ETV Bharat / state

ಅದೃಷ್ಟ ಇದ್ದಲ್ಲಿ ಮುಂದಿನ ಸಿಎಂ ಪರಮೇಶ್ವರ್ ಆಗಬಹುದು: ಶಾಮನೂರು ಶಿವಶಂಕರಪ್ಪ

author img

By

Published : Jan 4, 2023, 8:35 PM IST

Updated : Jan 4, 2023, 9:13 PM IST

ಜನವರಿ 8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್​ನಿಂದ ಎಸ್​ಸಿ, ಎಸ್​ಟಿ ಸಮಾವೇಶ - ಕಾಂಗ್ರೆಸ್​ ಉನ್ನತ ನಾಯಕರ ಸಮಾಗಮ - ಕಾಂಗ್ರೆಸ್​ ಅನುಷ್ಠಾನಗೊಳಿಸಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ಸಮಾವೇಶ

parameshwar
ಜನವರಿ 8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್​ನಿಂದ ಎಸ್​ಸಿ, ಎಸ್​ಟಿ ಸಮಾವೇಶ
ಅದೃಷ್ಟ ಇದ್ದಲ್ಲಿ ಮುಂದಿನ ಸಿಎಂ ಪರಮೇಶ್ವರ್ ಆಗಬಹುದು ಎಂದ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಮಾಜಿ ಡಿಸಿಎಂ ಜಿ ಪರಮೇಶ್ವರ್ ಸಿಎಂ ಏಕೆ ಆಗ್ಬಾರದು ಎಂದು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಜಿ ಪರಮೇಶ್ವರ್ ಪರ ಬ್ಯಾಟ್ ಬೀಸಿದರು.‌ ಚಿತ್ರದುರ್ಗದಲ್ಲಿ ಇದೇ ತಿಂಗಳು 08 ಕ್ಕೆ ನಡೆಯುವ ಐಕ್ಯತಾ ಸಮಾವೇಶ ಪೂರ್ವಭಾವಿ ಸಭೆಗೆ ಭಾಗಿಯಾಗುವ ಮುನ್ನ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಮಾಜಿ ಡಿಸಿಎಂ ಹಾಗು ಶಾಸಕ ಜಿ ಪರಮೇಶ್ವರ್ ಭೇಟಿ ನೀಡಿದದರು.

ಈ ವೇಳೆ ಮಾಧ್ಯಮಗಳು ಎಸ್​ಸಿ, ಎಸ್​ಟಿ ಸಮಾವೇಶ ಮಾಡುತ್ತಿದ್ದೀರಿ, ಮುಂದೆ ದಲಿತ ಸಿಎಂ ಆಗಬಹುದಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ ಅವರು, ಜಿ ಪರಮೇಶ್ವರ್ ಅವರಿಗೆ ಅದೃಷ್ಟ ಎಂಬುದು ಇದ್ದಲ್ಲಿ ಮುಂದಿನ ಸಿಎಂ ಅವರು ಕೂಡ ಆಗಬಹುದು. ಇವರೇ ಸಿಎಂ ಆಗಬೇಕು ಎಂದು ಎಲ್ಲೂ, ಯಾರೂ ಹೇಳಿಲ್ಲ ಎನ್ನುವ ಮೂಲಕ ಮೂಲಕ ಶಿವಶಂಕರಪ್ಪ ಮಾಜಿ ಡಿಸಿಎಂ ಜಿ ಪರಮೇಶ್ವರ್ ಪರ ಬ್ಯಾಟ್ ಬೀಸಿದರು.

ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿಯನ್ನು ನಾಯಿ ಮರಿಗೆ ಹೋಲಿಸಿದ ವಿಚಾರ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಸಿದ್ದರಾಮಯ್ಯ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ ಎಂದರು. ಇನ್ನು, ಸಚಿವ ಶ್ರೀರಾಮುಲು ಅವರು ಕಾಂಗ್ರೆಸ್ ನಾಯಕರನ್ನು ಬೆಕ್ಕು ಇಲಿಗೆ ಹೋಲಿಕೆ ಮಾಡಿದ ವಿಚಾರವಾಗಿ ನಾನು ಪ್ರತಿಕ್ರಿಯಿಸಲ್ಲ. ಯಾರು ಏನು ಹೇಳುತ್ತಾರೆ ಎಂಬುದನ್ನೇ ಗಮನಿಸಲು ಆಗಲ್ಲ. ಕೆಲವು ವೈಯುಕ್ತಿಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ. ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳ ಬಗ್ಗೆ ಗಮನ ಹರಿಸಬೇಕಿದೆ. ಅಂತವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಮಗೆ ಸಮಯವಿಲ್ಲ. ನಮಗೆ ಬೇಕಾದಷ್ಟು ಕೆಲಸ ಕಾರ್ಯಗಳು ಇವೆ ಎಂದು ಪರಮೇಶ್ವರ್ ನಯವಾಗಿ ಜಾರಿಕೊಂಡರು.

