ETV Bharat / state

ದಾವಣಗೆರೆ: ರಾತ್ರಿ ಮನೆ ಮುಂದೆ‌ ಮಲಗಿದ್ದ ವೃದ್ದನ ಹತ್ಯೆ - Criminals killed old man

ಮನೆಯ ಹೊರ ಭಾಗದಲ್ಲಿ ಮಲಗಿದ್ದ ವೃದ್ದನನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ.

Criminals killed old man
ವೃದ್ದನನ್ನು ಕೊಲೆಗೈದ ದುಷ್ಕರ್ಮಿಗಳು
author img

By

Published : Apr 6, 2023, 10:45 PM IST

ದಾವಣಗೆರೆ : ರಾತ್ರಿ ಮನೆ ಮುಂದೆ ನಿದ್ರಿಸುತ್ತಿದ್ದ ವೃದ್ದನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ನಡೆದಿದೆ. ಚಂದ್ರಣ್ಣ(65) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ಗ್ರಾಮ‌‌ದೇವತೆಯ ಹಬ್ಬ ಮುಗಿಸಿ ಮನೆಗೆ ಮುಂದೆ ಮಲಗಿದ್ದ ಚಂದ್ರಣ್ಣ ಅವರನ್ನು ಬೆಳಗಿನ ಜಾವ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ದಾವಣಗೆರೆಯಲ್ಲಿ ಸೊಂಟಕ್ಕೆ ನೋಟು ಕಟ್ಟಿಕೊಂಡು ಸಾಗಣೆ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು

ಚಂದ್ರಣ್ಣನ ಮಗ ನಾಗರಾಜ್​ ಮಾತನಾಡಿ, "ಮುಕ್ತೇನ ಹಳ್ಳಿ ಹನುಮಂತಪ್ಪ ಎಂಬುವವರ ಮನೆಯವರಿಗೂ ನಮಗೂ ಜಮೀನಿನ ವಿಚಾರವಾಗಿ ವ್ಯಾಜ್ಯ ನಡೆಯುತ್ತಿತ್ತು. ಗ್ರಾಮಸ್ಥರು ರಾಜಿ ಸಂಧಾನ ನಡೆಸಿದ್ದರು. ನಮಗೆ ಸೇರಿದ ಇಪ್ಪತ್ತು ಗುಂಟೆ ಜಮೀನು ಮುಕ್ತೇನಹಳ್ಳಿ ಹನುಮಂತಪ್ಪನವರು ವಶಕ್ಕೆ ಪಡೆದಿದ್ದು, ಎರಡು ಬಾರಿ ಜಗಳ ಕೂಡ ನಡೆದಿತ್ತು. ಈ ಹಗೆತನದಿಂದ ನಮ್ಮ ಅಪ್ಪನನ್ನು ಕೊಲೆ ಮಾಡಿದ್ದಾರೆ" ಎಂದು ಆರೋಪಿಸಿದರು.

ಇದನ್ನೂ ಓದಿ : ಕೆರೆಯಲ್ಲಿ ಈಜಲು ಹೋಗಿ ಕುರಿಗಾಹಿ ಸಹೋದರರಿಬ್ಬರು ಸಾವು..

ಎಸ್ಪಿ ಸಿ.ಬಿ.ರಿಷ್ಯಂತ್ ಪ್ರತಿಕ್ರಿಯೆ: ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಪ್ರತಿಕ್ರಿಯಿಸಿ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವಂತೆ ಮೇಲ್ನೋಟಕ್ಕೆ ಕಂಡುಬಂದಿದೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಮಿಸ್ಡ್ ಕಾಲ್ ಮೂಲಕ ಹನಿಟ್ರ್ಯಾಪ್: ವಿಡಿಯೋ ಮಾಡಿ ಬೆದರಿಸಿ ಹಣ ಪೀಕಿದವರು ಈಗ ಅಂದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.