ETV Bharat / state

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯನ್ನು ಕಣ್ತುಂಬಿಕೊಂಡ ಜರ್ಮನಿ ಅಭಿಮಾನಿ.. - ಪ್ರಧಾನಿ ನರೇಂದ್ರ ಮೋದಿ

ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

prime-minister-narendra-modi-has-arrived-in-davangere
ದಾವಣಗೆರೆ:ಪ್ರಧಾನಿ ನರೇಂದ್ರ ಮೋದಿಯನ್ನು ಕಣ್ತುಂಬಿಕೊಂಡ ಜರ್ಮನಿ ಅಭಿಮಾನಿ..
author img

By

Published : Mar 25, 2023, 3:32 PM IST

Updated : Mar 25, 2023, 9:52 PM IST

ಪ್ರಧಾನಿ ನರೇಂದ್ರ ಮೋದಿಯನ್ನು ಕಣ್ತುಂಬಿಕೊಂಡ ಜರ್ಮನಿ ಅಭಿಮಾನಿ..

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು. ಈ ಸಮಾವೇಶದಲ್ಲಿ ಪುಟ್ಟ ಪುಟ್ಟ ಬಾಲಕರು ಮೋದಿ ಮುಖವಾಡ ಧರಿಸಿ, ಬಾಲಕರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ವೇದಿಕೆಗೆ ಆಗಮಿಸುವ ಮುನ್ನ ಮೋದಿಯವರು ಜನರ ಮಧ್ಯೆ ನಡೆದುಕೊಂಡು ಬಂದಿದ್ದು ಎಲ್ಲರ ಗಮನ ಸೆಳೆಯಿತು.

ಇನ್ನು ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟಕ್ಕೆ ಮೊಸರನ್ನ, ಹುಗ್ಗಿ ಪಾಯಸ, ಪಲಾವ್, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ 400 ಊಟದ ಸ್ಟಾಲ್​ಗಳನ್ನು ತೆರೆಯಲಾಗಿತ್ತು.

ದಾವಣಗೆರೆಯಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ಮಹಾಸಂಗಮ ಬೃಹತ್ ಸಮಾವೇಶಕ್ಕೆ ಜರ್ಮನಿ ದೇಶದ ಮೋದಿ ಅಭಿಮಾನಿ ಜೇಕಬ್ ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಣ್ತುಂಬಿಕೊಂಡರು. ಮೋದಿ ಅಭಿಮಾನಿಯಾದ ಜೇಕಬ್ ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ ಬಳಿಯ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತನ್ನ ಕಂಪನಿಯ ಕೂಗಳತೆಯಲ್ಲೇ ಮೋದಿ ಸಮಾವೇಶ ನಡೆಯುತ್ತಿದೆ ಎಂಬ ವಿಷಯ ತಿಳಿದ ಜೇಕಬ್ ಸಮಾವೇಶಕ್ಕೆ ಆಗಮಿಸಿದ್ದರು. ಇನ್ನು ಜೇಕಬ್ ನೊಂದಿಗೆ ಇದ್ದ ಬಾಲಕನೋರ್ವ ಬಿಜೆಪಿಯ ಕಮಲ ಚಿಹ್ನೆ ಮಾದರಿಯಲ್ಲಿ ಹೇರ್ ಸ್ಟೈಲ್​ ಮಾಡಿಸಿಕೊಂಡು ಸಮಾವೇಶಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.

ಇನ್ನು ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕಲಾ ತಂಡಗಳು ಪ್ರದರ್ಶನ ನೀಡಿದವು. ಆದರಲ್ಲಿ ಮಹಿಳೆಯರ ತಮಟೆ ವಾದ್ಯ, ನಾಸಿಕ್ ಡೋಲ್ ಮತ್ತು ಜಾನಪದ ಕಲಾತಂಡಗಳು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದ್ದವು.

ಇದನ್ನೂ ಓದಿ:ಕನ್ನಡ ದೇಶದ ಗೌರವ ಹೆಚ್ಚಿಸುವ ಭಾಷೆ: ಪ್ರಧಾನಿ ಮೋದಿ ಬಣ್ಣನೆ

Last Updated : Mar 25, 2023, 9:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.