ETV Bharat / state

5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಕಡ್ಡಾಯ;  ಜ.19 ರಿಂದ ಪ್ರಾರಂಭ - ಪಲ್ಸ್​ ಪೋಲಿಯೋ ಅಭಿಯಾನ

ಜ.19 ರಿಂದ 22 ರವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0 ದಿಂದ 5 ವರ್ಷದೊಳಗಿನ ಪ್ರತಿ ಮಕ್ಕಳಿಗೂ ಪೋಲೀಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

Davangere
ಮಹಾನಗರಪಾಲಿಕೆ ಸಭಾಂಗಣ
author img

By

Published : Jan 9, 2020, 8:33 AM IST

ದಾವಣಗೆರೆ: ನಗರದಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ತಲುಪಬೇಕು. ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಪಿ ಮುದಜ್ಜಿ ತಿಳಿಸಿದರು.

ಜ.19 ರಿಂದ 22 ರವರೆಗೆ ನಡೆಯುವ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ (ಎನ್‍ಐಡಿ-2020) ಕುರಿತು ಚರ್ಚಿಸಲು ಮಹಾನಗರಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರ್ಬನ್ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವು ನಗರದ 240 ಬೂತ್‍ಗಳಲ್ಲಿ ನಡೆಯಲಿದ್ದು, ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ದೇಶದಾದ್ಯಂತ ಜ.19 ರಿಂದ 22 ರವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲೀಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು

ನಗರದಲ್ಲಿರುವ ಕೊಳಗೇರಿಗಳಲ್ಲಿ 60 ಮಕ್ಕಳು ಮತ್ತು ಲಸಿಕೆ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿ ಒಟ್ಟು 7,947 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳಿಗೆ ಲಸಿಕೆ ನೀಡುವುದು ಪ್ರಮುಖ ಜವಾಬ್ದಾರಿಯಾಗಿದೆ. ನಗರ ಪ್ರದೇಶದಲ್ಲಿ ಜ.19 ರಂದು ಬೂತ್ ದಿನವನ್ನಾಗಿ ಆಚರಿಸಿ ಜ.20, 21, 22 ರಂದು ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

Intro:ದಾವಣಗೆರೆ ; ನಗರದಲ್ಲಿ 0 ಯಿಂದ 05 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲೀಯೊ ಲಸಿಕೆ ತಲುಪಬೇಕು. ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ್ ಪಿ ಮುದಜ್ಜಿ ತಿಳಿಸಿದರು.

Body:ಜ.19 ರಿಂದ 22 ರವರೆಗೆ ನಡೆಯುವ ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲೀಯೊ ಕಾರ್ಯಕ್ರಮ (ಎನ್‍ಐಡಿ-2020) ಕುರಿತು ಚರ್ಚಿಸಲು ಮಹಾನಗರಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅರ್ಬನ್ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಲ್ಸ್ ಪೋಲೀಯೊ ಲಸಿಕಾ ಕಾರ್ಯಕ್ರಮವೂ ನಗರದ 240 ಬೂತ್‍ಗಳಿಲ್ಲಿ ನಡೆಯಲಿದ್ದು, ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಮೂಲಕ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ದೇಶದಾದ್ಯಂತ ಜ.19 ರಿಂದ 22 ರವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0 ಯಿಂದ 05 ವರ್ಷದೊಳಗಿನ ಪ್ರತೀ ಮಕ್ಕಳಿಗೂ ಪೋಲೀಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ನಗರ ಪ್ರದೇಶದಲ್ಲಿ 45,047 ಮಕ್ಕಳನ್ನು ಗುರುತಿಸಲಾಗಿದ್ದು, ಈ ಎಲ್ಲಾ ಮಕ್ಕಳಿಗೂ ಲಸಿಕೆ ನೀಡಲು ನಗರದಲ್ಲಿ 240 ಬೂತ್, 16 ಟ್ರಾನ್ಸಿಟ್ ಟೀಮ್‍ಗಳು ಕಾರ್ಯ ನಿರ್ವಹಿಸಲಿವೆ. ಈ ಬೂತ್‍ಗಳಿಗೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇದಕ್ಕಾಗಿ ವ್ಯಾಕ್ಸಿನ್ ಡೋಸ್‍ಗಳು, ವ್ಯಾಕ್ಸಿನೇಷನ್ ಕ್ಯೂಬ್‍ಗಳ ವ್ಯವಸ್ಥೆ ಮಾಡಲಾಗಿದೆ.
ಜ.19 ರಂದು ನಡೆಯುವ ಲಸಿಕಾ ಕಾರ್ಯಕ್ರಮಕ್ಕೆ ಆಯಾ ವಾರ್ಡಿನ ಕಾರ್ಪೊಟರ್‍ಗಳಿಂದ ಮಕ್ಕಳಿಗೆ ಪೋಲೀಯೊ ಲಸಿಕೆ ಹಾಕಿಸುವುದರ ಮೂಲಕ ಚಾಲನೆ ನೀಡಬೇಕು ಎಂದರು.

