಗಳಿಗೆ ಈವರೆಗೆ ಕೋರ್ಟ್‌ ಶಿಕ್ಷೆ ವಿಧಿಸಿಲ್ಲ,‌ ಕೋರ್ಟ್‌ನ ವಿಳಂಬ ನ್ಯಾಯ ನೀತಿಯೂ ಇಂತದಕ್ಕೆ ಕಾರಣವಾಗಿದೆ. ಇಂಥ ಎನ್ನೆಷ್ಟು ಪ್ರಕರಣ ನಡೆಯುವವರೆಗೆ ಕಾಯುತ್ತಿರಿ...? ಅನ್ಯ ಪ್ರಕರಣಗಳನ್ನು ಬದಿಗಿಟ್ಟು, ನ್ಯಾಯಲಯಗಳು ಇಂಥ ಪ್ರಕರಣಗಳಿಗೆ ಮೂರ‍್ನಾಲ್ಕು ತಿಂಗಳಲ್ಲಿ ತೀರ್ಪು ನೀಡಬೇಕು. ಭಯೋತ್ಪಾದಕನ ವಿಚಾರಣೆಗೆ ರಾತ್ರಿ ೧೨ಕ್ಕೆ ಸುಪ್ರಿಂ ಕೋರ್ಟ್‌ ಕೆಲಸ ಮಾಡುತ್ತದೆ. ಆದರೆ, ಅತ್ಯಾಚಾರ ಆರೋಪಿಗಳ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದೆ. ಕೋರ್ಟ್‌ ವ್ಯವಸ್ಥೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಅತ್ಯಾಚಾರಿಗಳನ್ನು ಬಹಿರಂಗವಾಗಿ ದಹಿಸಬೇಕು ಎಂಬುದು ನೊಂದವರ ಆಕ್ರೋಶವಾಗಿದೆ... ಆದರು ನ್ಯಾಯಾಲಯ ಎಚ್ಚೆತ್ತುಕೊಳ್ಳುತ್ತಿಲ್ಲ. ಅತ್ಯಾಚಾರ ಆರೋಪಿಗಳ ಬಗ್ಗೆ ತ್ವರಿತವಾಗಿ ನ್ಯಾಯದ ತೀರ್ಪು ನೀಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು..

ಪಿಎಫ್‌ಐ,ಎಸ್‌ಡಿಪಿಐ, ಪಾಪುಲರ್‌ ಫ್ರಂಟ್‌ ಸಂಘಟನೆ ವಿರುದ್ಧ ತನಿಖೆ ಆರಂಭಿಸಬೇಕು. ಮುಸ್ಲಿಂರಲ್ಲೇ ಎರಡು ಭಾಗವಾಗಿದೆ. ಕಟ್ಟರ್‌ ಮುಸ್ಲಿಂವಾದಿಗಳು ಪಿಎಫ್‌ಐ ನಿಂದ ತಯಾರಾಗುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಟ್ಟರ ಮುಸ್ಲಿಂವಾದಿಗಳ ಕಾರ್ಯ ಚಟುವಟಿಕೆ ಆರಂಭಗೊಂಡಿದೆ ಎಂದರು..

ಗೋಮಾತೆ ಹೋರಾಟದ ಪ್ರತಿಫಲವಾಗಿ ಕೇಂದ್ರದಲ್ಲಿ ನೀವು ಪ್ರಧಾನಿ ಯಾಗಿದ್ದೀರಿ ೩೦ ಸಾವಿರ ಕೋಟಿ ಮೌಲ್ಯದಷ್ಟು ಗೋಮಾಂಸ ವಿದೇಶಕ್ಕೆ ರಫ್ತಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುತ್ತಿಲ್ಲ. ದಾವಣಗೆರೆಯಲ್ಲಿ ಆಜಾದ್‌ ನಗರದಲ್ಲಿ ೧೦೦ ಹೆಚ್ಚು ಅನಧಿಕೃತ ಕಸಾಯಿಖಾನೆಗಳಿವೆ. ಜಿಲ್ಲಾಧಿಕಾರಿಗೆ ಮೆರವಣಿಗೆ ಮೂಲಕ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ. ಎಸ್ಪಿ,ಡಿಸಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಗೋಮಾಂಸ ರಫ್ತು ನಿಷೇಧಿಸಬೇಕು ಎಂದರು..

ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೇ ಲವ್‌ ಜಿಹಾದ್‌ ರಾಜ್ಯಾದ್ಯಂತ ಹಬ್ಬುತಿದೆ. ಗೋರಕ್ಷಣೆ, ಲವ್‌ ಜಿಹಾದ್‌ನಿಂದ ರಕ್ಷಿಸಿದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಕಾರ್ಯಕರ್ತರ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ನಮ್ಮ ಕಾರ್ಯಕರ್ತರು ಏನು ತಪ್ಪು ಮಾಡಿದ್ದಾರೆ. ರಾಜ್ಯ ಸರ್ಕಾರ, ನಮ್ಮ ಕಾರ್ಯಕರ್ತರ ಮೇಲಿರುವ ಪ್ರರಕಣಗಳನ್ನು ವಾಪಸು ಪಡೆಯಬೇಕು ಎಂದು‌ ಒತ್ತಾಯಿಸಿದರು..

ಕಾಶಿ ಮತ್ತು ಮಥುರಾದಲ್ಲಿ ದೇವಸ್ಥಾನ ಒಡೆದು ಮಸೀದಿ ನಿರ್ಮಿಸಿದ್ದಾರೆ. ಇವುಗಳನ್ನು ಮುಸ್ಪಿಂ ಸಮುದಾಯವರು ಬಿಟ್ಟು ಕೊಡಬೇಕು. ಇಲ್ಲದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಪ್ರಯತ್ನಿಸಬೇಕು. ಕಾಶಿ ಮತ್ತು ಮಥುರಾ ದೇವಸ್ಥಾನ ನಿರ್ಮಾಣಕ್ಕೆ ಪಾರ್ಲಿಮೆಂಟ್‌ನಲ್ಲಿ ಅನುಮೋದನೆ ಪಡೆಯಬೇಕು. ಇನ್ನೂ ರಾಮಮಂದಿರ ನಿರ್ಮಾಕ್ಕೆ ಸಮಿತಿ ರಚಿಸಲು ಮೂರು ತಿಂಗಳ ಕಾಲಕಾಶ ನೀಡಲಾಗಿದೆ. ಸಮಿತಿಯಲ್ಲಿ ರಾಮಮಂದಿರ ಹೋರಾಟಗಾರರು, ಸಾಧುಸಂತರು ಇರಬೇಕು ರಾಜಕಾರಣಿಗಳು ಬೇಡ ಎಂದು
ದಾವಣಗೆರೆಯಲ್ಲಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿಕೆ ನೀಡಿದರು..

ಪ್ಲೋ
ಬೈಟ್ : ಪ್ರಮೊದ್‌ ಮುತಾಲಿಕ್‌.. ಶ್ರೀರಾಮಸೇನಾ ಮುಖ್ಯಸ್ಥConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.