ETV Bharat / state

ಒಂದು ಕೋಣಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮೂರು ಹಳ್ಳಿಯ ಜನ!

ದೇವರ ಕೋಣಕ್ಕಾಗಿ ಮೂರು ಗ್ರಾಮಗಳ ಜನರು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಪ್ರಕರಣ ದಾವಣಗೆರೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ds
ಕೋಣಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು
author img

By

Published : Jan 27, 2021, 4:17 PM IST

ದಾವಣಗೆರೆ: ದೇವರಿಗೆ ಬಿಟ್ಟಿದ್ದ ಒಂದು ಕೋಣಕ್ಕೆ ಮೂರು ಗ್ರಾಮದ ಜನರು ಪಟ್ಟು ಹಿಡಿದಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿಯಲ್ಲಿ ನಡೆದಿದೆ.

ಸಾಸ್ವೆಹಳ್ಳಿ ಗ್ರಾಮಕ್ಕೆ ನಾಲ್ಕು ವರ್ಷಗಳ ಮರಿಕೋಣವು ದಾರಿತಪ್ಪಿ ಬಂದು ಓಡಾಡಿಕೊಂಡಿತ್ತಂತೆ. ಆದ್ದರಿಂದ ಈ ಕೋಣವನ್ನು ಗ್ರಾಮದ ಜನರು ಆಂಜನೇಯ ದೇವಸ್ಥಾನಕ್ಕೆ ದೇವರ ಕೋಣ ಎಂದು ಬಿಟ್ಟಿದ್ದರು. ಇದೀಗ ವರಸೆ ಬದಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಂಬರಗಟ್ಟೆ ಗ್ರಾಮದ ಜನ ಗ್ರಾಮ ದೇವತೆ ದುರ್ಗಾದೇವಿಯು ಉತ್ತರ ಭಾಗದಲ್ಲಿ ನಮ್ಮ ದೇವರ ಕೋಣ ಸಿಗುತ್ತದೆ ಎಂದು ಅಪ್ಪಣೆ ಕೊಟ್ಟಿದ್ದರಿಂದ ನಾವು ಹುಡುಕುತ್ತ ಬಂದೆವು. ಈ ಗ್ರಾಮದಲ್ಲಿ ನಮ್ಮ ಕೋಣ ಸಿಕ್ಕಿದೆ, ಸಾಸ್ವೆಹಳ್ಳಿಯಲ್ಲಿರುವ ಕೋಣ ನಮ್ಮದು ಎಂದು ಪಟ್ಟು ಹಿಡಿದಿದ್ದಾರೆ.

ಇತ್ತ ನ್ಯಾಮತಿ ತಾಲೂಕಿನ ಮಡಿಕೆ ಚೀಲೂರಿನ ಗ್ರಾಮಸ್ಥರು ಕೂಡ ಈ ಕೋಣ ನಮ್ಮ ಗ್ರಾಮದ ದೇವರ ಕೋಣ ಎಂದು ತಕರಾರು ತೆಗೆದಿದ್ದಾರೆ. ಇದರಿಂದ ಸಾಸ್ವೆಹಳ್ಳಿ ಗ್ರಾಮದಲ್ಲಿ ಮೂರು ಗ್ರಾಮಗಳ ಜನರ ನಡುವೆ ವಾದ-ವಿವಾದಗಳು ನಡೆಯುತ್ತಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಕೋಣವನ್ನು ಯಾರು ತೆಗೆದುಕೊಳ್ಳಬೇಕೆಂದು ದೇವರ ಅಪ್ಪಣೆ ಪಡೆಯೋಣ ಎಂಬ ಮಾತುಕತೆ ನಡೆಯಿತು. ಆಗಲೂ ಸಮಸ್ಯೆ ಬಗೆಹರಿಯದ ಕಾರಣ ಹೊನ್ನಾಳಿ ಠಾಣೆ ಪೊಲೀಸರು ಬಂಜರಗಟ್ಟೆ ಹಾಗೂ ಮರಿಗೊಂಡನಹಳ್ಳಿ‌ ಗ್ರಾಮದವರಿಂದ ಸಾಕ್ಷಿ, ಪುರಾವೆ ಕೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಚರ್ಚಿಸಿ ಸಂಧಾನ ಸೂತ್ರ ಅನುಸರಿಸಿ ಮರಿಗೊಂಡನಹಳ್ಳಿ ಗ್ರಾಮದವರ ಮನವೊಲಿಸಿ ಜಂಬರಗಟ್ಟೆ ಗ್ರಾಮದವರಿಗೆ ಕೋಣವನ್ನು ಒಯ್ಯಲು ಅನುಮತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.