ETV Bharat / state

ಸೂಳೆಕೆರೆ ಶೂಟೌಟ್ : ಆರೋಪಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ತುಂಗಾ'ಗೆ ಸನ್ಮಾನ

ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಶೂಟೌಟ್ ಮಾಡಿ ಕೊಂದ ಆರೋಪಿ ವಾಸವಿದ್ದ ಸ್ಥಳದವರೆಗೆ ಶ್ವಾನ ತುಂಗಾಳನ್ನು ಸನ್ಮಾನಿಸಲಾಯಿತು. ಘಟನಾ ಸ್ಥಳದಿಂದ ಸುಮಾರು 11 ಕಿಲೋಮೀಟರ್ ದೂರದವರೆಗೆ ಓಡಿದ್ದ ಶ್ವಾನ ತುಂಗಾ, ಆರೋಪಿ ಹಿಡಿಯಲು ಸಹಾಯ ಮಾಡಿತ್ತು.

police-dog-tumga-got-honored-by-adgp
ಪೊಲೀಸ್ ಶ್ವಾನ 'ತುಂಗಾ'ಗೆ ಸನ್ಮಾನ
author img

By

Published : Jul 18, 2020, 4:29 AM IST

ದಾವಣಗೆರೆ: ಜಿಲ್ಲೆಯ ನಾಗರಕಟ್ಟೆ ಗ್ರಾಮದ ಚಂದ್ರನಾಯ್ಕ್ ಕೊಲೆ ಪ್ರಕರಣ ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದ್ದ ಡಾಗ್ ಸ್ಕ್ವಾಡ್​​ನ 'ತುಂಗಾ' ಹೆಸರಿನ ಶ್ವಾನವನ್ನು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹೂವಿನಹಾರ ಹಾಕಿ ಸನ್ಮಾನಿಸಿದರು.

ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಶೂಟೌಟ್ ಮಾಡಿ ಕೊಂದ ಆರೋಪಿ ವಾಸವಿದ್ದ ಸ್ಥಳದವರೆಗೆ ಶ್ವಾನ ತುಂಗಾ ಹೋಗಿತ್ತು. ಘಟನಾ ಸ್ಥಳದಿಂದ ಸುಮಾರು 11 ಕಿಲೋಮೀಟರ್ ದೂರದವರೆಗೆ ಓಡಿದ್ದ ಶ್ವಾನ ತುಂಗಾ, ಆರೋಪಿ ಹಿಡಿಯಲು ಸಹಾಯ ಮಾಡಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಪಾಂಡೆ ಅವರಿಗೆ ಎಸ್​ಪಿ‌ ಹನುಮಂತರಾಯ ಅವರು ಶ್ವಾನದ ಕಾರ್ಯದ ಬಗ್ಗೆ ತಿಳಿಸಿದರು‌.

ಪೊಲೀಸ್ ಶ್ವಾನ 'ತುಂಗಾ'ಗೆ ಸನ್ಮಾನ

ಈ ವೇಳೆ ಶ್ವಾನಕ್ಕೆ ಹಾರ ಹಾಕಿದ ಅಮರ್ ಕುಮಾರ್ ಪಾಂಡೆ ಅವರು, ಅದರ ತಲೆ ಸವರಿದರು. ಮಾತ್ರವಲ್ಲ, ಈ ಶ್ವಾನ ನೋಡಿಕೊಳ್ಳುತ್ತಿರುವ ಪ್ರಕಾಶ್ ಹಾಗೂ ಇತರೆ ಇಬ್ಬರು ಸಿಬ್ಬಂದಿಯನ್ನು ಅಭಿನಂದಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ವಾನದ ಕಾರ್ಯ ಶ್ಲಾಘಿಸಿದರು. ಡಾಗ್ ಸ್ಕ್ವಾಡ್ ಸಿಬ್ಬಂದಿಗೆ ಬಹುಮಾನ ನೀಡುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.