ETV Bharat / state

ನಕಲಿ ನಾಣ್ಯ ನೀಡಿ ವಂಚಿಸಿದ್ದ ಖದೀಮರ ಬಂಧನ.. ಆರು ಲಕ್ಷ ವಶಕ್ಕೆ ಪಡೆದ ಪೊಲೀಸರು - ಈಟಿವಿ ಭಾರತ ಕರ್ನಾಟಕ

ಬುನಾದಿ ತೆಗೆಯುವಾಗ ರಾಣಿ ವಿಕ್ಟೋರಿಯಾ ಮುದ್ರೆಯಿರುವ ಅಪಾರ ಪ್ರಮಾಣದ ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ವಂಚಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ.

Police have arrested a thief
ನಕಲಿ ನಾಣ್ಯ ನೀಡಿ ವಂಚಿಸಿದ್ದ ಖದೀಮರ ಬಂಧನ
author img

By

Published : Aug 29, 2022, 2:42 PM IST

ದಾವಣಗೆರೆ : ನಕಲಿ ನಾಣ್ಯ ನೀಡಿ ವಂಚಿಸಿದ್ದ ಖದೀಮರನ್ನು ಜಗಳೂರು ಪೊಲೀಸರು ಬಂಧಿಸಿ ಆರೋಪಿಯಿಂದ ಆರು ಲಕ್ಷ ರೂಪಾಯಿ ನಗದು ಹಾಗು ನಕಲಿ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ (30), ಹನುಮಂತ(52) ಬಂಧಿತ ಆರೋಪಿಗಳು.

ಬುನಾದಿ ತೆಗೆಯುವಾಗ ರಾಣಿ ವಿಕ್ಟೋರಿಯಾ ಮುದ್ರೆಯಿರುವ ಅಪಾರ ಪ್ರಮಾಣದ ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ರಾಯಚೂರು ಮೂಲದ ಕಾಂಟ್ರಾಕ್ಟರ್ ವೀರಣ್ಣ ಎಂಬುವರಿಗೆ ಆರು ಲಕ್ಷ ರೂಪಾಯಿ ವಂಚಿಸಿದ್ದರು. ಈ ಪ್ರಕರಣ ಸಂಬಂಧ ಜಾಡು ಹಿಡಿದು ಹೋದ ಪೊಲೀಸರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಸಾತ್ಪಾಡಿಯಲ್ಲಿ ಆರೋಪಿ ಪ್ರಕಾಶ್ ಮತ್ತು ಹನುಮಂತ ಸಿಕ್ಕಿಬಿದ್ದಿದ್ದಾರೆ.

ಈ ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಆರ್.ಬಿ. ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಬಾಳ ಸಂಗಾತಿ, ಹೆತ್ತ ತಾಯಿ, ಮುದ್ದಾದ ಮಕ್ಕಳನ್ನು ಬರ್ಬರವಾಗಿ ಕೊಂದ ಹಂತಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.