ನಗರದಲ್ಲಿರುವ ಕೊಳಗೇರಿಗಳಲ್ಲಿ 60 ಮಕ್ಕಳು ಮತ್ತು ಲಸಿಕೆ ಸೌಲಭ್ಯ ಇಲ್ಲದ ಪ್ರದೇಶಗಳಲ್ಲಿ ಒಟ್ಟು 7,947 ಮಕ್ಕಳನ್ನು ಗುರುತಿಸಲಾಗಿದ್ದು, ಈ ಮಕ್ಕಳಿಗೆ ಲಸಿಕೆ ನೀಡುವುದು ಪ್ರಮುಖ ಜವಬ್ದಾರಿಯಾಗಿದೆ. ನಗರ ಪ್ರದೇಶದಲ್ಲಿ ಜ.19 ರಂದು ಬೂತ್ ದಿನವನ್ನಾಗಿ ಆಚರಿಸಿ ಜ.20, 21, 22 ರಂದು ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಲಾಗುವುದು. ಈ ಸಮಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ನೀರು, ಆಹಾರ ಪೊಟ್ಟಣ ಮತ್ತು ನಗರ ಆರೋಗ್ಯ ಕೇಂದ್ರಗಳಿಗೆ 4 ಚಕ್ರದ 9 ಗಾಡಿಗಳನ್ನು ಇಂಧನ ಹಾಗೂ ಚಾಲಕ ಸಮೇತ ಒದಗಿಸಬೇಕು. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯಧಿಕಾರಿ ಮತ್ತು ಪಾಲಿಕೆ ಸಿಬ್ಬಂದಿ ಸೇರಿ ಬ್ಯಾನರ್, ಪೊಸ್ಟರ್ ಹಾಕಬೇಕು. ಮತ್ತು ಪ್ರಚಾರ ನೀಡಲು ಆಟೋ ಮತ್ತು ಮೈಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು. ಜೆ.ಜೆ.ಎಮ್ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳನ್ನು ಕಾರ್ಯ ನಿರ್ವಹಿಸಲು ಕಳುಹಿಸಿಕೊಡಲು ತಿಳಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಉಪ ಆಯುಕ್ತರಾದ ಗದುಗೇಶ್, ಮಹಾನಗರಪಾಲಿಕೆ ಪರಿಸರ ಅಭಿಯಂತರರಾದ ಚಿನ್ಮಯಿ, ಬಸಣ್ಣ, ಮಹಾನಗರಪಾಲಿಕೆ ಕಂದಾಯ ಶಾಖೆಯ ಉಪ ಆಯುಕ್ತ ನಾಗರಾಜ್, ತಾಲ್ಲೂಕು ಆರೋಗ್ಯ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಉಷಾಕುಮಾರಿ, ಆರ್‍ವಿಎಸ್‍ಕೆ ತಂಡದ ವೈದ್ಯಾಧಿಕಾರಿಗಳು, ತಾಲ್ಲೂಕು ಸಿಡಿಪಿಓ ಗಳು ಉಪಸ್ಥಿತರಿದ್ದರು.

ಪ್ಲೊ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.