ETV Bharat / state

ಚಂದ್ರಶೇಖರ ಮೊಬೈಲ್​ಗೆ ಒಂದೇ ನಂಬರ್​ನಿಂದ ಬಂದಿದ್ವಂತೆ ಹತ್ತಾರು ಕಾಲ್​? - ಹೊನ್ನಾಳಿ ಪೊಲೀಸರು

ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ ಕಾಣೆಯಾದ ದಿನ ಆತನ ಮೊಬೈಲ್​ಗೆ ಒಂದೇ​​ ನಂಬರ್​​ನಿಂದ ಹತ್ತಕ್ಕೂ ಹೆಚ್ಚು ಕರೆ ಹಾಗೂ ಸಂದೇಶ ಬಂದಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

police investigating Chandrashekhar mobile call details
ಚಂದ್ರಶೇಖರ ಸಾವು ಪ್ರಕರಣ
author img

By

Published : Nov 5, 2022, 8:42 PM IST

ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ ಸಾವು ಪ್ರಕರಣ ಸಂಬಂಧ ಆತ ಕಾಣೆಯಾದ ದಿನ ಒಂದೇ ಫೋನ್​​ ನಂಬರ್​​ನಿಂದ ಹತ್ತಕ್ಕೂ ಹೆಚ್ಚು ಸಲ ಕರೆ ಹಾಗೂ ಸಂದೇಶ ಬಂದಿರುವುದು ಬೆಳಕಿಗೆ ಬಂದಿದೆ. ಕರೆ ಹಾಗೂ ಮೆಸೇಜ್ ಮಾಡಿದ್ದವರು ಯಾರು ಎಂಬುದು ನಿಗೂಢವಾಗಿದೆ.

ಅಕ್ಟೋಬರ್ 30ರಂದು ರಾತ್ರಿ 10 ಗಂಟೆಯಿಂದ ನಿರಂತರವಾಗಿ ಒಂದೇ ನಂಬರ್​​ನಿಂದ ಕರೆ ಬಂದಿದೆ. ಹೊನ್ನಾಳಿ ಪೊಲೀಸರು ಆ ನಂಬರ್ ಬಗ್ಗೆ ಮಾಹಿತಿ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಸಿಡಿಆರ್ ತೆಗೆಸಿ ನೋಡಿದಾಗ ಅಕ್ಟೋಬರ್ 30ರಂದು ರಾತ್ರಿ 10 ಗಂಟೆಯಿಂದ ಒಂದೇ ದೂರವಾಣಿ ನಂಬರ್​ನಿಂದ ಕರೆ‌ಗಳು ಮೃತ ಚಂದ್ರಶೇಖರಗೆ ಬಂದಿವೆ ಎಂಬುದು ಗೊತ್ತಾಗಿದೆ.

ಈ ಎಲ್ಲ ಕರೆಗಳು ಚಿಕ್ಕಮಗಳೂರು ತಾಲೂಕಿನ ಕೊಪ್ಪದ ಲೊಕೇಶನ್​ನಿಂದ ಬಂದಿವೆ ಎನ್ನಲಾಗಿದ್ದು, ಮಾಡಿರುವುದು ಯಾರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಚಂದ್ರಶೇಖರ ಸಾವು ಪ್ರಕರಣ: ಡ್ರೋನ್​​​ ಆಪರೇಟರ್ ಶ್ರೀನಿವಾಸ್​ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.