ಜನವರಿ 8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್​ನಿಂದ ಎಸ್​ಸಿ, ಎಸ್​ಟಿ ಸಮಾವೇಶ: ಜನವರಿ 8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ನಿಂದ ಎಸ್​ಸಿ, ಎಸ್​ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೀಸಲಾತಿ ಹೆಚ್ಚಳ ನಿಜಾಂಶದ ಬಗ್ಗೆ ಸಮಾವೇಶದಲ್ಲಿ ತಿಳಿಸುತ್ತೇವೆ. ಮೀಸಲಾತಿ ಹೆಚ್ಚಳಕ್ಕೆ ಅವಕಾಶವೇ ಇಲ್ಲ ಎಂದು ಕೇಂದ್ರ ಸಚಿವ ಹೇಳಿದ್ದಾರೆ. ರಾಜಕೀಯ ಉದ್ದೇಶದಿಂದ ಹೆಚ್ಚಳ ಮಾಡಿದ್ದೇವೆ ಎಂದು ಬಿಜೆಪಿ ಪ್ರಚಾರ ಪಡೆಯುತ್ತಿದ್ದಾರೆ. ಈ ವಿಚಾರವನ್ನು ಎಸ್​ಸಿ, ಎಸ್​ಟಿ ಸಮುದಾಯಕ್ಕೆ ತಿಳಿಸುತ್ತೇವೆ ಎಂದರು.

ಸಮಾವೇಶಕ್ಕೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​, ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜಿವಾಲಾ, ವೇಣುಗೋಪಾಲ್ ರಾವ್, ಬಿ ಕೆ ಹರಿಪ್ರಸಾದ್​, ಎಂ ಬಿ ಪಾಟೀಲ್​ ಮತ್ತು ಬೇರೆ ರಾಜ್ಯಗಳಿಂದ ನಾಯಕರು ಬರಲಿದ್ದಾರೆ ಎಂದು ತಿಳಿಸಿದರು. ಎಸ್​ಸಿ, ಎಸ್​ಟಿ ಸಮುದಾಯಗಳ ಅನೇಕ ಜ್ವಲಂತ ಸಮಸ್ಯೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್​ ಈ ಸಮುದಾಯಗಳಿಗಾಗಿ ತಂದ ಬಹುತೇಕ ಯೋಜನೆಗಳು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕ ವಿಚಾರ ಮನವರಿಕೆ ಮಾಡುವ ಅಗತ್ಯ ಇದೆ. ಹಾಗೇ ಮುಂದಿನ ಚುನಾವಣೆಯನ್ನು ದೃಷ್ಠಿಕೋನದಲ್ಲಿ ಇಟ್ಟುಕೊಂಡು ಸಮಾವೇಶ ಮಾಡಲಾಗುತ್ತಿದೆ. ಹಾಗೇ ಈ ಸಮುದಾಯಗಳ ಜೊತೆ ಕಾಂಗ್ರೆಸ್​ ಎಂದಿನಿಂದ ಬೆಂಬಲವಾಗಿ ಎಂಬುದರ ಬಗ್ಗೆಯೂ ಚರ್ಚಿಸಲಾಗುತ್ತದೆ. ಈವರೆಗೆ ಈ ಸಮುದಾಯಗಳು ಕಾಂಗ್ರೆಸ್​ನೊಂದಿಗೆ ನಿಂತಿವೆ. ಮುಂದೆಯೂ ಬೆಂಬಲ ಕೊಡುವಂತೆ ಸಮಾವೇಶದಲ್ಲಿ ಕೇಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಪ್ರಿಯಾಂಕ್​​ ಸೋಲಿಸುವ ಮೂಲಕ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ನಾಯಕತ್ವಕ್ಕೆ ಟಾಂಗ್ ಕೊಡಲು ಯಶಸ್ವಿಯಾಗುತ್ತಾ ಬಿಜೆಪಿ?!

Last Updated : Jan 4, 2023, 9:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.