ದಾವಣಗೆರೆ: ಫಾರ್ಮಾಸಿಸ್ಟ್ ನೌಕರರ ವೇತನ ಹಾಗೂ ಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಇಂದಿನಿಂದಲೇ ಹಂತ ಹಂತವಾಗಿ ಪ್ರತಿಭಟನೆ ಶುರು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್ ಸಂಘದ ಅಧ್ಯಕ್ಷ ಶಿವಾನಂದ ದಳವಾಯಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಹಂತವಾಗಿ ಇಂದಿನಿಂದ 12ರವರೆಗೆ ರಾಜ್ಯದ ಎಲ್ಲಾ ಫಾರ್ಮಾಸಿಸ್ಟ್ ಕಪ್ಪು ಪಟ್ಟಿಯನ್ನು ಧರಿಸಿ ಸೇವೆಗೆ ಅಡಚಣೆಯಾಗದಂತೆ ವಿರೋಧ ವ್ಯಕ್ತಪಡಿಸಲಿದ್ದಾರೆ. ಜನವರಿ 30ರಂದು ಸ್ವತಂತ್ರ ಉದ್ಯಾನವನದಿಂದ ಮಾನ್ಯ ಆಯುಕ್ತರ ಕಚೇರಿಯವರೆಗೆ ಶಾಂತಿಯುತ ರ್ಯಾಲಿ ನಡೆಸಲಾಗುವುದು ಎಂದರು.
ಫಾರ್ಮಸಿ ವ್ಯಾಸಾಂಗ ಮಾಡಿದವರಿಗೆ ಕಾಲ ಕಾಲಕ್ಕೆ ಪದೋನ್ನತಿ ನೀಡದಿರುವುದು ಹಾಗೂ ಫಾರ್ಮಸಿಯನ್ನು ಕೌಶಲ್ಯತೆ ವ್ಯಾಸಾಂಗ ಎಂದು ಸರ್ಕಾರ ಅಂಗೀಕರಿಸಿದೆ. ಕರ್ನಾಟಕ ಸರ್ಕಾರ ಈ ಹುದ್ದೆಯನ್ನು ತಾಂತ್ರಿಕ ಹುದ್ದೆಯೆಂದು ಪರಿಗಣಿಸಿದೆ. ಆದರೆ ಇಲಾಖೆ ತಾಂತ್ರಿಕ ವೇತನ (ಡಿಪ್ಲೊಮಾ ಸ್ಕೇಲ್) ನೀಡಿಲ್ಲ. ಹೀಗಾಗಿ ಹಲವು ಬೇಡಿಕೆ ಈಡೇರಿಕೆಗಾಗಿ ಹಲವು ಹಂತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.